Asianet Suvarna News Asianet Suvarna News

ಬೆಂಗಳೂರು ಲಾ ಸ್ಕೂಲ್‌ನಲ್ಲಿ ಕನ್ನಡಿಗರ ಮೀಸಲಿಗೆ ಕುತ್ತು..!

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ (ನ್ಯಾಷನಲ್‌ ಲಾ ಸ್ಕೂಲ್‌) ಕನ್ನಡಿಗ ವಿದ್ಯಾರ್ಥಿಗಳಿಗೆ ಶೇ.25 ಮೀಸಲು ನೀಡಿರುವ ಕರ್ನಾಟಕ ಸರ್ಕಾರದ ನಿರ್ಧಾರ ಪ್ರಶ್ನಿಸಿ ದಿಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

Petition filed in Delhi high court questioning Reservation for kannadigas in Karnataka law college
Author
Bangalore, First Published Jul 3, 2020, 10:44 AM IST

ನವದೆಹಲಿ(ಜು.03): ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ (ನ್ಯಾಷನಲ್‌ ಲಾ ಸ್ಕೂಲ್‌) ಕನ್ನಡಿಗ ವಿದ್ಯಾರ್ಥಿಗಳಿಗೆ ಶೇ.25 ಮೀಸಲು ನೀಡಿರುವ ಕರ್ನಾಟಕ ಸರ್ಕಾರದ ನಿರ್ಧಾರ ಪ್ರಶ್ನಿಸಿ ದಿಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಗುರುವಾರ ಈ ಅರ್ಜಿ ಮುಖ್ಯ ನ್ಯಾ ಡಿ.ಎನ್‌.ಪಟೇಲ್‌ ಹಾಗೂ ನ್ಯಾ ಪ್ರತೀಕ್‌ ಜಲಾನ್‌ ಅವರ ಪೀಠದ ಮುಂದೆ ಈ ಅರ್ಜಿ ವಿಚಾರಣೆಗೆ ಬಂತು. ಆದರೆ ಅವರು ವಿಚಾರಣೆಯಿಂದ ಹಿಂದೆ ಸರಿದು ಬೇರೆ ಪೀಠವು ಇದರ ವಿಚಾರಣೆ ನಡೆಸಬೇಕು ಎಂದು ಸೂಚಿಸಿದರು.

‘ಪ್ರತಿಜ್ಞೆ’ಗೂ ಮುನ್ನ ಮನೆಯಲ್ಲಿ ಡಿಕೆಶಿ ಪೂಜೆ, ಕೆಪಿಸಿಸಿ ಕಚೇರಿಯಲ್ಲಿ ಅರಳಿ ಮರಕ್ಕೂ ಪೂಜೆ

ದಿಲ್ಲಿ ಹೈಕೋರ್ಟ್‌ನ ಬೇರೆ ಪೀಠ ದಿಲ್ಲಿ ಕಾನೂನು ವಿವಿಯಲ್ಲಿ ತರಲಾದಂಥ ‘ಸ್ಥಳೀಯರಿಗೆ ಶೇ.50 ಮೀಸಲು’ ನಿಯಮಕ್ಕೆ ತಡೆ ನೀಡಿತ್ತು. ಇದೇ ಮಾದರಿಯಲ್ಲಿ ಬೆಂಗಳೂರಿನ ಕಾನೂನು ಕಾಲೇಜಿನಲ್ಲಿ ತರಲಾದ ಶೇ.25 ‘ಸ್ಥಳೀಯ (ಕನ್ನಡಿಗ) ಮೀಸಲು’ ನಿಯಮ ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಕಳೆದ ಮಾಚ್‌ರ್‍ನಲ್ಲಿ ಕರ್ನಾಟಕ ವಿಧಾನಸಭೆ ರಾಷ್ಟ್ರೀಯ ಕಾನೂನು ಶಾಲೆ (ತಿದ್ದುಪಡಿ) ವಿಧೇಯಕಕ್ಕೆ ಅಂಗೀಕಾರ ನೀಡಿ ಸ್ಥಳೀಯರಿಗೆ ಮೀಸಲು ನೀಡಲು ನಿರ್ಧರಿಸಿತ್ತು.

Follow Us:
Download App:
  • android
  • ios