Asianet Suvarna News Asianet Suvarna News

ಬೆಂಗಳೂರಲ್ಲಿ ಭಾರಿ ಮಳೆ ಅವಾಂತರ: 'ಮಳೆ ನೀರು ವಾಪಸ್ ಆಕಾಶಕ್ಕೆ ಕಳಿಸೋಕೆ ಆಗುತ್ತಾ?' ಗೃಹಸಚಿವ ಬೇಜವಾಬ್ದಾರಿ ಹೇಳಿಕೆ

ಬೆಂಗಳೂರು ಮಳೆ ಅನಿರೀಕ್ಷಿತ ಇದು ನಮಗೆ ಆಶ್ಚರ್ಯವಾಗಿದೆ. ಈ ಮಳೆಗೆ ಎಂಥಾ ಸಿಟಿ ಆದ್ರೂ ಅಸ್ತವ್ಯಸ್ತ ಆಗುತ್ತೆ. ನ್ಯೂಯಾರ್ಕ್‌ನಲ್ಲಿ ಆಗಲ್ವಾ? ಲಂಡನ್‌ನಲ್ಲಿ ಆಗಿಲ್ವ?  ಮಳೆ ಬಂದಾಗ ನೀರನ್ನು ವಾಪಸ್ ಆಕಾಶಕ್ಕೆ ಕಳಿಸೋಕೆ ಆಗಲ್ಲ ಎಂದು ಗೃಹ ಸಚಿವ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.

Karnataka home minister parameshwar reacts about heavy rains in bengaluru rav
Author
First Published Oct 16, 2024, 11:16 AM IST | Last Updated Oct 16, 2024, 11:31 AM IST

ಬೆಂಗಳೂರು (ಅ.16): ಅರಬ್ಬಿ ಸಮುದ್ರದಲ್ಲಿ ವಾಯಭಾರ ಕುಸಿತ ಹಾಗೂ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಚಂಡಮಾರುತದ ಪರಿಣಾಮ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಭೀಕರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ ಇಂತಹ ಸಂದರ್ಭದಲ್ಲಿ ಗೃಹ ಸಚಿವ ಪರಮೇಶ್ವರ್ ಬೇಜವಾಬ್ದಾರಿ ಹೇಳಿಕೆ ನೀಡಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಮಳೆ ನೀರು ವಾಪಸ್ ಆಕಾಶಕ್ಕೆ ಕಳಿಸೋಕಾಗುತ್ತಾ?

ಬೆಂಗಳೂರು ಮಳೆ ಅನಿರೀಕ್ಷಿತ ಇದು ನಮಗೆ ಆಶ್ಚರ್ಯವಾಗಿದೆ. ಅಕ್ಟೋಬರ್ ತಿಂಗಳಲ್ಲಿ ಇಷ್ಟು ಮಳೆ ಬರ್ತಾ ಇದೆ ಅಂದ್ರೆ ನಂಬೋಕೆ ಆಗ್ತಿಲ್ಲ. ಇಂತಹ ಮಳೆ ಬರ್ತಾ ಇದೆ ಅಂದ್ರೆ ಎಂಥಾ ಸಿಟಿ ಆದ್ರೂ ಅಸ್ತವ್ಯಸ್ತ ಆಗುತ್ತೆ. ನ್ಯೂಯಾರ್ಕ್‌ನಲ್ಲಿ ಆಗಲ್ವಾ? ಲಂಡನ್‌ನಲ್ಲಿ ಆಗಿಲ್ವ? ಯಾವುದೇ ಸಿಟಿ ಆದ್ರೂ ಅಷ್ಟೆ. ಬೆಂಗಳೂರಿನಲ್ಲಿ ಹಾಗೆ ಆಗ್ತಿದೆ. ಮುಂದೆನೂ ಆಗ್ತಾ ಇರುತ್ತೆ ಇದನ್ನ ಮ್ಯಾನೇಜ್ ಮಾಡಬೇಕು. ಮಳೆ ಬಂದಾಗ ನೀರನ್ನು ವಾಪಸ್ ಆಕಾಶಕ್ಕೆ ಕಳಿಸೋಕೆ ಆಗಲ್ಲ. ಭೂಮಿ ಮೇಲೆ ಹರಿದು ಹೋಗಬೇಕು ಎಂದ ಪರಮೇಶ್ವರ್. 

ಮುಸ್ಲಿಮರ ಹೆಸರು ಕೇಳಿದರೆ ಬಿಜೆಪಿಯವ್ರಿಗೆ ಉರಿ, ಆರೆಸ್ಸೆಸ್ ನಿಜವಾದ ಭಯೋತ್ಪಾದಕರು: ಎಂ ಲಕ್ಷ್ಮಣ್ ಕಿಡಿ

ಇನ್ನು ಸಂಡೂರು ಬೈ ಎಲೆಕ್ಷನ್ ಗೆ ವಾಲ್ಮೀಕಿ ಹಗರಣ ಅಸ್ತ್ರ ಪ್ರಯೋಗ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಸಂಡೂರು ಉಪಚುನಾವಣೆಯಲ್ಲಿ ಬಿಜೆಪಿಯವರು ವಾಲ್ಮೀಕಿ ಪ್ರಕರಣದ ಬಗ್ಗೆ ಪ್ರಚಾರ ಮಾಡಬಹುದು. ನಾವು ಸಹ ಅದರ ಬಗ್ಗೆ ಏನು ನಡೆದಿದೆ ಹೇಳ್ತೇವೆ. ಅದು ಅಧಿಕಾರಿಗಳ ಮಟ್ಟದಲ್ಲಿ ಆಯ್ತಾ? ರಾಜಕಾರಣಿಗಳ ಮಟ್ಟದಲ್ಲಿ ಆಯ್ತಾ ಅಂತ ಹೇಳ್ತೇವೆ. ಇದು ಅಧಿಕಾರಿಗಳ ಮಟ್ಟದಲ್ಲಿ ನಡೆದ ಪ್ರಕರಣ. ಇದನ್ನೇ ನಾವು ಚುನಾವಣಾ ಪ್ರಚಾರ ವೇಳೆ ಹೇಳ್ತೇವೆ. ಬಸನಗೌಡ ದದ್ದಲ್ ಅವರನ್ನು ವಿಚಾರಣೆಗೆ ಕರೆದಿದ್ರು, ಆದರೆ ಅವರ ಹೆಸರು ಪ್ರಕರಣದಲ್ಲಿ ಬರಲಿಲ್ಲ. ನಾಗೇಂದ್ರ ಅವರ ವಿಚಾರಣೆಯೂ ಆಗಿದೆ. ಬಿಜೆಪಿಯವ್ರು ಏನಾದರೂ ಆರೋಪ ಮಾಡಲಿ, ನಿಜಾಂಶ ಏನು ಅಂತಾ ಜನರಿಗೆ ತಿಳಿಸುತ್ತೇವೆ ಎಂದರು.

ಲೋಕಾಯುಕ್ತ ಬಗ್ಗೆ ನೋ ಕಾಮೆಂಟ್:

ಲೋಕಾಯುಕ್ತ ತನಿಖೆ ಮೇಲೆ ಸರ್ಕಾರದ ಒತ್ತಡ ವಿಚಾರ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಲೋಕಾಯುಕ್ತದ ಕಾರ್ಯವೈಖರಿ ಬಗ್ಗೆ ನಾನು ಏನು ಹೇಳೊಲ್ಲ. ಮೊದಲು ಅವರನ್ನು ಕರೆಯಬೇಕಿತ್ತು, ಇವರನ್ನು ಕರೆಯಬೇಕಿತ್ತು ಅನ್ನೋದು ಲೋಕಾಯುಕ್ತ ಪೊಲೀಸರು ತೀರ್ಮಾನ ಮಾಡ್ತಾರೆ. ಅವರು ಯಾರನ್ನ ಯಾವಾಗ ಬೇಕಾದರೂ ವಿಚಾರಣೆಗೆ ಕರೆಯಬಹುದು ಅಂತಾ ಅವರೇ ತೀರ್ಮಾನ ಮಾಡುತ್ತಾರೆ. ಅದೊಂದು ಸ್ವತಂತ್ರ ಸಂಸ್ಥೆ ಅದರ ಬಗ್ಗೆ ನಾನು ಹೆಚ್ಚು ಕಮೆಂಟ್ ಮಾಡಲ್ಲ 

ತುಮಕೂರು ದಸರಾ ಜಂಬೂಸವಾರಿ; ತಾಯಿ ಚಾಮುಂಡೇಶ್ವರಿ ಅಂಬಾರಿ ಮುಂದೆ ಕುಣಿದು ಕುಪ್ಪಳಿಸಿ ಪರಮೇಶ್ವರ್

ಡಿಜೆ ಹಳ್ಳಿ ಕೇಜಿ ಹಳ್ಳಿ ಕೇಸ್ ವಾಪಸ್ ?

ಡಿಜೆ ಹಳ್ಳಿ ಕೆಜಿ ಹಳ್ಳಿ ಕೇಸ್ ವಾಪಸ್ ಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ. ಈ ಹಿಂದೆ ಬರೆದಿದ್ರು ಅದು ಅಲ್ಲಿಗೆ ನಿಂತಿದೆ. ಈಗ ಯಾರಾದರೂ ಬರೆದರೆ ಅದನ್ನು ಪರಿಶೀಲನೆ ಮಾಡ್ತೀವಿ.  ಏನು ಪ್ರಕ್ರಿಯೆ ಮಾಡ್ತೀವಿ ಅಂತ ಮೊನ್ನೆಯೂ ಹೇಳಿದ್ದೇವೆ. ಹರಿಪ್ರಸಾದ್ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ನಮಗೆ ಪ್ರಸ್ತಾವನೆ ಬಂದರೆ ಅದನ್ನು ಪರಿಶೀಲನೆ ಮಾಡಲಾಗತ್ತೆ. ಕ್ಯಾಬಿನೆಟ್ ಉಪ ಸಮಿತಿಯ ಮುಂದೆ ಇಡುತ್ತೇವೆ   ಕ್ಯಾಬಿನೆಟ್ ಉಪ ಸಮಿತಿ ಶಿಫಾರಸು ಮಾಡಿದ್ಮೇಲೆ ಮುಂದಿನ ತೀರ್ಮಾನ ಮಾಡುತ್ತೇವೆ. ನಾವು ಕೇಸ್ ತೆಗಿತೀವಿ ಅಂತ ಹೇಳಿಲ್ಲ. ಡಿಜೆ ಹಳ್ಳಿ, ಕೆಜೆ ಹಳ್ಳಿ ಕೇಸ್ ಇಲ್ಲಿಯವರೆಗೂ ನಾವು ಕೇಸ್ ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ಹೇಳಿಲ್ಲ. ಹುಬ್ಬಳ್ಳಿ ಕೇಸ್‌ ಕೂಡ ಹಾಗೆ ಹಿಂದೆ ತೆಗಿತೀವಿ ಅಂತ ಹೇಳಿರಲಿಲ್ಲ. ಅದು ಕಮಿಟಿಯ ನಿರ್ಧಾರ. ಕಮಿಟಿ ಎಲ್ಲ ಪರಿಶೀಲನೆ ಮಾಡಿ ಕ್ಯಾಬಿನೆಟ್‌ಗೆ ಇಡಲಿದೆ. ಆ ಬಳಿಕ ಕ್ಯಾಬಿನೆಟ್ ಅಲ್ಲಿ ತೀರ್ಮಾನ ಮಾಡಲಾಗತ್ತೆ

Latest Videos
Follow Us:
Download App:
  • android
  • ios