ಆಪರೇಶನ್ ಕಮಲಕ್ಕೆ ಮೊದಲ ವಿಕೆಟ್ ಬಿತ್ತಾ? ಎನ್ನುವ ಪ್ರಶ್ನೆ ರಾಜ್ಯ ರಾಜಕಾರಣದಲ್ಲಿ ಎದುರಾಗಿದೆ. ಹೌದು ಕಾಂಗ್ರೆಸ್ ಶಾಸಕರೊಬ್ಬರು ಬಿಜೆಪಿ ಸೇರಲು ಮೌಖಿಕ ಒಪ್ಪಿಗೆ  ನೀಡಿದ್ದಾರೆ. ತಮ್ಮ ಬೆಂಬಲಿಗರ ಸಭೆಯಲ್ಲಿ ಕಾಂಗ್ರೆಸ್ ನಿಂದ ತಮಗಾಗುತ್ತಿರುವ ಅನ್ಯಾಯಗಳ ಬಗ್ಗೆ ಹೇಳಿಕೊಂಡಿದ್ದು ಅಭಿಪ್ರಾಯ ಸಂಗ್ರಹಿಸಿದ್ದಾರೆ ಎಂಬ  ಮಾತು ಕೇಳಿಬಂದಿದೆ. ಹಾಗಾದರೆ ಆಪರೇಶನ್ ಗೆ ಒಳಗಾದ ಆ ಶಾಸಕ ಯಾರು?

ಬೆಂಗಳೂರು[ಸೆ.16] ಇದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ ಬಂದಿರುವ ಸುದ್ದಿ. ಶಾಸಕ ಶಿವರಾಮ ಹೆಬ್ಬಾರ ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ದಟ್ಟವಾಗುತ್ತಿದೆ. ಜಿಲ್ಲೆಯಲ್ಲಿ ಸಚಿವ ಆರ್‌.ವಿ.ದೇಶಪಾಂಡೆ ಪ್ರಶ್ನಾತೀತ ನಾಯಕರಾಗಿದ್ದಾರೆ. ಹಾಗಾಗಿ ಕಾಂಗ್ರೆಸ್ ನಲ್ಲಿ ನಮಗೆ ಸೂಕ್ತ ಸ್ಥಾನ ಮಾನ ಸಿಗುವುದು ಈ ಸರಕಾರದ ಅವಧಿಯಲ್ಲಿ ಅನುಮಾನ ಎಂದಿರುವ ಹೆಬ್ಬಾರ್ ಬಿಜೆಪಿ ಕಡೆ ಮುಖ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಿವರಾಂ ಹೆಬ್ಬಾರ್ ಹಿಂದೆ ಬಿಜೆಪಿಯ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡಿದವರು. ಬಿಜೆಪಿ ನಾಯಕರೊಂದಿಗೆ ಸ್ನೇಹದಿಂದಲೇ ಇದ್ದವರು. ಬಿಜೆಪಿ ಸಹ ಹೆಬ್ಬಾರ್‌ ಗೆ ಜಿಲ್ಲಾ ಉಸ್ತುವಾರಿ ಸ್ಥಾನ ನೀಡುತ್ತೇನೆ ಎಂಬ ಭರವಸೆ ನೀಡಿದೆ ಎನ್ನಲಾಗಿದೆ.

"