Asianet Suvarna News Asianet Suvarna News

Republic day 2022 : ಕೋವಿಡ್‌ ನಿರ್ವಹಣೆಯಲ್ಲಿ ದೇಶಕ್ಕೇ ಕರ್ನಾಟಕ ನಂ.1

* ಗಣರಾಜ್ಯೋತ್ಸವ ಭಾಷಣದಲ್ಲಿ ರಾಜ್ಯಪಾಲ ಗೆಹಲೋತ್‌ ಶಹಬ್ಬಾಸ್‌
* ನೀರಾವರಿ, ತಂತ್ರಜ್ಞಾನ ಸೇರಿದಂತೆ ಸರ್ಕಾರದ ಸಾಧನೆಗೆ ಮೆಚ್ಚುಗೆ
* ರಾಜ್ಯದ ಸಾಧನೆಗಳ ಬಗ್ಗೆ ಶ್ಲಾಘಿಸಿದ ರಾಜ್ಯಪಾಲ

Governor Thawar Chand Gehlot lauded the achievements of the State Government san
Author
Bengaluru, First Published Jan 27, 2022, 5:15 AM IST

ಬೆಂಗಳೂರು (ಜ. 27): ಕೊರೋನಾ (Corona) ವಿರುದ್ಧದ ಹೋರಾಟದಲ್ಲಿ ರಾಜ್ಯ ಯಶಸ್ವಿಯಾಗಿದ್ದು, ಕೋವಿಡ್‌ (Covid-19) ನಿರ್ವಹಣೆಯಲ್ಲಿ ಕರ್ನಾಟಕ (Karnataka) ದೇಶದಲ್ಲೆ ಮೊದಲ ಸ್ಥಾನ ಪಡೆದುಕೊಂಡಿದೆ. ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದ ಕಾರ್ಮಿಕರಿಗೆ 236 ಕೋಟಿ ರು. ಹಾಗೂ ಅಸಂಘಟಿತ ಕಾರ್ಮಿಕರಿಗೆ 628 ಕೋಟಿ ಪರಿಹಾರ ನೀಡಲಾಗಿದೆ ಎಂದು ರಾಜ್ಯಪಾಲ ಥಾವರ್‌ಚಂದ ಗೆಹಲೋತ್‌  (Thawar Chand Gehlot)ಹೇಳಿದರು.

ಬುಧವಾರ ನಗರದ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ (Manekshaw Parade Ground) 73ನೇ ಗಣರಾಜ್ಯೋತ್ಸವ (Republic day) ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಕೋವಿಡ್‌, ನೀರಾವರಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರಾಜ್ಯ ಸರ್ಕಾರ ಮಾಡಿರುವ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಾಡಿನಲ್ಲಿ ಜಲಾನಯನ ಅಭಿವೃದ್ಧಿಗೆ ಸರ್ಕಾರ ಗಮನ ಹರಿಸಿದೆ. 2021 ಆಗಸ್ಟ್‌ನಲ್ಲಿ ಕೃಷ್ಣಾ ನದಿಯ ಇಂಡಿ ಶಾಖೆಯಿಂದ ಸಿಂದಗಿ ಪಟ್ಟಣಕ್ಕೆ ಕುಡಿಯುವ ನೀರನ್ನು ಒದಗಿಸಲು .27.10 ಕೋಟಿ ವೆಚ್ಚ ಮಾಡಲಾಗಿದೆ ಎಂದರು.

ಬೆಂಗಳೂರು ಸ್ಮಾರ್ಟ್‌ ಸಿಟಿ (Bengaluru Smart City)ಯೋಜನೆ ಅಡಿಯಲ್ಲಿ 158.27 ಕಿ.ಮೀ ಮಾರ್ಗವನ್ನು ಒಳಗೊಂಡ 77 ರಸ್ತೆಗಳನ್ನು ವೈಟ್‌ ಟಾಪಿಂಗ್‌ಗಾಗಿ ಆಯ್ಕೆ ಮಾಡಲಾಗಿದೆ. ಈ ಪೈಕಿ 83.91 ಕಿ.ಮೀ ರಸ್ತೆಯ ಕಾಮಗಾರಿ ಪೂರ್ಣಗೊಂಡಿದ್ದು, 31 ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಲಭ್ಯಗೊಳಿಸಲಾಗಿದೆ. ಮೊದಲ ಹಂತದಲ್ಲಿ 17 ಕಿ.ಮೀ ಮಾರ್ಗದ 12 ರಸ್ತೆಗಳು ಮತ್ತು 2ನೇ ಹಂತದಲ್ಲಿ 16 ಕಿ.ಮೀ ಮಾರ್ಗದ 35 ರಸ್ತೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು. ಮೆಟ್ರೋ ಯೋಜನೆಯಡಿ ಮೈಸೂರು ರಸ್ತೆಯಿಂದ ಕೆಂಗೇರಿವರೆಗಿನ 7.53 ಕಿ.ಮೀ ಉದ್ದದ ಮಾರ್ಗವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿದೆ. ಹಾಗೆಯೇ ಬೆಳ್ಳಂದೂರು ಮತ್ತು ವರ್ತೂರು (Vartur) ಕೆರೆಗಳಲ್ಲಿನ ಮಾಲಿನ್ಯವನ್ನು ನಿರ್ಮೂಲನ ಮಾಡಲು ಕೋರಮಂಗಲ ಮತ್ತು ಚಲ್ಲಘಟ್ಟಕಣಿವೆಗಳಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕವನ್ನು ಮೇಲ್ದರ್ಜೆಗೇರಿಸಲಾಗಿದೆ ಎಂದರು.

ಹುಲಿ-ಆನೆಗಳ ರಕ್ಷಣೆ: ರಾಜ್ಯದಲ್ಲಿ ಅರಣ್ಯ ಪ್ರದೇಶದ ಸಮಗ್ರ ರಕ್ಷಣೆ ಮತ್ತು ಸಂರಕ್ಷಣೆಗಾಗಿ ಕ್ರಮ ಕೈಗೊಂಡಿದ್ದರಿಂದ 524 ಹುಲಿಗಳನ್ನು ಹೊಂದಿದ್ದು, ಹೆಚ್ಚು ಸಂಖ್ಯೆಯ ಹುಲಿಗಳನ್ನು ಹೊಂದಿರುವ ಎರಡನೇ ರಾಜ್ಯವಾಗಿದೆ. 2017ರ ಗಣತಿ ಪ್ರಕಾರ ರಾಜ್ಯದಲ್ಲಿ 6049 ಆನೆಗಳಿದ್ದು, ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.

ಹೊಸ ಯೋಜನೆಗಳಿಲ್ಲ: ರಾಜ್ಯಪಾಲರ 16 ಪುಟಗಳ ಭಾಷಣದಲ್ಲಿ ನಾಡಿಗೆ ಯಾವುದೇ ಹೊಸ ಕೊಡುಗೆ ಅಥವಾ ಯೋಜನೆ ಇರಲಿಲ್ಲ. ಕೇವಲ ರಾಜ್ಯ ಸರ್ಕಾರದ ಯೋಜನೆ, ಕೋವಿಡ್‌ ನಿರ್ವಹಣೆಗೆ ಕೈಗೊಂಡ ಕ್ರಮಗಳು, ಜನತೆಗೆ ಈ ಹಿಂದೆ ನೀಡಿರುವ ಕಾರ್ಯಕ್ರಮಗಳು ಹಾಗೂ ಬಿಡುಗಡೆ ಮಾಡಿರುವ ಅನುದಾನದ ಅಂಕಿ ಸಂಖ್ಯೆಗಳಿಗಷ್ಟೇ ಸೀಮಿತವಾಗಿತ್ತು.

Brain Health: ದೇಶದಲ್ಲೇ ಮೊದಲು, ಕರ್ನಾಟಕ ಮೆದುಳು ಆರೋಗ್ಯ, ಮಹತ್ವ ತಿಳಿಸಿದ ಸುಧಾಕರ್
ಹೊಸ ನಿರೂಪಕಿ ಗಿರಿಜಾ! : ಸರ್ಕಾರಿ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಕಳೆದ ಐದು ತಿಂಗಳ ಹಿಂದೆ ಮುಖ್ಯಮಂತ್ರಿಗಳ ಮನೆ ಮುಂದೆ ಏಕಾಂಗಿ ಪ್ರತಿಭಟನೆ ನಡೆಸಿದ್ದ ಡಾ.ಗಿರಿಜಾ ಅವರ ಮನವಿಗೆ ಸ್ಪಂದನೆ ಸಿಕ್ಕಿದೆ. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಿರೂಪಕ ಶಂಕರ್‌ ಪ್ರಕಾಶ್‌ ಅವರೊಂದಿಗೆ ಡಾ.ಗಿರಿಜಾ ಅವರು ನಿರೂಪಕಿಯಾಗಿ ನಿರೂಪಣೆ ಮಾಡಿದರು. ಪ್ರತಿ ಬಾರಿ ನಟಿ ಅಪರ್ಣಾ ಇರುತ್ತಿದ್ದರು.

Karnataka Politics: ಎಂಬಿ ಪಾಟೀಲರಿಗೆ ಪ್ರಚಾರ ಸಮಿತಿ ಹೊಣೆ, DSP ಜಂಟಿ ಯುದ್ಧ!
ಆಂಧ್ರ ಪೊಲೀಸ್‌ ಪಡೆ: ಗಣರಾಜ್ಯೋತ್ಸವ ಆಚರಣೆಯಂದು ಪಥ ಸಂಚಲನದಲ್ಲಿ ಪಾಲ್ಗೊಳ್ಳಲು ಆಂಧ್ರ ಪ್ರದೇಶದ ಪೊಲೀಸ್‌ ಪಡೆ ಕರ್ನಾಟಕಕ್ಕೆ ಆಗಮಿಸಿ ಗಮನ ಸೆಳೆಯಿತು. ಕರ್ನಾಟಕದ ಮಹಿಳಾ ಪೊಲೀಸ್‌ ಪಡೆಯು ಆಂಧ್ರಕ್ಕೆ ಹೋಗಿರುವುದರಿಂದ ಅದಕ್ಕೆ ಪ್ರತಿಯಾಗಿ ಅಲ್ಲಿನ ಪೊಲೀಸರನ್ನು ಇಲ್ಲಿಗೆ ಕಳುಹಿಸಲಾಗಿದೆ.

Follow Us:
Download App:
  • android
  • ios