ಕೇಂದ್ರ ಬಜೆಟ್‌ನ ಶ್ರೀ ಅನ್ನಕ್ಕೆ ಕರ್ನಾಟಕ ಪ್ರೇರಣೆ: ಮೋದಿ
ಇನ್ನು ಮುಂದೆ ಸಿರಿಧಾನ್ಯವು ಶ್ರೀ ಅನ್ನವಾಗಿ ದೇಶಕ್ಕೆ ಪರಿಚಯವಾಗಲಿದೆ. ಶ್ರೀ ಅನ್ನ ಅಂದರೆ ಆಹಾರಧಾನ್ಯಗಳಲ್ಲೇ ಶ್ರೇಷ್ಠವಾದದ್ದು. ಕರ್ನಾಟಕವು ರಾಗಿ, ನವಣೆ, ಸಾಮೆ, ಸಜ್ಜೆ, ಬಿಳಿ ಜೋಳ, ಬರಗು, ಕುಟ್ಟು ಸೇರಿ ಹಲವು ಸಿರಿಧಾನ್ಯಗಳನ್ನು ಕರ್ನಾಟಕದಲ್ಲಿ ಬೆಳೆಯಲಾಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ಶ್ರೀ ಅನ್ನದ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಮೂಲಕ ಬರಪೀಡಿತ ಕರ್ನಾಟಕದ ರೈತರಿಗೆ ಅನುಕೂಲ ಆಗಲಿದೆ ಎಂದು ಅಭಿಪ್ರಾಯಪಟ್ಟ ಪ್ರಧಾನಿ ನರೇಂದ್ರ ಮೋದಿ.
ತುಮಕೂರು(ಫೆ.07): ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಿದ ‘ಶ್ರೀ ಅನ್ನ’ ಹೆಸರಿಗೆ ಕರ್ನಾಟಕವೇ ಪ್ರೇರಣೆ. ಕರ್ನಾಟಕದ ಜನ ಸಿರಿಧಾನ್ಯಗಳ ಮಹತ್ವವನ್ನು ಅರ್ಥ ಮಾಡಿಕೊಂಡಿದ್ದಾರೆ. ಅದೇ ಕಾರಣಕ್ಕೆ ಇಲ್ಲಿನ ಜನ ಆ ಆಹಾರ ಧಾನ್ಯಗಳನ್ನು ಸಿರಿಧಾನ್ಯ ಎಂದು ಕರೆಯುತ್ತಾರೆ. ಕರ್ನಾಟಕದ ಜನರ ಭಾವನೆಯನ್ನು ಗೌರವಿಸಿಕೊಂಡು ದೇಶದಲ್ಲಿ ಶ್ರೀ ಅನ್ನವನ್ನು ಪ್ರಚುರಪಡಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಗುಬ್ಬಿ ತಾಲೂಕು ನಿಟ್ಟೂರು ಹೋಬಳಿ ಬಿದರೆಹಳ್ಳ ಕಾವಲ್ ಬಳಿಯ ಎಚ್‌ಎಎಲ್ ಲಘು ಹೆಲಿಕಾಪ್ಟರ್ ತಯಾರಿಕಾ ಘಟಕ ಲೋಕಾರ್ಪಣೆ ಹಾಗೂ ಜಲ ಜೀವನ್ ಮಿಷನ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಸೋಮವಾರ ಮಾತನಾಡಿದರು.
ಇನ್ನು ಮುಂದೆ ಸಿರಿಧಾನ್ಯವು ಶ್ರೀ ಅನ್ನವಾಗಿ ದೇಶಕ್ಕೆ ಪರಿಚಯವಾಗಲಿದೆ. ಶ್ರೀ ಅನ್ನ ಅಂದರೆ ಆಹಾರಧಾನ್ಯಗಳಲ್ಲೇ ಶ್ರೇಷ್ಠವಾದದ್ದು. ಕರ್ನಾಟಕವು ರಾಗಿ, ನವಣೆ, ಸಾಮೆ, ಸಜ್ಜೆ, ಬಿಳಿ ಜೋಳ, ಬರಗು, ಕುಟ್ಟು ಸೇರಿ ಹಲವು ಸಿರಿಧಾನ್ಯಗಳನ್ನು ಕರ್ನಾಟಕದಲ್ಲಿ ಬೆಳೆಯಲಾಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ಶ್ರೀ ಅನ್ನದ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಮೂಲಕ ಬರಪೀಡಿತ ಕರ್ನಾಟಕದ ರೈತರಿಗೆ ಅನುಕೂಲ ಆಗಲಿದೆ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ರಾಗಿ ಮುದ್ದೆ ಹಾಗೂ ರಾಗಿ ರೊಟ್ಟಿ ವಿಚಾರ ಪ್ರಸ್ತಾಪಿಸಿದ ಅವರು, ಅದರ ಸವಿಯನ್ನು ಯಾರಾದರೂ ಮರೆಯಲು ಸಾಧ್ಯವೇ? ಎಂದರು.
HAL ಹೆಸರಿನಲ್ಲಿ ಕುಟುಕಿದವರಿಗೆ ಗುಬ್ಬಿ ಹೆಲಿಕಾಪ್ಟರ್ ಘಟಕ ಉತ್ತರ, ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ!
ಇದೇ ವೇಳೆ ತಮ್ಮ ಭಾಷಣದಲ್ಲಿ ಸಿದ್ಧಗಂಗಾ ಮಠದ ತ್ರಿವಿಧ ದಾಸೋಹ ಹಾಗೂ ಗುಬ್ಬಿ ಚನ್ನಬಸವೇಶ್ವರ ಸ್ವಾಮಿ ಹಾಗೂ ಚಿದಂಬರಾಶ್ರಮ ಕ್ಷೇತ್ರಗಳ ಹೆಸರನ್ನೂ ಪ್ರಸ್ತಾಪಿಸಿದ ಅವರು, ತುಮಕೂರು ಆಧ್ಯಾತ್ಮದ ಜೊತೆಗೆ ಆಧುನಿಕತೆಯಿಂದಲೂ ಗಮನಸೆಳೆಯುತ್ತಿದೆ ಎಂದರು.
ಶಕ್ತಿಮಾನ್ ಭಾರತ-ಪಿಎಂ: ಶಕ್ತಿಮಾನ್ ಭಾರತ ನಿರ್ಮಿಸುವ ನಿಟ್ಟಿನಲ್ಲಿ ಈ ಬಾರಿಯ ಬಜೆಟ್ ಮಂಡಿಸಲಾಗಿದ್ದು, ಹಳ್ಳಿಗಳು, ಬಡವರು, ಆದಿವಾಸಿಗಳು, ಮಹಿಳೆಯರು, ಯುವಜನರಿಗಾಗಿ ಈ ಬಜೆಟ್‌ನಲ್ಲಿ ಅನೇಕ ಗಟ್ಟಿನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.
ಗುಬ್ಬಿ HAL ಘಟಕ ಪ್ರಧಾನಿ ಮೋದಿ ಅಡಗಲ್ಲು ಹಾಕಿ ಮೋದಿ ಉದ್ಘಾಟನೆ, ಇದು ಪರಿವರ್ತನೆ ಎಂದ ಸಿಎಂ ಬೊಮ್ಮಯಿ!
ಈ ಬಾರಿ ಸರ್ವಸ್ಪರ್ಶಿ, ಸರ್ವ ಹಿತಕಾರಿ, ಸರ್ವರನ್ನೊಳಗೊಂಡಿರುವ, ಸರ್ವ ಸುಖಕಾರಿ, ಸರ್ವ ಪ್ರಿಯ ಬಜೆಟ್ ಮಂಡಿಸಲಾಗಿದೆ. ಈ ಬಾರಿಯ ಕೇಂದ್ರ ಬಜೆಟ್ ಉದ್ಯೋಗಾವಕಾಶಗಳ ಜತೆಗೆ, ಸ್ವಯಂ ಉದ್ಯೋಗದ ಅವಕಾಶಗಳನ್ನೂ ಹೆಚ್ಚಿಸುತ್ತದೆ ಎಂದರು.
ಕೇಂದ್ರ ಸರ್ಕಾರವು ಪ್ರತಿ ಬಡವರಿಗೆ ಆಶ್ರಯ ಒದಗಿಸಲು 70 ಸಾವಿರ ಕೋಟಿ ರುಪಾಯಿ ಒದಗಿಸುತ್ತಿದೆ. ಪಿಎಂ ಕಿಸಾನ್ ಸಮ್ಮಾನ್ ಶಕ್ತಿ ಯೋಜನೆಯಡಿ ಸಣ್ಣ ರೈತರಿಗೆ ಅನುಕೂಲವಾಗಲಿದ್ದು, ಬೀದಿ ಬದಿ ವ್ಯಾಪಾರಿಗಳಿಗೆ ಗ್ಯಾರಂಟಿ ರಹಿತ ಸಾಲ ಸೌಲಭ್ಯ, ಕಮ್ಮಾರ, ಅಕ್ಕಸಾಲಿಗ, ಬಡಗಿ, ಶಿಲ್ಪಿ ಮುಂತಾದ ಕುಶಲ ಕರ್ಮಿಗಳಿಗೆ ವಿಕಾಸ ಯೋಜನೆಯಡಿ ಕೌಶಲ್ಯ ವೃದ್ಧಿಸುವ ನಿಟ್ಟಿನಲ್ಲಿ ಸಹಾಯ ನೀಡಲಾಗುತ್ತಿದೆ ಎಂದರು.