ಮಹಿಳೆಯರ ಉಚಿತ ಪ್ರಯಾಣ ಶಕ್ತಿ ಯೋಜನೆ ಅವ್ಯವಸ್ಥೆ ಪ್ರಶ್ನಿಸಿ ಕಾನೂನು ವಿದ್ಯಾರ್ಥಿಗಳು ಕರ್ನಾಟಕ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದಾರೆ. ಶಕ್ತಿ ಯೋಜನೆಯಿಂದ‌ ಬಸ್‌ಗಳಲ್ಲಿ ಜನದಟ್ಟಣೆ ಹೆಚ್ಚಿದೆ. ಅಲ್ಲದೆ, ಸಾರಿಗೆ ಬಸ್‌ಗಳಲ್ಲಿ ಸೀಟಿಗಾಗಿ ಹೊಡೆದಾಟ ನಡೆಯುತ್ತಿದೆ ಎಂದು ಹೈಕೋರ್ಟ್‌ಗೆ ಸಲ್ಲಿಸಿರೋ ಪಿಐಎಲ್‌ನಲ್ಲಿ ವಿವರಿಸಲಾಗಿದೆ. 

ಬೆಂಗಳೂರು (ಜುಲೈ 31, 2023): ರಾಜ್ಯದ ಕಾಂಗ್ರೆಸ್‌ ರ್ಸಾರ ತನ್ನ ಗ್ಯಾರಂಟಿಯಾದ ಶಕ್ತಿ ಯೋಜನೆಯನ್ನು ಈಗಾಗಲೇ ಜಾರಿಗೊಳಿಸಿದೆ. ಇದರಿಂದ ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವಂತಾಗಿದೆ. ಆದರೆ,ಇದರಿಂದ ಬಸ್‌ಗಳಲ್ಲಿ ಅವ್ಯವಸ್ಥೆ ಉಂಟಾಗುತ್ತಿದ್ದು, ಮಹಿಳೆಯರ ಹೊಡೆದಾಟದ ವಿಡಿಯೋಗಳು ವೈರಲ್‌ ಆಗುತ್ತಿದೆ. ಈ ಹಿನ್ನೆಲೆ, ಈ ಅವ್ಯವಸ್ಥೆಗಳನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಲಾಗಿದೆ.

ಮಹಿಳೆಯರ ಉಚಿತ ಪ್ರಯಾಣ ಶಕ್ತಿ ಯೋಜನೆ ಅವ್ಯವಸ್ಥೆ ಪ್ರಶ್ನಿಸಿ ಕಾನೂನು ವಿದ್ಯಾರ್ಥಿಗಳು ಕರ್ನಾಟಕ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದಾರೆ. ಶಕ್ತಿ ಯೋಜನೆಯಿಂದ‌ ಬಸ್‌ಗಳಲ್ಲಿ ಜನದಟ್ಟಣೆ ಹೆಚ್ಚಿದೆ. ಅಲ್ಲದೆ, ಸಾರಿಗೆ ಬಸ್‌ಗಳಲ್ಲಿ ಸೀಟಿಗಾಗಿ ಹೊಡೆದಾಟ ನಡೆಯುತ್ತಿದೆ ಎಂದು ಹೈಕೋರ್ಟ್‌ಗೆ ಸಲ್ಲಿಸಿರೋ ಪಿಐಎಲ್‌ನಲ್ಲಿ ವಿವರಿಸಲಾಗಿದೆ. 

ಇದನ್ನು ಓದಿ: ಗಗನಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಕೇಸ್‌: ಕಾಂಗ್ರೆಸ್‌ ಶಾಸಕ ಗೋಪಾಲ್‌ ಕಾಂಡಾ ಖುಲಾಸೆಗೊಳಿಸಿದ ಕೋರ್ಟ್‌

ಅಲ್ಲದೆ, ಶಕ್ತಿ ಯೋಜನೆಯಿಂದ ಹಿರಿಯ ನಾಗರಿಕರು, ಮಕ್ಕಳು ಬಸ್ ಹತ್ತಲಾಗುತ್ತಿಲ್ಲ. ಕೆಲವೆಡೆ ಬಸ್ ಹತ್ತಲಾಗದೇ ವಿದ್ಯಾರ್ಥಿಗಳು ಬಿದ್ದ ಘಟನೆ ನಡೆದಿವೆ. ಹಾಗೂ, ಶಾಲಾ ಕಾಲೇಜು ಹಾಗೂ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ಸರಿಯಾದ ವೇಳೆಗೆ ಹೋಗಲಾಗುತ್ತಿಲ್ಲ. ಜತೆಗೆ, ಒಂದೇ ವಾರದಲ್ಲಿ ತೆರಿಗೆದಾರರ 100 ಕೋಟಿ ಹಣ ಯೋಜನೆಗೆ ಬಳಕೆಯಾಗಿದೆ. ಇದರಿಂದ, ವರ್ಷಕ್ಕೆ 3200 ರಿಂದ 3400 ಕೋಟಿ ರೂಪಾಯಿ ನಷ್ಟವಾಗಲಿದೆ ಎಂದೂ ಹೈಕೋರ್ಟ್‌ಗೆ ಸಲ್ಲಿಸಿರೋ ಪಿಐಎಲ್‌ನಲ್ಲಿ ಹೇಳಲಾಗಿದೆ.

ಈ ಹಿನ್ನೆಲೆ, ಟಿಕೆಟ್ ಖರೀದಿಸಿದವರಿಗೆ ಶೇ.50 ರಷ್ಟು ಸೀಟ್ ಮೀಸಲಿಡಬೇಕು. ಹಾಗೂ, ದೂರದ ಊರುಗಳಿಗೆ ನಿಂತು ಪ್ರಯಾಣಿಸಲು ಅವಕಾಶ ನೀಡಬಾರದು. ಮಕ್ಕಳು, ವೃದ್ಧರ ಬಸ್ ಪ್ರವೇಶಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಪಿಐಎಲ್ ಮೂಲಕ ಹೈಕೋರ್ಟ್‌ಗೆ ಕಾನೂನು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. 

ಇದನ್ನೂ ಓದಿ: Breaking: ಮೋದಿ ಸರ್‌ನೇಮ್‌ ಕೇಸ್‌: ಗುಜರಾತ್‌ ಹೈಕೋರ್ಟ್‌ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ ಮೊರೆ ಹೋದ ರಾಹುಲ್‌ ಗಾಂಧಿ

ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಜ್ಯೋತಿ ಯೋಜನೆಗೆ ಆಗಸ್ಟ 5 ರಂದು ಚಾಲನೆ ದೊರೆಯಲಿದ್ದು, ಜಿಲ್ಲೆಯ 3.10 ಲಕ್ಷ ವಿದ್ಯುತ್ ಫಲಾನುಭವಿಗಳು ಇದರ ಲಾಭ ಪಡೆಯಲಿದ್ದಾರೆಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ತಿಳಿಸಿದರು. ಬಾಗಲಕೋಟೆ ಜಿಲ್ಲಾ ಪಂಚಾಯತ್‌ ಸಭಾ ಭವನದಲ್ಲಿ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಾದ ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹಲಕ್ಷ್ಮೀ ಹಾಗೂ ಯುವನಿಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು 200 ಯುನಿಟ್ ಉಚಿತವಾಗಿ ನೀಡುವ ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 437482 ವಿದ್ಯುತ್ ಗ್ರಾಹಕರ ಪೈಕಿ 310589 ಫಲಾನುಭವಿಗಳು ನೊಂದಾಯಿಸಿದ್ದು, ಶೇ.70.99 ರಷ್ಟು ಪ್ರಗತಿಯಾಗಿದೆ ಎಂದೂ ಹೇಳಿದ್ದಾರೆ. ನೋಂದಣಿಗೆ 1,26,893 ಬಾಕಿ ಉಳಿಸಿದ್ದು, ಕ್ರಮಕೈಗೊಳ್ಳಲು ಹೆಸ್ಕಾಂ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಇದನ್ನೂ ಓದಿ: 10 ಸೆಕೆಂಡ್‌ಗೂ ಕಡಿಮೆ ಸಮಯ ವಿದ್ಯಾರ್ಥಿನಿಯ ಖಾಸಗಿ ಅಂಗ ಮುಟ್ಟಿದ್ದು ದೌರ್ಜನ್ಯವಲ್ಲ: ಇಟಲಿ ಕೋರ್ಟ್‌ ತೀರ್ಪು