Asianet Suvarna News Asianet Suvarna News

Karnataka: ರಾಜ್ಯದ ಎಲ್ಲ ಶಾಲೆ, ಕಾಲೇಜಲ್ಲಿ ರಾಯಣ್ಣನ ಫೋಟೋ: ಸಿಎಂ ಬೊಮ್ಮಾಯಿ

*   ಬೆಳಗಾವಿ ಸುವರ್ಣ ಸೌಧದಲ್ಲಿ ಕಿತ್ತೂರು ಚೆನ್ನಮ್ಮ, ರಾಯಣ್ಣ ಪ್ರತಿಮೆ
*   ರಾಜ್ಯ ಸರ್ಕಾರ ನಿರ್ಧಾರ: ರಾಯಣ್ಣ ಸ್ಮರಣೋತ್ಸವದಲ್ಲಿ ಸಿಎಂ ಪ್ರಕಟ
*   ರಸ್ತೆ, ಆಸ್ಪತ್ರೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರು 
 

Photo of Rayanna at All the Schools and Colleges in Karnataka Says CM Basavaraj Bommai grg
Author
Bengaluru, First Published Jan 27, 2022, 7:00 AM IST

ಬೆಂಗಳೂರು(ಜ.27):  ರಾಜ್ಯದ(Karnataka) ಎಲ್ಲ ಶಾಲಾ-ಕಾಲೇಜುಗಳಲ್ಲಿ(School-Colleges) ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಭಾವಚಿತ್ರ ಅಳವಡಿಕೆ ಮತ್ತು ಬೆಳಗಾವಿ ಸುವರ್ಣ ಸೌಧದ ಆವರಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ರಾಯಣ್ಣನ ಪ್ರತಿಮೆ ಸ್ಥಾಪಿಸಲು ರಾಜ್ಯ ಸರ್ಕಾರ(Government of Karnataka) ತೀರ್ಮಾನಿಸಿದೆ.

ನಗರದ ಖೋಡೆ ವೃತ್ತದಲ್ಲಿ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ(Sangolli Rayanna) 191ನೇ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಈ ವಿಷಯ ತಿಳಿಸಿದರು. ರಾಜ್ಯದ ಶಾಲೆಗಳಲ್ಲಿ ರಾಯಣ್ಣನ ಭಾವಚಿತ್ರ ಅಳವಡಿಕೆ ಮಾಡಬೇಕು ಹಾಗೂ ರಾಯಣ್ಣನ ಸ್ಮರಣೆಗೆ ಕಾರ್ಯಕ್ರಮ ನಡೆಸಬೇಕು ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ ಕೋರಿದೆ. ಈ ಸಂಬಂಧ ಕೂಡಲೇ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.

Grama One: ರಾಜ್ಯದ 3026 ಹಳ್ಳಿಗಳಲ್ಲಿ "ಗ್ರಾಮ ಒನ್‌’ಗೆ ಚಾಲನೆ

ಬೆಳಗಾವಿ(Belagavi) ಸುವರ್ಣಸೌಧ(Suvarnasoudha) ಆವರಣದಲ್ಲಿ ಚೆನ್ನಮ್ಮ(Kittur Chennamma) ಹಾಗೂ ರಾಯಣ್ಣನ ಪ್ರತಿಮೆ ನಿರ್ಮಿಸಲಾಗುವುದು. ಈ ಸಂಬಂಧ ಮೂರ್ತಿ ತಯಾರಕರ ಜತೆ ಮಾತುಕತೆ ನಡೆಸಿದ್ದೇವೆ. ಆದಷ್ಟು ಶೀಘ್ರವೇ ಕನ್ನಡಪರ ಹೋರಾಟಗಾರರು, ರಾಯಣ್ಣನ ಅಭಿಮಾನಿಗಳ ಆಶಯದಂತೆ ಬೆಳಗಾವಿಯಲ್ಲಿ ಪ್ರತಿಮೆಗಳು ಅನಾವರಣಗೊಳ್ಳಲಿವೆ. ದೆಹಲಿಯಲ್ಲಿ ಈಗಾಗಲೇ ಕಿತ್ತೂರು ರಾಣಿ ಚೆನ್ನಮ್ಮನ ಪ್ರತಿಮೆ ಇದ್ದು, ಚೆನ್ನಮ್ಮ ಇರುವ ಕಡೆ ಅವರ ಬಲಗೈ ಬಂಟ ರಾಯಣ್ಣನ ಪ್ರತಿಮೆ ಸ್ಥಾಪಿಸಬೇಕಿದೆ. ಈ ಬಗ್ಗೆ ಸಂಬಂಧಿಸಿವರಿಗೆ ಸರ್ಕಾರದಿಂದ ಪತ್ರ ಬರೆಯಲಾಗಿದೆ. ದೆಹಲಿಯ ಸೂಕ್ತ ಸ್ಥಳದಲ್ಲಿ ರಾಯಣ್ಣನ ಪ್ರತಿಮೆ ನಿರ್ಮಾಣವಾಗಲಿದೆ ಎಂದು ಹೇಳಿದರು.

ಶೂರತ್ವ, ದೇಶಪ್ರೇಮ, ಸ್ವಾಮಿನಿಷ್ಠೆಯುಳ್ಳ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಸುಮಾರು 100 ಎಕರೆ ಪ್ರದೇಶದಲ್ಲಿ ಅಂದಾಜು 180 ಕೋಟಿ ರು. ವೆಚ್ಚದಲ್ಲಿ ಬೃಹತ್‌ ಮಿಲಿಟರಿ ಶಾಲೆಯನ್ನು(Military School) ಸರ್ಕಾರ ಸ್ಥಾಪಿಸುವ ಉದ್ದೇಶ ಹೊಂದಿದೆ. ಆ ಯೋಜನೆಗಾಗಿ ಈಗಾಗಲೇ ಸರ್ಕಾರ 55 ಕೋಟಿ ರು. ಬಿಡುಗಡೆ ಮಾಡಿದೆ. ರಕ್ಷಣಾ ಇಲಾಖೆ ಆ ಶಾಲೆಯ ಉಸ್ತುವಾರಿ ವಹಿಸಿಕೊಳ್ಳಲು ಮಾತುಕತೆ ನಡೆದಿದೆ.

ರಾಯಣ್ಣ ಸಮಾಧಿ ಸ್ಥಳ ನಂದಗಡದ ಅಭಿವೃದ್ಧಿಗೊಳಿಸುವ ಕಾರ್ಯ ಪ್ರಗತಿಯಲ್ಲಿದ್ದು, ಹುಟ್ಟೂರು ಸಂಗೊಳ್ಳಿಯಲ್ಲಿ ರಾಕ್‌ಗಾರ್ಡನ್‌ಗಾಗಿ 10 ಎಕರೆ ಪ್ರದೇಶ ಮಂಜೂರು ಮಾಡಿದ್ದೇವೆ. ಈ ಮೂಲಕ ರಾಯಣ್ಣನ ಶೌರ್ಯ, ಪರಾಕ್ರಮ, ದೇಶಭಕ್ತಿ ಮುಂದಿನ ತಲಾಮಾರಿಗೆ ಪರಿಚಯಿಸುವ ಕೆಲಸವಾಗುತ್ತಿದೆ. ನಾವೆಲ್ಲರೂ ರಾಯಣ್ಣನ ಗುಣಧರ್ಮ, ದೇಶಪ್ರೇಮ ಅಳವಡಿಸಿಕೊಂಡು ದೇಶ ಕಟ್ಟುವ ಕೆಲಸ ಮಾಡಬೇಕೆಂದು ಅವರು ಕರೆ ಕೊಟ್ಟರು.

Republic day 2022 : ಕೋವಿಡ್‌ ನಿರ್ವಹಣೆಯಲ್ಲಿ ದೇಶಕ್ಕೇ ಕರ್ನಾಟಕ ನಂ.1

ರಸ್ತೆ, ಆಸ್ಪತ್ರೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರು:

ಬ್ರಿಟಿಷರ(British) ಕಾಲದಲ್ಲಿ ಬ್ರಿಟಿಷ್‌ ಖ್ಯಾತನಾಮರ ಹೆಸರುಗಳನ್ನು ಬೆಂಗಳೂರಿನ ರಸ್ತೆ, ಆಸ್ಪತ್ರೆಗಳಿಗೆ ಇಡಲಾಗಿತ್ತು. ಈ ಬಗ್ಗೆ ಸಂಸದ ಪಿ.ಸಿ.ಮೋಹನ್‌ ಅವರು ಸರ್ಕಾರದ ಗಮನಕ್ಕೆ ತಂದಿದ್ದಾರೆ. ರಾಜ್ಯದ ಉದ್ದಗಲಕ್ಕೂ ಅನೇಕ ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ. ಮನವಿಯಂತೆ ರಸ್ತೆ, ಆಸ್ಪತ್ರೆ, ಸಂಸ್ಥೆಗಳಿಗೆ ಕನ್ನಡ ನಾಡಿನ ಸ್ವಾತಂತ್ರ್ಯ ಹೋರಾಟಗಾರರ ಹೆಸರಿಡಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಬೊಮ್ಮಾಯಿ ತಿಳಿಸಿದರು.

ಹೊಸದುರ್ಗದ ಕನಕಗುರು ಪೀಠದ ಈಶ್ವರಾನಂದಪುರಿ ಶ್ರೀಗಳು ಮಾತನಾಡಿ, ದೇಶದ ಕೋಟ್ಯಂತರ ಜನರಲ್ಲಿ ದೇಶಭಕ್ತಿ ಕಿಚ್ಚು ಹಚ್ಚಿದ ರಾಯಣ್ಣನ ಸ್ಮರಣೋತ್ಸವ ದಿನಾಚರಣೆ ಮಾಡುವ ದಿಟ್ಟ ನಿರ್ಧಾರ ಘೋಷಿಸಿದ ಸರ್ಕಾರಕ್ಕೆ ಅಭಿನಂದನೆ ತಿಳಿಸಿದರು.

ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌, ಸಂಸದ ಪಿ.ಸಿ.ಮೋಹನ್‌, ಸಚಿವ ಆರ್‌.ಅಶೋಕ್‌, ಮಾಜಿ ಸಚಿವ ಎಚ್‌.ಎಂ.ರೇವಣ್ಣ, ಪಾಲಿಕೆ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌, ಮಂಜುನಾಥ್‌ ಪ್ರಸಾದ್‌ ಮತ್ತಿತರರು ಉಪಸ್ಥಿತರಿದ್ದರು.
 

Follow Us:
Download App:
  • android
  • ios