7 ತಿಂಗಳ ಮಗು ಜೊತೆ ಸಾಗುತ್ತಿದ್ದ ದಂಪತಿ ಕಾರಿನ ಮೇಲೆ ಪುಂಡನ ದಾಳಿ, ಬೆಂಗಳೂರಲ್ಲಿ ಆತಂಕಕಾರಿ ಘಟನೆ
7 ತಿಂಗಳ ಮಗುವಿನ ಜೊತೆ ಸಂಚರಿಸುತ್ತಿದ್ದ ದಂಪತಿಯ ಕಾರಿನ ಮೇಲೆ ಬೈಕ್ ಸವಾರನೊಬ್ಬ ಭೀಕರ ದಾಳಿ ನಡೆಸಿದ್ದಾರೆ. ಭಯದಿಂದ ಮಗು ಹಾಗೂ ಪತ್ನಿ ಚೀರಾಡುತ್ತಿದ್ದರೂ ಕಲ್ಲು ಹಾಗೂ ವೈಪರ್ ಮೂಲಕ ಸವಾರ ದಾಳಿ ನಡೆಸಿದ ಘಟನೆ ಸೆರೆಯಾಗಿದೆ.
ಬೆಂಗಳೂರು(ಆ.20) ಕಂಠಪೂರ್ತಿ ಕುಡಿದ ಬೈಕ್ ಸವಾರು ಬೆಂಗಳೂರಿನ ಸರ್ಜಾಪುರದಲ್ಲಿ 7 ತಿಂಗಳ ಮಗುವಿನ ಜೊತೆ ಸಾಗುತ್ತಿದ್ದ ದಂಪತಿ ಕಾರಿನ ಮೇಲೆ ಭೀಕರ ದಾಳಿ ನಡೆಸಿದ ಘಟನೆ ವರದಿಯಾಗಿದೆ. ಈ ಪುಂಡನ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ. ಬಾಗಿಲು ತೆಗಿಯೋ, ಲೇ ಎಂದು ಅವಾಚ್ಯ ಶಬ್ದಗಳಿಂದ ಬೈದ ಬೈಕ್ ಸವಾರ, ಕಾರಿನ ಗಾಜಿನ ಮೇಲೆ ದಾಳಿ ನಡೆಸಿದ್ದಾನೆ. ಕಲ್ಲಿನಿಂದ, ವೈಪರ್ ಮೂಲಕ ಭೀಕರ ದಾಳಿಗೆ ಮಗು ಹಾಗೂ ದಂಪತಿಗಳು ಭಯಭೀತರಾಗಿದ್ದಾರೆ. ಮಗುವಿದೆ ಎಂದರೂ ಕುಡಿದ ಮತ್ತಿನಲ್ಲಿ ಮತ್ತೆ ಮತ್ತೆ ದಾಳಿ ನಡೆಸಿದ್ದಾರೆ. ಮಗು ಹಾಗೂ ಮಹಿಳೆ ಚೀರಾಟ ಹಾಗೂ ಭೀಕರ ದಾಳಿ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕೊರಮಂಗದ ಬಾರ್‌ನಲ್ಲಿ ಬೌನ್ಸರ್ ಆಗಿ ಕೆಲಸ ಮಾಡುತ್ತಿದ್ದಾನೆ ಎನ್ನಲಾದ ಈ ಬೈಕ್ ಸವಾರ ಕಂಠಪೂರ್ತಿ ಕುಡಿದು ವೇಗವಾಗಿ ಬೈಕ್ ಓಡಿಸುಕೊಂಡು ಸಾಗಿದ್ದಾರೆ. ಸರ್ಜಾಪುರದ ಬಳಿಕ ದಂಪತಿಗಳ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ದಂಪತಿಗಳ ಕಾರಿನ ಮೇಲೆ ದಾಳಿಗೆ ಮುಂದಾಗಿದ್ದಾನೆ. ರಸ್ತೆಯಲ್ಲಿ ಕಾರಿನ ಮೇಲೆ ದಾಳಿ ಮಾಡಿದ ಬೈಕ್ ಸವಾರ ತನ್ನ ಶಕ್ತಿ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.
ಕಣ್ಣೆದುರೇ ಪ್ರೀತಿಯ ಅಪ್ಪನ ಮೇಲೆ ದಾಳಿ: ಆಘಾತದಿಂದ ಕುಸಿದು ಬಿದ್ದ 14 ವರ್ಷದ ಪುತ್ರಿ ಸಾವು!
ಕಾರಿಗೆ ಡಿಕ್ಕಿ ಹೊಡೆದ ಬಳಿಕ ಕಾರಿನಲ್ಲಿರುವ ದಂಪತಿಗಳ ವಿರುದ್ಧ ದಾಳಿಗೆ ಮುಂದಾಗಿದ್ದಾನೆ. ಈ ವೇಳೆ ಕಾರಿನೊಳಗಿರುವ ವ್ಯಕ್ತಿ ಕಾರಿನೊಳಗೆ ಮಗುವಿದೆ ಎಂದು ಬೇಡಿಕೊಂಡಿದ್ದಾನೆ. ಆದರೆ ಇದ್ಯಾವುದನ್ನೂ ಕೇಳಿಸದ ಪುಂಡ, ಬಾಗಿಲು ತೆಗೆಯುವಂತೆ ರಂಪಾಟ ಮಾಡಿದ್ದಾನೆ. ಆದರೆ ಬಾಗಿಲು ತರೆಯದೇ ಪತ್ನಿ ಹಾಗೂ ಮಗುವನ್ನು ಸುರಕ್ಷಿತವಾಗಿರಿಸಲು ಪ್ರಯತ್ನಿಸಲಾಗಿದೆ. ಆದರೆ ಕಾರಿನ ಮುಂಭಾಗಕ್ಕೆ ಬಂದ ಪುಂಡ, ಕಾರಿನ ವೈಪರ್ ಕಿತ್ತು ದಾಳಿ ಮಾಡಿದ್ದಾನೆ. ಬಳಿಕ ಕಲ್ಲಿನಿಂದ ದಾಳಿ ಮಾಡಿದ್ದಾನೆ.
ಈ ದಾಳಿಗೆ ಮಗು ಬೆಚ್ಚಿ ಬಿದ್ದಿದೆ. ಪತ್ನಿ ಚೀರಾಡಿದ್ದಾಳೆ. ವ್ಯಕ್ತಿ ಕೂಡ ಭಯಭೀತಗೊಂಡಿದ್ದಾನೆ. ಇತರ ಸವಾರರು ಪಂಡನ ತಡೆಯಲು ಯತ್ನಿಸಿದರೂ ಸತತ ದಾಳಿ ಮಾಡಿದ್ದಾನೆ. 7 ತಿಂಗಳ ಮಗು ಕೂಡ ಭಯದಿಂದ ಚೀರಾಡಿದೆ. ಈ ಘಟನೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಇತ್ತ ಬೆಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ಪುಂಡನ ಅರೆಸ್ಟ್ ಮಾಡಿದ್ದಾರೆ. ಈತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ಈ ರೀತಿಯ ಘಟನೆಗಳು ಮರುಕಳಿಸುತ್ತಿದೆ. ಪುಂಡರ ಅಟ್ಟಹಾಸ ಹೆಚ್ಚಾಗುತ್ತಿದೆ. ಮಹಿಳೆಯರು ಸೇರಿದಂತೆ ವಾಹನ ಸವಾರರ ಮೇಲೆ ದಾಳಿ ನಡೆಸುತ್ತಿರುವ ಘಟನೆಗಳು ವರದಿಯಾಗಿದೆ. ಇದೇ ವೇಳೆ ಬೆಂಗಳೂರು ಪೊಲೀಸರು ತುರ್ತು ಅಗತ್ಯದಲ್ಲಿ 112ಕ್ಕೆ ಕರೆ ಮಾಡಲು ಮನವಿ ಮಾಡಿದ್ದಾರೆ.
ಹವಾ ಸೃಷ್ಟಿಸಲು ಮಾರಕಾಸ್ತ್ರ ಹಿಡಿದು ಪುಂಡಾಟ: 4 ಬಂಧನ