ಮೋಜಿನಿಂದ ಕನ್ನಡ ಕಲೀರಿ: ಪ್ರಧಾನಿ ಮೋದಿ

‘ಭಾಷೆಗಳನ್ನು ಕಲಿಯುವುದನ್ನು ಮೋಜಿನ ಚಟುವಟಿಕೆಯನ್ನಾಗಿ ಮಾಡುವ ಸೃಜನಶೀಲ ವಿಧಾನ, ಈ ಸಂದರ್ಭದಲ್ಲಿ ಸುಂದರವಾದ ಕನ್ನಡ ಭಾಷೆ’ ಎಂದು ಟ್ವೀಟ್‌ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ. 

PM Narendra Modi Appreciates Kannada Pictorial Alphabet Letters grg

ನವದೆಹಲಿ(ಫೆ.07):  ಕನ್ನಡವನ್ನು ಕ್ರಿಯಾಶೀಲವಾಗಿ ಕಲಿಯುವುದು ಹೇಗೆ ಎಂಬ ಸಚಿತ್ರ ವರ್ಣಮಾಲಾ ಅಕ್ಷರಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೋಮವಾರ ಕರ್ನಾಟಕ ಪ್ರವಾಸ ಕೈಗೊಂಡ ಬೆನ್ನಲ್ಲೇ ಅವರು ಈ ಶ್ಲಾಘನೆ ಮಾಡಿ ‘ಮೋಜಿನಿಂದ ಕನ್ನಡ ಕಲಿಯಿರಿ’ ಎಂದು ಸಲಹೆ ನೀಡಿದ್ದಾರೆ.

 

ಎಸ್‌.ಕಿರಣ್‌ ಕುಮಾರ್‌ ಎಂಬುವರು ಸಚಿತ್ರ ವರ್ಣಮಾಲಾ ಅಕ್ಷರಗಳ ಫೋಟೋ ಟ್ವೀಟ್‌ ಮಾಡಿ, ‘49ರಲ್ಲಿ 46 ಚಿತ್ರಗಳು ಸುಳಿವುಗಳನ್ನು ಹೊಂದಿವೆ. ಮಕ್ಕಳಿಗೆ ಕನ್ನಡ ವರ್ಣಮಾಲೆಗಳನ್ನು ಕಲಿಸುವ ಅದ್ಭುತ ವಿಧಾನ. ನೀವು ಎಷ್ಟು ಊಹಿಸಬಹುದು? 40ಕ್ಕಿಂತ ಕಡಿಮೆಯಿದ್ದರೆ ಕಳವಳಕಾರಿ’ ಎಂದು ಟ್ವೀಟ್‌ ಮಾಡಿದ್ದರು. ಅವರು ಲಗತ್ತಿಸಿದ್ದ ಚಿತ್ರದಲ್ಲಿ ಅ ಅಕ್ಷರದಲ್ಲೇ ಅಳಲು, ಆ ಅಕ್ಷರದಲ್ಲಿ ಆನೆ- ಹೀಗೆ 46 ಅಕ್ಷರಗಳು ಚಿತ್ರದಲ್ಲೇ ಪದಗಳ ಸುಳಿವು ನೀಡುತ್ತಿದ್ದವು.

ಕೇಂದ್ರ ಬಜೆಟ್‌ನ ಶ್ರೀ ಅನ್ನಕ್ಕೆ ಕರ್ನಾಟಕ ಪ್ರೇರಣೆ: ಮೋದಿ

ಇದನ್ನು ಟ್ವೀಟರ್‌ನಲ್ಲಿ ಶ್ಲಾಘಿಸಿರುವ ಮೋದಿ, ‘ಭಾಷೆಗಳನ್ನು ಕಲಿಯುವುದನ್ನು ಮೋಜಿನ ಚಟುವಟಿಕೆಯನ್ನಾಗಿ ಮಾಡುವ ಸೃಜನಶೀಲ ವಿಧಾನ, ಈ ಸಂದರ್ಭದಲ್ಲಿ ಸುಂದರವಾದ ಕನ್ನಡ ಭಾಷೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಇನ್ನು, ಮೋದಿ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಮೈಸೂರು ಮೂಲದ ಖ್ಯಾತ ಕಲಾವಿದ ಬಾದಲ್‌ ನಂಜುಂಡ ಸ್ವಾಮಿ, ''Omg, ಇದು ನನ್ನ ಕಾರ್ಯ.. ಧನ್ಯವಾದಗಳು ಪ್ರಧಾನಿ ಮೋದಿ ಜೀ. ಜೈ ಕರ್ನಾಟಕ'' ಎಂದು ಮೋದಿ ಟ್ವೀಟ್‌ನ ಸ್ಕ್ರೀನ್‌ಶಾಟ್‌ ಹಾಕಿಕೊಂಡು ಪೋಸ್ಟ್‌ ಮಾಡಿದ್ದಾರೆ. 

ಬಾದಲ್‌ ನಂಜುಂಡಸ್ವಾಮಿ ಅವರ ಟ್ವೀಟ್‌ ಹೀಗಿದೆ ನೋಡಿ..

Latest Videos
Follow Us:
Download App:
  • android
  • ios