Asianet Suvarna News Asianet Suvarna News

ಮಾರ್ಕೆಟಿಂಗ್ ಕಂಪನಿಯಲ್ಲಿ ಚಾಣಾಕ್ಷ, ದೇಶಾದ್ಯಂತ ಲಕ್ಷಾಂತರ ಜನರ ಉದ್ಯೋಗದಾತ ಡಾ.ಅಫ್ಸರ್ ಹಿಂದೂಸ್ಥಾನಿ!

ತಂದೆಯ ನಿರಾಕರಣೆ ನಡುವೆಯೂ ಮಾರ್ಕೆಟಿಂಗ್ ಕಂಪನಿಯಲ್ಲಿ 600 ರೂ. ಸಂಬಳಕ್ಕೆ ಕೆಲಸ ಆರಂಭಿಸಿ ಮಾರ್ಕೆಟಿಂಗ್ ನಲ್ಲಿ ಚಾಣಾಕ್ಷನಾಗಿ ಸ್ವಂತ ಉದ್ಯಮದೊಂದಿಗೆ ದೇಶಾದ್ಯಂತ ಲಕ್ಷಾಂತರ ಜನರಿಗೆ ಉದ್ಯೋಗದಾತರಾಗಿರುವ ಡಾ. ಅಫ್ಸರ್ ಹಿಂದೂಸ್ಥಾನಿ. 

The Story Of Chikkamagaluru Businessman Dr Afsar Hindustani gvd
Author
First Published Aug 11, 2023, 7:26 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಆ.11): ತಂದೆಯ ನಿರಾಕರಣೆ ನಡುವೆಯೂ ಮಾರ್ಕೆಟಿಂಗ್ ಕಂಪನಿಯಲ್ಲಿ 600 ರೂ. ಸಂಬಳಕ್ಕೆ ಕೆಲಸ ಆರಂಭಿಸಿ ಮಾರ್ಕೆಟಿಂಗ್ ನಲ್ಲಿ ಚಾಣಾಕ್ಷನಾಗಿ ಸ್ವಂತ ಉದ್ಯಮದೊಂದಿಗೆ ದೇಶಾದ್ಯಂತ ಲಕ್ಷಾಂತರ ಜನರಿಗೆ ಉದ್ಯೋಗದಾತರಾಗಿರುವ ಡಾ. ಅಫ್ಸರ್ ಹಿಂದೂಸ್ಥಾನಿ. ಚಿಕ್ಕಮಗಳೂರು ಜಿಲ್ಲೆ ಮಾತ್ರವಲ್ಲ ಇಡೀ ದೇಶದಲ್ಲಿ ಇಂದು ಹೆಸರುವಾಸಿಯಾಗಿದ್ದಾರೆ.  ಚಿಕ್ಕಮಗಳೂರು  ಜಿಲ್ಲಾಸ್ಪತ್ರೆಯ ನಿವೃತ್ತ ಆರೋಗ್ಯ ಪರಿವೀಕ್ಷಕ ಎಸ್.ಕೆ.ಭಾಷಾ ಮತ್ತು ಜೀನತ್ ಆರಾ  ಪುತ್ರ ಅಫ್ಸರ್ ಅಹಮದ್. ಎಸ್.ಕೆ.ಭಾಷಾ ಮತ್ತು ಜೀನತ್ ಆರಾ  2ನೇ ಮಗನೇ ಅಫ್ಸರ್ ಅಹಮದ್. 22ನೇ ವಯಸ್ಸಿನಲ್ಲಿ ಚಿಕ್ಕಮಗಳೂರು ನಗರದ ಅನ್ನಪೂರ್ಣ ಎಲೆಕ್ಟ್ರಾನಿಕ್ಸ್‌ನಲ್ಲಿ ಅಂದು ಚಾಲ್ತಿಯಲ್ಲಿದ್ದ ಪೇಜರ್‌ಗೆ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಆರಂಭಿಸಿ ಇಂದು ಸ್ವಂತ ಕಂಪನಿಯನ್ನ ಆರಂಭಿಸಿದ್ದಾರೆ. 

ವಾಕ್ಚಾತುರ್ಯವೇ ಬಂಡಾವಳ: ವಾಕ್ಚಾತುರ್ಯದ ಮೂಲಕ ಉತ್ತಮ ಹೆಸರು ಗಳಿಸಿ, ಅದನ್ನೇ ಬಂಡವಾಳ ಮಾಡಿಕೊಂಡಿದ್ದರಿಂದ ಮಾರ್ಕೆಟಿಂಗ್ ಕಿಚ್ಚು ಹೆಚ್ಚಾಯಿತು. ಸರ್ಕಾರಿ ಉದ್ಯೋಗ ಎಂದರೆ ರೋಟಿ, ಕಪಡಾ ಔರ್ ಮಖಾನ್ ಎಂಬಂತೆ ಊಟ, ಬಟ್ಟೆ, ಸಣ್ಣ ಸೂರಿಗೆ ಸೀಮಿತ ವಾಗಬೇಕಾಗುತ್ತದೆಂಬ ಅರಿವು ಬಿಟ್ಟರೆ ಹೆಚ್ಚು ಸಾಧನೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ತಂದೆಯ ಜೀವನ ಶೈಲಿ ನೋಡಿ ಅವ್ರ ಕಲ್ಪನೆಯಲ್ಲಿತ್ತು. ಮಿಲ್ಕ್ (ಎಂಐಎಲ್‌ಕೆ ) ಇದ್ದರೆ ಮಾತ್ರ ಜಾಬ್ ಎಂಬ ಸತ್ಯ ಅರಿತು ಪೇಜರ್ ಜತೆಗೆ ಕಾಳುಮೆಣಸು ವ್ಯಾಪಾರ ಆರಂಭಿಸಿ ಮೂಡಿಗೆರೆಯಲ್ಲಿ ವ್ಯಾಪರಕ್ಕೆ ಹೋದಾಗ ಹೋಟೆಲ್‌ನಲ್ಲಿ ಕಾಫಿ ಕುಡಿಯುವ ಸಂದರ್ಭ ಮಾರ್ಕೆಟಿಂಗ್‌ಗೆ ಬೇಕಾಗಿದ್ದಾರೆ ಎಂಬ ಜಾಹೀರಾತು ಕಣ್ಣಿಗೆ ಬಿದ್ದಾಗ ಅಲ್ಲೆ ಅಂಚೆ ಕಚೇರಿಯಿಂದಲೇ ಇನ್‌ಲ್ಯಾಂಡ್ ಲೆಟರ್ ಮೂಲಕ ಅಪ್ಲಿಕೇಷನ್ ಹಾಕಿದ್ರು. 

ತರಗತಿಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು: ಸಮವಸ್ತ್ರ ಕಡ್ಡಾಯಗೊಳಿಸಿದ ಕಾಲೇಜು ಆಡಳಿತ ಮಂಡಳಿ!

15 ದಿನದ ನಂತರ ಮಂಗಳೂರಿನಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟೀವ್  ಇಂಟ್ರ್ಯಿವ್ ಲೆಟರ್ ಕೈಸೇರುತ್ತೆ.ಆಲ್ದೂರು ಬಿಟ್ಟು ಒಬ್ಬರೇ ದೂರ ಪ್ರಯಾಣ ಮಾಡಿಲ್ಲದ ಅಫ್ಸರ್ 100 ರೂ.ನೊಂದಿಗೆ ಮಂಗಳೂರಿಗೆ ತೆರಳಿ ಬಸ್‌ಚಾರ್ಜ್, ಜೆರಾಕ್ಸ್ ಸೇರಿ ಊಟಕ್ಕೂ ಕಷ್ಟ ಪಡುವಂತಹ ಸ್ಥಿತಿ ಇದ್ರು  600 ರೂಪಾಯಿ ಸಂಬಳಕ್ಕೆ ಕೆಲಸ ಒಪ್ಪಿಕೊಂಡು ಮನೆಗೆ ಬಂದರು. ಸತತ ಎರಡು ವರ್ಷ ವಾರಕ್ಕೊಮ್ಮೆ ಪ್ರತಿ ಮಂಗಳವಾರ ಬೆಳಗ್ಗೆ 5ಕ್ಕೆ ಚಿಕ್ಕಮಗಳೂರಿನಿಂದ ಮಂಗಳೂರಿಗೆ ತೆರಳಿ ತರಬೇತಿ ಪಡೆಯುತ್ತಾರೆ.  ಅಲ್ಲಿ ಮಾರ್ಕೆಟಿಂಗ್‌ನಲ್ಲಿ ನಿನಗೆ ಭವಿಷ್ಯವಿದೆ ಎಂದು ಹೇಳಿದ ಅಲ್ಲಿಯವರ ಮಾತಿನಂತೆ ಮಾರ್ಕೆಂಟಿಗ್ ಜಗತ್ತಿಗೆ ದುಮ್ಮುಕುತ್ತಾರೆ.1997ರಲ್ಲಿ ಸೇಲ್ಸ್ ಎಕ್ಸಿಕ್ಯೂಟೀವ್ ಆಗಿ 600 ರೂಪಾಯಿ ಸಂಬಳಕ್ಕೆ ಸೇರಿದ ಅಫ್ಸರ್‌ಗೆ 2002ರಿಂದ 2010ರವರೆಗೆ ಪ್ರತಿ ತಿಂಗಳು ಅದೇ ಕಂಪನಿಯಲ್ಲಿ ತಿಂಗಳಿಗೆ 2 ಲಕ್ಷ  ಸಂಭಾವನೆ ಪಡೆಯುವ ಜತೆಗೆ ವಹಿವಾಟಿನ ಆಧಾರದಲ್ಲಿ 1.5 ಲಕ್ಷ ಕಮೀಷನ್ ಗಿಟ್ಟಿಸಿ ಒಟ್ಟಾರೆ ತಿಂಗಳಿಗೆ 3.5 ಲಕ್ಷ ರೂ. ಕೈ ಸೇರುವಂತಾಯಿತು.

ಶಿಕ್ಷಣ ಸಂಸ್ಥೆ ಆರಂಭ: ಅರಂಭವಾದ ಮಾರ್ಕೆಂಟಿಗ್ ಬದುಕಿನ ಜೊತೆಯಲ್ಲಿ ಶಿಕ್ಷಣ ಸಂಸ್ಥೆ ಆರಂಭ ಮಾಡಿದ್ರು ಶಿಕ್ಷಣ ಸಂಸ್ಥೇಯೊಂದಿಗೆ ವಿಸ್ಟಾರ್ ಎಂಬ ಮಾರ್ಕೇಂಟಿಗ್ ಕಂಪೆನಿಯನ್ನು ಪ್ರಾರಂಭಿಸ್ತಾರೆ.ಮೊದಲು ಚಿಕ್ಕಮಗಳೂರಿನಲ್ಲಿ ಕಾರ್ಯಚಟುವಟಿಕೆ ಪ್ರಾರಂಭವಾದರೂ ನಂತರದ ದಿನಗಳಲ್ಲಿ ರಾಜ್ಯ ವಿಸ್ತಾರವಾಗುತ್ತೇ. ಅಲ್ಲಿಂದ ನಿರಂತರ ದೇಶದ ಜಮ್ಮುವಿನಿಂದ ಹಿಡಿದು ಕೇರಳದ ವರೆಗೂ ಹಬ್ಬಿದೆ ಈ ಸಂಸ್ಥೆ. ದುಬೈನಲ್ಲಿಯೂ ವಿಸ್ಟಾರ್ ಮಾರ್ಕೆಂಟಿಗ್ ಈಗಾಗಲೇ ಪ್ರಾರಂಭವಾಗಿದ್ದು ಅಲ್ಲಿಯೂ ಉತ್ತಮ ವ್ಯವಹಾರ ಮುಂದುವರೆಯುತ್ತಿದೆ. ವಿಸ್ಟಾರ್ ನಲ್ಲಿ ಗ್ರಾಹಕರಿಗೆ ನೀಡೋ ಪ್ರಾಡಕ್ಟ್ ಗಳನ್ನು ತಾವೇ ಸ್ವತಃ ತಯಾರಿಸುತ್ತಿದ್ದಾರೆ. ರಾಜಸ್ಥಾನದ ಜಯಪುರದಲ್ಲಿ ಪ್ಯಾಕ್ಟರಿಯನ್ನು ತೆರೆದಿದ್ದಾರೆ.ಈಗ ಯಶ್ವಸ್ವಿ ಉದ್ಯಮಿ ಅನ್ನೋದನ್ನು ಗುರುತಿಸಿಕೊಂಡಿದ್ಧಾರೆ.

ರಾಜ್ಯದಲ್ಲೇ ಅತಿ ಹೆಚ್ಚು ಸರ್ಕಾರಿ ಭೂಮಿ ಮಂಜೂರಾತಿ ಚಿಕ್ಕಮಗಳೂರಿನಲ್ಲಿ: 15 ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ಆರಂಭ

ಅಯುರ್ವೇದದ ಪ್ರಾಡಕ್ಟ್ ಗಳೇ ವಿಸ್ಟಾರ್ ಸಂಸ್ಥೆಯ ಪ್ರಮುಖ ಪ್ರಾಡಕ್ಟ್ ಗಳು. ಇದರ ಜೊತೆಗೆ ಇದೀಗ ಕಾರದಪುಡಿ,ಗರಂಮಸಾಲ ಪ್ರಾಡಕ್ಟ್ ಗಳು ಸೇರಿಕೊಂಡಿವೆ.ಒಳ್ಳೆಯ ಬೇಡಿಕೆಯಿದ್ದು ಗುಣಮಟ್ಟವನ್ನು ಅಪ್ಸರ್ ಹಿಂದೂಸ್ಥಾನಿ ಅವರೇ  ಪರೀಕ್ಷಿಸುತ್ಥಾರೆ. ದೇಶದಲ್ಲಿ 75 ಫ್ರಾಂಚೈಸಿಗಳಿವೆ. 9 ಉತ್ಪನ್ನಗಳನ್ನು ಆರಂಭಿಸಿದ್ದು 56 ಪ್ರಾಡೆಕ್ಟ್‌ಗಳಿವೆ. 2021ರಲ್ಲಿ 10 ಕೋಟಿ ರೂ. ವಿ ಸ್ಟಾರ್  ಸಂಸ್ಥೆಯಲ್ಲಿ ದೇಶಾದ್ಯಂತ ಒಂದು ಲಕ್ಷ ಜನ ಸ್ವಯಂ ಉದ್ಯೋಗ ಮಾಡಿಕೊಂಡು ಜೀವನ ನಡೆಸುತ್ತಿದ್ದು ಇವರಲ್ಲಿ ಶೇ.60 ರಷ್ಟು ಮಹಿಳೆಯರಿದ್ದಾರೆ. 2026 ರೊಳಗೆ 5 ಲಕ್ಷ ಮಂದಿಗೆ ಸ್ವಉದ್ಯೋಗ ನೀಡುವ ಗುರಿ ಹೊಂದಲಾಗಿದೆ. ನಮ್ಮ ಎಲ್ಲ ಪ್ರಾಡೆಕ್ಟ್‌ಗಳಿಗೂ ಸರ್ಕಾರದಿಂದ ಆಯುಷ್ ಸರ್ಟಿಫಿಕೇಟ್ ದೊರೆತಿದೆ .ಹಲವು ಪ್ರಶಸ್ತಿಗಳು ಇವ್ರ ಕೈಸೇರಿದೆ. 

Follow Us:
Download App:
  • android
  • ios