Asianet Suvarna News Asianet Suvarna News

Reservation: ಪಂಚಮಸಾಲಿಗೆ 2ಎ ಮೀಸಲಾತಿ ನೀಡದಂತೆ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆ

ರಾಜ್ಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ವಿಘ್ನ
ಪಂಚಮಸಾಲಿ ಉಪಜಾತಿಗೆ 2ಎ ಮೀಸಲಾತಿ ನೀಡದಂತೆ ಪಿಐಎಲ್‌ ಸಲ್ಲಿಕೆ
ಮೀಸಲಾತಿ ಘೋಷಣೆಗೆ ಸರ್ಕಾರಕ್ಕೆ ಇಂದೇ ಕೊನೆಯ ದಿನ ಗಡುವು ಎಂದು ಗುರುಗಿದ ಜಯಮೃತ್ಯುಂಜಯ ಸ್ವಾಮೀಜಿ

PIL filed in High Court not to give 2A reservation to Panchmasali sat
Author
First Published Dec 29, 2022, 12:02 PM IST

ಬೆಂಗಳೂರು (ಡಿ.29):  ರಾಜ್ಯದಲ್ಲಿ ಪಂಚಮಸಾಲಿ ಉಪಜಾತಿಗೆ 2ಎ ಮೀಸಲಾತಿ ನೀಡದಂತೆ ಹೈಕೋರ್ಟ್‌ ಪಿಐಎಲ್ ಸಲ್ಲಿಕೆಯಾಗಿದೆ. ಈ ಕುರಿತಂತೆ ರಾಘವೇಂದ್ರ ಡಿ.ಜಿ. ಎಂಬುವರ ಪಿಐಎಲ್ ವಿಚಾರಣೆ ಮಾಡಲಾಗುತ್ತಿದೆ. ಈ ವಿಚಾರಣೆ ವೇಳೆ ಸರ್ಕಾರದ ಪರವಾಗಿ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ್ ನಾವದಗಿ ಅವರು ಮೀಸಲಾತಿ ಕುರಿತು ಮಧ್ಯಂತರ ವರದಿ ಸಲ್ಲಿಕೆಯಾಗಿದೆ ಎಂದು ಮಾಹಿತಿ ಸಲ್ಲಿಸಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಲಿಂಗಾಯತ ಪಂಚಮಸಾಲಿಗೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಎರಡು ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ಈ ಕುರಿತಂತೆ ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಆಯೋಗ ಮಧ್ಯಂತರ ವರದಿ ಸಲ್ಲಿಸಿದೆ. ಮಧ್ಯಂತರ ವರದಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿದೆ. ಸರ್ಕಾರ ವರದಿ ಪರಿಶೀಲಿಸಿ ಇನ್ನೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ವರದಿಯ ಪ್ರತಿ ಸಲ್ಲಿಸಲು ಅಡ್ವೋಕೇಟ್‌ ಜನರಲ್‌  ಕಾಲಾವಕಾಶ  ಕೋಡಿದ್ದಾರೆ.

ಸರ್ಕಾರ ತರಾತುರಿಯಲ್ಲಿ ಮೀಸಲಾತಿ ಬಗ್ಗೆ ತೀರ್ಮಾನಿಸುವ ಸಾಧ್ಯತೆ ಇದೆ. ಮೀಸಲಾತಿ ಸಿಗುವುದು ಖಚಿತವೆಂದು ಯತ್ನಾಳ್ ಹೇಳಿದ್ದಾರೆ. ಹೀಗಾಗಿ ಅರ್ಜಿಯ ತುರ್ತು ವಿಚಾರಣೆ ಅಗತ್ಯವಿದೆ. ಅರ್ಜಿದಾರರ ಪರ ವಕೀಲ ಹೆಚ್.ವಿ.ಮಂಜುನಾಥ್ ವಾದ ಮಂಡಿಸಿದ್ದಾರೆ. ಹೈಕೋರ್ಟ್ ನಿಂದ ಅರ್ಜಿಯ ವಿಚಾರಣೆಯನ್ನು ಜನವರಿ ಮೊದಲ ವಾರಕ್ಕೆ ನಿಗದಿಪಡಿಸಲಾಗಿದೆ.

News Hour Special: ಎಲೆಕ್ಷನ್ ಟೈಮಲ್ಲಿ 'ಪಂಚಮಸಾಲಿ ಕದನ': ಕೂಡಲಸಂಗಮದ ಶ್ರೀಗಳು ಹೇಳಿದ್ದೇನು?

ಇಂದೇ ಮೀಸಲಾತಿ ಕೊಡುವಂತೆ ಸ್ವಾಮೀಜಿ ಪಟ್ಟು: ಬೆಳಗಾವಿಯಲ್ಲಿ ಬಸವ ಜಯಮೃತ್ಯುಂಜಯ ಸ್ಚಾಮೀಜಿ ಸುದ್ದಿಗೋಷ್ಠಿ‌ ಅವರು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಘೋಷಣೆಗೆ ಇಂದೇ ಡೆಡ್‌ಲೈನ್ ನೀಡಿದ್ದಾರೆ. ನಿರಂತರ ಎರಡು ವರ್ಷಗಳ ಚಳವಳಿ ಮಾಡಲಾಗುತ್ತಿದೆ. ವಿರಾಟ ಪಂಚಶಕ್ತಿ ಸಮಾವೇಶಕ್ಕೆ ಬಂದ ಜನಸ್ತೋಮ ಧ್ವನಿ ಸರ್ಕಾರದ ಒಡಿಲಿಗೆ ಮುಟ್ಟಿದೆ. ಸುವರ್ಣಸೌಧ ಮುತ್ತಿಗೆ ಹಾಕಬೇಡಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿ.ಸಿ.ಪಾಟೀಲ್ ಸೇರಿ ನಿಯೋಗಕ್ಕೆ ಸಿಎಂ  ಮನವಿ ಮಾಡಿದ್ದಾರೆ. ಅಂತಿಮ ಹೋರಾಟ ಮಾಡಿ ದೃಢಸಂಕಲ್ಪ ಮಾಡಿ ಮುತ್ತಿಗೆ ಹಾಕಲು ಜನ ಬಂದಿದ್ದರು. ಇಂದು ಬಹಳ ಮಹತ್ವದ ದಿನ, ಬಹಳ ಆಸೆ ಇಟ್ಟುಕೊಂಡಿದ್ದೇವೆ ಎಂದು ಮಾಹಿತಿಯನ್ನು ನೀಡಿದರು.

ಕಾಣದ ಕೈಗಳಿಂದ ಕೋರ್ಟ್ ಮೊರೆ:  ಇನ್ನು ಪಂಚಮಸಾಲಿಗೆ ಮೀಸಲಾತಿ ಕೊಡದಂತೆ ಕಾಣದ ಕೈಗಳು ಕೋರ್ಟ್ ಮೊರೆ ಹೋದ ಮಾಹಿತಿ ಬಂದಿದೆ. ಆಯೋಗದ ವರದಿ ಪಡೆದ ಮೇಲೆ ಸಂಪುಟ ಸಭೆ ಕರೆಯಲು ಒತ್ತಡ ಹೇರಲಾಗಿದೆ. ನಮ್ಮ ಜೊತೆ ಭಗವಂತ ರೂಪದಲ್ಲಿ ಜನರು ಇದ್ದಾರೆ. ಪಂಚಮಸಾಲಿಗಳ ಶ್ರೀರಕ್ಷೆ ಇರುವುದರಿಂದ ಕಾನೂನಾತ್ಮಕ ವಿಘ್ನ ಉಂಟು ಮಾಡುವ ಪ್ರಯತ್ನ ಮಾಡೇ ಮಾಡ್ತಾರೆ. ಅದಕ್ಕೆ ಯಾರೂ ವಿಚಲಿತ ಆಗುವ ಅಗತ್ಯವಿಲ್ಲ. ಸಂಜೆ 5 ಗಂಟೆಗೆ ಸಚಿವ ಸಂಪುಟ ಸಭೆ ನಡೆಯುತ್ತೆ, ಆಶಾದಾಯಕ ಇದೆ. ಕಾನೂನಾತ್ಮಕ ಹೋರಾಟ ಅವರು ಮಾಡಿಕೊಳ್ಳಲಿ. ಸರ್ಕಾರ ನಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಸಂಪುಟ ಸಭೆ ಬಳಿಕ ಹೋರಾಟ ನಿರ್ಧಾರ ಮಾಡೋಣ ಎಂದು ಸಮುದಾಯದ ಜನರಿಗೆ ತಿಳಿಸಲಾಗಿದೆ ಎಂದರು.

ಪಂಚಮಸಾಲಿಗೆ 2ಸಿ ಅಥವಾ 3ಸಿ ಮೀಸಲು?: ಹೊಸ ವರ್ಗೀಕರಣಕ್ಕೆ ಸರ್ಕಾರ ಚಿಂತನೆ

ಸಂಜೆವರೆಗೂ ಕಾದು ನೋಡುತ್ತೇವೆ: ಮೀಸಲಾತಿ ಘೋಷಣೆ ಕುರಿತಂತೆ ಈಗಲೇ ಯಾರೂ ಹೋರಾಟ ಮಾಡೋದು ಬೇಡ. ಸಂಜೆ 5 ಗಂಟೆಯವರೆಗೆ ತಾಳ್ಮೆಯಿಂದ ಇರೋಣ. ಒಳಗೆ ಏನು ಆಗುತ್ತೋ ಇಲ್ಲವೋ ಗೊತ್ತಿಲ್ಲ. ಮೀಸಲಾತಿ ನೀಡಿ ಸಿಎಂ ಬಸವರಾಜ ಬೊಮ್ಮಾಯಿ ನಮ್ಮ ಪಾಲಿಗೆ ಬಸವಣ್ಣ ಆಗ್ತಾರಾ ನೋಡೋಣ. ಸಿಎಂ ಮೇಲೆ ವಿಶ್ಚಾಸ ಇಟ್ಟು ಸಂಪುಟ ಸಭೆ ನಿರ್ಣಯ ಮೇಲೆ ಕಾಯುತ್ತಿದ್ದೇವೆ. ನಮಗೆ ಸಂಪೂರ್ಣ ನಂಬಿಕೆ ಇದೆ. ನಾವು ಕೇಳುವಂತದ್ದು 15 ಪರ್ಸೆಂಟ್ 2ಎ ದಲ್ಲಿದೆ. 2ಎದಲ್ಲಿರುವ ಸಮುದಾಯಗಳಿಗೆ ಅನ್ಯಾಯವಾಗದಂತೆ ಅವಕಾಶ ನೀಡಿ. ಅದು ಹೇಗೆ ಕೊಡ್ತಿರೋ ಗೊತ್ತಿಲ್ಲ. ಮೀಸಲಾತಿ ಹೆಚ್ಚಳ ಮಾಡ್ತಿರೋ, ಅಲ್ಲಿರೋರಿಗೆ ಎಸ್ ಟಿ ಮೀಸಲಾತಿ ಕೊಡ್ತಿರೋ ಗೊತ್ತಿಲ್ಲ ಎಂದು ತಿಳಿಸಿದರು.

Follow Us:
Download App:
  • android
  • ios