ದಸರಾ ಮುಗಿದರೂ ನಿಂತಿಲ್ಲ ಕೆಸರೆರಚಾಟ; ಕಾಂಗ್ರೆಸ್‌ ಮುಖಂಡನಿಗೆ ಮುಸ್ಲಿಮರ ಟೊಪ್ಪಿ ತೊಡಿಸಿದ ಫೋಟೊ ವೈರಲ್!

ದಸರಾ ಮುಗಿದರೂ ರಾಜಕೀಯ ಕೆಸರೆರಚಾಟ ಇನ್ನೂ ನಿಂತಿಲ್ಲ. ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ದಸರಾ ವೇಳೆ ಮುಸ್ಲಿಂರ ಟೋಪಿ ಧರಿಸಿದ ಫೋಟೊ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.

Photo edit controversy udupi Congress leader Prasad Raj Kanchan press conference rav

ಉಡುಪಿ (ಅ.16): ದಸರಾ ಮುಗಿದರೂ ರಾಜಕೀಯ ಕೆಸರೆರಚಾಟ ಇನ್ನೂ ನಿಂತಿಲ್ಲ. ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ದಸರಾ ವೇಳೆ ಮುಸ್ಲಿಂರ ಟೋಪಿ ಧರಿಸಿದ ಫೋಟೊ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.

ಪ್ರಸಾದ್ ಮುಸ್ಲಿಂ ಆಗಿದ್ದಾನೆ ಅವನಿಗೆ ಯಾರು ಮತ ಹಾಕಬೇಡಿ ಎಂದು ಫೋಟೊ ಎಡಿಟ್ ಮಾಡಿ ವಿರೋಧಿಗಳು ಅಪಪ್ರಚಾರ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಸುದ್ದಿಗೋಷ್ಟಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ಕೆಲವರು ನನ್ನ ರಾಜಕೀಯ ಭವಿಷ್ಯವನ್ನು ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ.. ನನ್ನ ಪೋಟೊವನ್ನು ಎಡಿಟ್ ಮಾಡಿ, ನಾನು ಮುಸ್ಲಿಂನಾಗಿದ್ದೇನೆ ಯಾರೂ ಮತ ನೀಡಬೇಡಿ ಎಂದು ಅಪಪ್ರಚಾರ ಮಾಡಿದ್ದಾರೆ. ನಾನು ಅಭ್ಯರ್ಥಿಯಾಗಿ ಮಸೀದಿಗೆ ಹೋದ ಅರ್ಧ ಗಂಟೆಯೊಳಗೆ ಈ ರೀತಿ ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ  ನನ್ನನ್ನು ಮೊಗವೀರ ಸಮುದಾಯದಿಂದ ದೂರ ಇಡಬೇಕೆಂಬ ದುರುದ್ದೇಶದಿಂದ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದರು.

ಬೆಂಗಳೂರಲ್ಲಿ ಭಾರಿ ಮಳೆ ಅವಾಂತರ: 'ಮಳೆ ನೀರು ವಾಪಸ್ ಆಕಾಶಕ್ಕೆ ಕಳಿಸೋಕೆ ಆಗುತ್ತಾ?' ಗೃಹಸಚಿವ ಬೇಜವಾಬ್ದಾರಿ ಹೇಳಿಕೆ

ಅದು ನಡೆದಿದ್ದೇನು?

ಉಡುಪಿ- ಉಚ್ಚಿಲ ದಸರಾಕ್ಕೆ ಎಕೆಎಂಎಸ್ ಸಂಸ್ಥೆಯವರು ಈ ಬಾರಿ ಪ್ರಯಾಣಿಕರಿಗೆ ಉಚಿತ ಬಸ್ ಸೇವೆ ಕಲ್ಪಿಸಿದ್ದರು. ಈ ಕಾರಣಕ್ಕೆ ಸಂಸ್ಥೆಯ ಪದಾಧಿಕಾರಿಗಳಿಗೆ ದಸರಾ ಕಮಿಟಿ ಸನ್ಮಾನ ಮಾಡಿದ್ದರು. ಇದೇ ವಿಚಾರಕ್ಕೆ ನನ್ನ ಫೋಟೊ ಬಳಸಿ ಎಡಿಟ್ ಮಾಡಿ ಮುಸ್ಲಿಂ ಸಮುದಾಯವರೊಂದಿಗೆ ಸೇರಿಕೊಂಡು ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದಲ್ಲಿ ಮುಸ್ಲಿಂರಿಗೆ ಸನ್ಮಾನ ಮಾಡುವ ಮೂಲಕ ಹಿಂದೂ ಧರ್ಮದ ನೀತಿಗೆ ವಿರುದ್ಧವಾಗಿ ವರ್ತಿಸಿದ್ದಾರೆಂದು ಅಪಪ್ರಚಾರ ಮಾಡಿದ್ದಾರೆ. ಆದರೆ ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

ಮುಸ್ಲಿಮರ ಹೆಸರು ಕೇಳಿದರೆ ಬಿಜೆಪಿಯವ್ರಿಗೆ ಉರಿ, ಆರೆಸ್ಸೆಸ್ ನಿಜವಾದ ಭಯೋತ್ಪಾದಕರು: ಎಂ ಲಕ್ಷ್ಮಣ್ ಕಿಡಿ

ಅಪಪ್ರಚಾರ ಮಾಡಿದವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ. ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲಿಸುವುದಿಲ್ಲ. ಈಗಾಗಲೇ ಪ್ರಕರಣ ದಾಖಲಿಸಿದ್ದೇನೆ. ನಾನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದಾಗ ಚುನಾವಣಾ ಪ್ರಚಾರಕ್ಕೆ ಉಡುಪಿ ಮಸೀದಿಯೊಂದಕ್ಕೆ ಅಭ್ಯರ್ಥಿಯಾಗಿ ಹೋಗಿದ್ದೆ. ಆ ಸಮಯದಲ್ಲಿ ಮುಸ್ಲಿಂ ಮುಖಂಡರಲ್ಲಿ ಮತಯಾಚನೆ ಮಾಡಿದ್ದೇನೆ ಆ ವೇಳೆ ದುಷ್ಕರ್ಮಿಗಳು ನನ್ನ ಫೋಟೊ ತೆಗೆದುಕೊಂಡು ಎಡಿಟ್ ಮಾಡಿ ಫೋಟೊಶಾಪ್ ಮೂಲಕ ನನಗೆ ಮುಸ್ಲಿಂ ಟೋಪಿ ಹಾಕಿ ಮುಸ್ಲಿಂ ಧರ್ಮಕ್ಕೆ ಸೇರಿದ್ದೇನೆ ಯಾರೂ ಬೆಂಬಲಿಸಬೇಡಿ ಎಂದು ಅಪ್ರಚಾರ ಮಾಡಿದ್ದರು. ಇದರಿಂದ ನನಗೆ  ಸಾವಿರಾರು ಮತಗಳು ಕೈತಪ್ಪಿ ನನ್ನ ಸೋಲಿಗೆ ಕಾರಣರಾಗಿದ್ದರು. ನನ್ನನ್ನು ಸಮುದಾಯದಿಂದ ಹೊರಗಿಡಲು, ರಾಜಕೀಯ ತುಳಿಯಲು ಈ ರೀತಿ ಮಾಡುತ್ತಿದ್ದಾರೆ. ನಾನು ಕಾನೂನು ಹೋರಾಟ ಮಾಡುತ್ತೇನೆ ದುಷ್ಕರ್ಮಿಗಳಿಗೆ ಶಿಕ್ಷೆ ಆಗುವವರಿಗೆ ವಿರಮಿಸುವುದಿಲ್ಲ ಎಂದಿದ್ದಾರೆ.

Latest Videos
Follow Us:
Download App:
  • android
  • ios