Asianet Suvarna News Asianet Suvarna News

ಮೋದಿ ಇದ್ರೆ ದೇಶ ಸೇಫ್‌, ಅಟಲ್‌ ಜೀ ರೀತಿಯೇ ಕೆಲ್ಸ ಮಾಡ್ತಿದ್ದಾರೆ ಎಂದ ಅಭಿಮಾನಿ ಮೊಹಮದ್‌ ಗೌಸ್‌!

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಂಗಳೂರಿಗೆ ಆಗಮಿಸಿದ ಬೆನ್ನಲ್ಲಿಯೇ ಇಡೀ ರಾಜಧಾನಿ ಮೋದಿ ಮೇನಿಯಾದಲ್ಲಿ ಮುಳುಗಿದೆ. ಈ ನಡುವೆ ಮೋದಿಯ ವಿಶೇಷ ಅಭಿಮಾನಿ ಶಿವಾಜಿನಗರದ ಮೊಹಮದ್‌ ಗೌಸ್‌ ಮಾತನಾಡಿದ್ದು, ಮೋದಿ ಇದ್ದರೆ ದೇಶ ಸೇಫ್‌, ಅಟಲ್‌ ಜೀ ರೀತಿಯಲ್ಲಿಯೇ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
 

Pm Narendra Modi Fan mohammad gouse from shivajinagar on BJP and central government Work san
Author
First Published Nov 11, 2022, 11:12 AM IST

ಬೆಂಗಳೂರು (ನ.11): ಯಾವುದೇ ಜಾತಿ, ಮತ, ಧರ್ಮದ ಬೇಧವಿಲ್ಲದೆ ಮೋದಿ ಕೆಲಸ ಮಾಡುತ್ತಾರೆ. ಅವರು ಅಧಿಕಾರದಲ್ಲಿದರೆ ದೇಶ ಸೇಫ್‌. ಅಟಲ್‌ಜೀ ರೀತಿಯಲ್ಲಿಯೇ ಅವರು ಕೆಲಸ ಮಾಡುತ್ತಿದ್ದಾರೆ.. ಹೀಗೆ ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸಕ್ಕೆ ಫುಲ್‌ ಮಾರ್ಕ್ಸ್ ನೀಡಿದ್ದು ಅವರ ವಿಶೇಷ ಅಭಿಮಾನಿ ಮೊಹಮದ್‌ ಗೌಸ್‌. ಶಿವಾಜಿನಗರದವರಾದ ಮೊಹಮದ್‌ ಗೌಸ್‌, ತಾವು ಮೋದಿಯ ಪರಮ ಅಭಿಮಾನಿ ಎಂದು ಹೇಳಿಕೊಳ್ಳುವ ಅವರು,  ಮೋದಿಯವರನ್ನ ಬಹಳ ಹತ್ತಿರದಿಂದ ನೋಡಿದ್ದು ಖುಷಿ ಆಯಿತು. ಹಿಂದು ಆಗ್ಲಿ ಮುಸ್ಲಿಂ ಆಗ್ಲಿ ಕ್ರಿಶ್ಚಿಯನ್ ಆಗ್ಲಿ ಮೋದಿ ಅಧಿಕಾರದಲ್ಲಿ ಇದ್ದರೆ ಒಳ್ಳೆಯದು. ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾವುದೇ ಗಲಾಟೆಯಾಗಿಲ್ಲ. ಏಳು ಎಂಟು ವರ್ಷದಿಂದ ದೇಶದಲ್ಲಿ ಯಾವುದೇ ಗಲಾಟೆಯಾಗಿಲ್ಲ ಇದೇ ಮೋದಿ ಅವರ ಆಡಳಿತದ ಬಗ್ಗೆ ಹೇಳುತ್ತದೆ ಎಂದು ಹೇಳಿದ್ದಾರೆ. ಮೋದಿ ಪ್ರಧಾನಿಯಾಗಿದ್ದರೆ ಖಂಡಿತಾ ಮುಂದಿನ ಜನರೇಷನ್‌ಗೆ ಒಳ್ಳೆಯದು ಆಗುತ್ತದೆ. ಅಟಲ್‌ ಜೀ ಚೆನ್ನಾಗಿ ಕೆಲಸ ಮಾಡಿದ್ದರು. ಈಗ ಮೋದಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ.  ಮೋದಿ ಸೌದಿಗೆಲ್ಲ ಹೋಗಿ ಬಂದಿದ್ದಾರೆ. ಕಾಂಗ್ರೆಸ್ ಗೆ ಸ್ವಲ್ಪ ಮೈಂಡ್ ಸರಿಯಿಲ್ಲ. ಅಧಿಕಾರದಲ್ಲಿದ್ದಾಗ ಬರೀ ವೋಟ್‌ ಬ್ಯಾಂಕ್‌ ರಾಜಕಾರಣ ಮಾಡಿತ್ತಷ್ಟೇ ಎಂದು ಅವರು ಹೇಳಿದ್ದಾರೆ.

ಮೋದಿ, ಬಿಜೆಪಿ ಮುಸ್ಲಿಂ ವಿರೋಧಿಯೇ ಎನ್ನುವ ಪ್ರಶ್ನೆಗೆ ಮಾತನಾಡಿದ ಅವರು, ಹಾಗೇನೂ ಇಲ್ಲ. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ನೋಡಿದ್ದಾರೆ. ಅಲ್ಪಸಂಖ್ಯಾತರಿಗೆ ಯಾರಾದರೂ ಮೋಸ ಮಾಡಿದ್ದರೆ ಅದು ಕಾಂಗ್ರೆಸ್‌. ಇಲ್ಲಿಯವರೆಗೂ ಕಾಂಗ್ರೆಸ್‌ ಅಲ್ಪ ಸಂಖ್ಯಾತರಿಗೆ ಸಚಿವ ಸ್ಥಾನವನ್ನೇ ಕೊಟ್ಟಿಲ್ಲ. ಹತ್ತು ಜನರಿದ್ರೆ ಒಂದು ಅನ್ನೋ ರೀತಿಯಲ್ಲಿ ಕೊಡ್ತಾರೆ. ಬಿಜೆಪಿ ಇದ್ದರೆ ಅಲ್ಪ ಸಂಖ್ಯಾತರಿಗೆ ಬೆಲೆ ಸಿಗುತ್ತದೆ ಎಂದು ಹೇಳಿದ್ದಾರೆ.

Vande Bharat Express: ದಕ್ಷಿಣ ಭಾರತದ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಮೋದಿ ಚಾಲನೆ

ಮುಂದಿನ ಚುನಾವಣೆಯಲ್ಲಿ ಬಿಜೆಪಿಯೇ ಬರಬೇಕು: ನೆಕ್ಸ್ಟ್ ಬಿಜೆಪಿ ಬರಬೇಕು. ನಾನು ಬಿಜೆಪಿ ಅಭಿಮಾನಿಯೂ ಹೌದು ಮೋದಿ ಅಭಿಮಾನಿಯೂ ಹೌದು. ಮೋದಿಗೆ ಗಾಡ್ ಗಿಫ್ಟ್ ಇದೆ. ಮೋದಿಗೆ ಅಲ್ಲಾ ಗಿಫ್ಟ್ ಇದೆ. ಅವರು ಅಧಿಕಾರದಲ್ಲಿ ಇರೋದ್ರಿಂದಲೇ ದೇಶ ಉದ್ಧಾರ ಆಗ್ತಿದೆ. ಅವರು ತನ್ನ ಉದ್ಧಾರ ಮಾಡಿಕೊಳ್ಳುತ್ತಿಲ್ಲ. ದೇಶದ ಉದ್ಧಾರ ಮಾಡ್ತಿದ್ದಾರೆ. ಮೋದಿ ಅಧಿಕಾರದಲ್ಲಿದ್ದು ಇಷ್ಟು ವರ್ಷವಾಗಿದೆ ಯಾವುದೇ ಗಲಾಟೆ ಆಗಿಲ್ಲ. ಆಗಿನಿಂದಲೂ ನಾನು ಬಿಜೆಪಿ ಜೊತೆಗೆ ಇದ್ದೇನೆ. ಈಗಲೂ ಮೋದಿ ಜೊತೆಗೆ ಇದ್ದೇನೆ ಎಂದು ಮೋದಿ ಕೌಟ್ ಔಟ್ ಹಿಡಿದುಕೊಂಡು ಶಿವಾಜಿನಗರದ ಮೊಹಮದ್‌ ಗೌಸ್‌ ಹೇಳಿದ್ದಾರೆ.

Modi Bengaluru Visit Live Updates: ವಂದೇ ಭಾರತ್, ಕಾಶಿ ದರ್ಶನ ರೈಲಿಗೆ ಚಾಲನೆ ನೀಡಿದ ಪ್ರಧಾನಿ...

Follow Us:
Download App:
  • android
  • ios