ಆಂಧ್ರ, ಪಶ್ಚಿಮ ಬಂಗಾಳ ಹಾಗೂ ರಾಜಸ್ಥಾನದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಕರ ಇಳಿಸಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಧಿಕೃತವಾಗಿ ಘೋಷಿಸಿದ್ದಾರೆ.
ಕಲಬುರಗಿ: ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚುತ್ತಿದ್ದು, ಶ್ರೀಸಾಮಾನ್ಯ ಆತಂಕಗೊಂಡಿದ್ದಾನೆ. ಆದರೆ, ಈಗಾಗಲೇ ತೈಲದ ಮೇಲಿನ ಸೆಸ್ ಅನ್ನು ಕೆಲವು ರಾಜ್ಯಗಳು ಇಳಿಸಿದ್ದು, ಇದೀಗ ಕರ್ನಾಟಕದಲ್ಲಿಯೂ 2 ರೂ. ತೈಲೆ ಬೆಲೆ ಇಳಿಸಿರುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.
ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ತೈಲ ಬೆಲೆ ಇಳಿಕೆಯನ್ನು 'ಗಂಡು ಮೆಟ್ಟಿದ ನೆಲದಲ್ಲಿ' ಘೋಷಿಸಿ, ವಾಹನ ಸವಾರರಿಗೆ ಸಂತೋಷದ ಸುದ್ದಿಯನ್ನು ನೀಡಿದ್ದಾರೆ.
ನಿನ್ನೆಯೇ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ 2 ರಿಂದ 3 ರೂ.ನಷ್ಟು ಇಳಿಕೆಗೆ ಸಿಎಂ ಎಚ್ಡಿಕೆ ಸೂಚಿಸಿದ್ದರು. ಈ ಆಶ್ವಾಸನೆಯನ್ನು ಪೂರೈಸಿದ್ದು, ಬಹುಶಃ ಇಂದು ಮಧ್ಯ ರಾತ್ರಿಯಿಂದ ನೂತನ ಬೆಲೆ ಅನ್ವಯವಾಗಬಹುದು.
ತೈಲೆ ಬೆಲೆ ಏರಿಕೆಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿರುವ ಸಿಎಂ, ತೈಲ ದರ ಇಳಿಸಲು ಇದೀಗ ಅಧಿಕೃತವಾಗಿ ಘೋಷಿಸಿದ್ದಾರೆ.

ಪಶ್ಚಿಮ ಬಂಗಾಳ, ರಾಜಸ್ಥಾನ ಹಾಗೂ ಆಂಧ್ರ ಪ್ರದೇಶದಲ್ಲಿ ಈಗಾಗಲೇ ತೈಲದ ಮೇಲಿನ ಸೆಸ್ ಕಡಿಮೆ ಮಾಡಿ, ಜನ ಸಾಮಾನ್ಯರಿಗೆ ಸರಕಾರಗಳು ನೆರವಾಗಿದ್ದವು. ಇದೇ ಸಾಲಿಗೆ ಇದೀಗ ರಾಜ್ಯವೂ ಸೇರಿದೆ.
