ನೀವಿದನ್ನು ಕೇಳಿದರೆ ಅಚ್ಚರಿಪಡುತ್ತೀರಿ. ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಈಕೆ ಬಹಳ ಫೇಮಸ್ಸಾಗಿದ್ದಾಳೆ. ಎಂಥಾ ಸುಮಧುರ ಧ್ವನಿ ಈಕೆಯದು. ಈ ಧ್ವನಿಯಲ್ಲಿ ನಾವು ದೇವರಲ್ಲಿನ ಪ್ರೀತಿಯನ್ನು ಕಾಣಬಹುದು. ಈಕೆ ಜರ್ಮನಿಯ ಹೆಣ್ಣುಮಗಳು. ಹೆಸರು ಕಾಸ್ಮಿ. ಅವಳಿಗೆ 21 ವರ್ಷ. ದುರದೃಷ್ಟವಶಾತ್‌ ಕಣ್ಣು ಕಾಣಿಸುವುದಿಲ್ಲ. ಆದರೆ ಅವಳ ಧ್ವನಿಯಲ್ಲಿ ದೈವತ್ವವೇ ಇದೆ’ ಎಂದು ಮೋದಿ ಶ್ಲಾಘಿಸಿದ್ದಾರೆ.

ನವದೆಹಲಿ(ಸೆ.25): ಕನ್ನಡ, ಸಂಸ್ಕೃತ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಹಾಡುಗಳನ್ನು ಹಾಡುವ ಜರ್ಮನಿಯ ಅಂಧ ಯುವತಿಯ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ಮನ್‌ ಕೀ ಬಾತ್‌ನಲ್ಲಿ ಕೊಂಡಾಡಿದ್ದಾರೆ.

‘ನೀವಿದನ್ನು ಕೇಳಿದರೆ ಅಚ್ಚರಿಪಡುತ್ತೀರಿ. ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಈಕೆ ಬಹಳ ಫೇಮಸ್ಸಾಗಿದ್ದಾಳೆ. ಎಂಥಾ ಸುಮಧುರ ಧ್ವನಿ ಈಕೆಯದು. ಈ ಧ್ವನಿಯಲ್ಲಿ ನಾವು ದೇವರಲ್ಲಿನ ಪ್ರೀತಿಯನ್ನು ಕಾಣಬಹುದು. ಈಕೆ ಜರ್ಮನಿಯ ಹೆಣ್ಣುಮಗಳು. ಹೆಸರು ಕಾಸ್ಮಿ. ಅವಳಿಗೆ 21 ವರ್ಷ. ದುರದೃಷ್ಟವಶಾತ್‌ ಕಣ್ಣು ಕಾಣಿಸುವುದಿಲ್ಲ. ಆದರೆ ಅವಳ ಧ್ವನಿಯಲ್ಲಿ ದೈವತ್ವವೇ ಇದೆ’ ಎಂದು ಮೋದಿ ಶ್ಲಾಘಿಸಿದ್ದಾರೆ.

ಕರ್ನಾಟಕದ ಹೊಯ್ಸಳ ದೇಗುಲಗಳಿಗೆ ವಿಶ್ವ ಮಾನ್ಯತೆ: ಮನ್‌ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ

‘ಕಾಸ್ಮಿ ಯಾವತ್ತೂ ಭಾರತಕ್ಕೆ ಬಂದಿಲ್ಲ. ಆದರೆ ಇಲ್ಲಿನ ಸಂಗೀತವನ್ನು ಅಭ್ಯಾಸ ಮಾಡಿದ್ದಾಳೆ. ಅವಳು ಕನ್ನಡ, ಮಲಯಾಳಂ, ತಮಿಳು, ಸಂಸ್ಕೃತ, ಹಿಂದಿ, ಅಸ್ಸಾಮಿ, ಬಂಗಾಳಿ, ಮರಾಠಿ, ಉರ್ದು ಹೀಗೆ ಅನೇಕ ಭಾರತೀಯ ಭಾಷೆಗಳ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಾಳೆ. ಅವಳ ಸಾಧನೆಯನ್ನು ನಾನು ಮನಸಾರೆ ಶ್ಲಾಘಿಸುತ್ತೇನೆ’ ಎಂದು ಹೇಳಿದ ಮೋದಿ, ತಮ್ಮ ಭಾಷಣದ ನಡುವೆ ಆಕೆಯ ಕನ್ನಡ ಹಾಡನ್ನು ಕೇಳಿಸಿದರು.

ಭಾರತದ ಸಂಗೀತ ಹಾಗೂ ಸಂಸ್ಕೃತಿಗೆ ಕಾಸ್ಮಿ ಮಾರುಹೋಗಿದ್ದಾಳೆ. 5-6 ವರ್ಷಗಳಿಂದ ಅವಳು ಇಲ್ಲಿನ ಸಂಗೀತವನ್ನು ಅಭ್ಯಾಸ ಮಾಡಿದ್ದಾಳೆ. ತಬಲಾ ಕೂಡ ನುಡಿಸುತ್ತಾಳೆ. ಅವಳ ಸಾಧನೆ ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿಯಾಗಿದೆ ಎಂದು ಮೋದಿ ಹೇಳಿದರು.