ನೈಟ್ ಕರ್ಫ್ಯೂ ಜಾರಿ ಮಾಡಿದ್ರೆ ಕೊರೋನಾ ಬರಲ್ವಾ? ಇದರ ಉದ್ದೇಶವಾದ್ರೂ ಏನು?

ಚೀನಾ ಕೊರೋನಾ ಇನ್ನೂ ಹೋಗಿಲ್ಲ. ಆಗಲೇ ಬ್ರಿಟನ್‌ ಕೊರೋನಾ ವೈರಸ್ ವಕ್ಕರಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ ಆದೇಶ ಮಾಡಲಾಗಿದ್ದು, ಇದನ್ನ ಸಾರ್ವಜನಿಕರು ಟ್ರೋಲ್ ಮಾಡುತ್ತಿದ್ದಾರೆ.

Peoples Trolls In Social Media for night curfew In Karnataka rbj

ಬೆಂಗಳೂರು, (ಡಿ.23): ಕೊರೋನಾ ವೈರಸ್​ ಲಂಡನ್​ನಲ್ಲಿ ರೂಪಾಂತರವಾಗಿದೆ ಎನ್ನುವ ವಿಚಾರ ಸಾಕಷ್ಟು ಆತಂಕ ಮೂಡಿಸಿದೆ. ಈ ಬೆನ್ನಲ್ಲೇ ರಾಜ್ಯದಲ್ಲಿ ಡಿ.24ರ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5ರ ವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗುತ್ತಿದೆ.

ಆದ್ರೆ, ಈ ನೈಟ್ ಕರ್ಫ್ಯೂ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದ್ದು, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವ್ಯಂಗ್ಯವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯದಲ್ಲಿ ನೈಟ್ ಕರ್ಫ್ಯೂ ಡೇಟ್, ಟೈಮಿಂಗ್ ಬದಲಾವಣೆ: ಸಿಎಂ ಮಹತ್ವದ ಆದೇಶ

 ಜನರು ಓಡಾಡದ ಸಂದರ್ಭದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಅಂದ್ರೆ,  ಎಲ್ಲರೂ ಮಲಗಿದ ಮೇಲೆ ಕೊರೋನಾ ಓಡಾಡುತ್ತಿರುತ್ತಾ..? ಈ ಕೊರೋನಾ ರಾತ್ರಿ ಅಷ್ಟೇ ಇರುತ್ತಾ..? ಅಂತೆಲ್ಲಾ ಹಾಸ್ಯ ಚಟಾಕೆ ಹಾರಿಸುತ್ತಿದ್ದಾರೆ.

ನೈಟ್ ಕರ್ಫ್ಯೂ ಜಾರಿ ಮಾಡಿದ್ರೆ ಕೊರೋನಾ ಬರಲ್ವಾ..? ಇದು ರಾತ್ರಿ ಅಷ್ಟೆ ಹರಡುತ್ತಾ..? ಇದು ನೈಟ್ ಶಿಫ್ಟ್ ಕೊರೋನಾ ಅಂತೆಲ್ಲಾ ಬರೆದುಕೊಂಡಿದ್ದಾರೆ.

ಇನ್ನು ಈ ಬಗ್ಗೆ ಮಾಜಿ ಸಚಿವ ಹೆಚ್.ಸಿ. ಮಹಾದೇವಪ್ಪ ಸರ್ಕಾರದ ಈ ಕಾಟಾಚಾರದ ನೈಟ್ ಕರ್ಫ್ಯೂ ನಿರ್ಧಾರಕ್ಕೆ  ಚಾಟಿ ಬೀಸಿದ್ದು, ರಾತ್ರಿ ಮಾತ್ರ ಎಚ್ಚರವಿರಲು ಕೊರೋನಾ ಏನು ಗೂಬೇನಾ? ಕೋವಿಡ್ ನೆಗೆಟಿವ್ ರಿಪೋರ್ಟ್ ಇಲ್ಲದೇ ಬಿಟ್ಟುಕೊಂಡಿರುವುದು ಸರ್ಕಾರದ ನಿರ್ಲಕ್ಷ್ಯ ತೋರುತ್ತದೆ ಎಂದು ಕಿಡಿಕಾರಿದ್ದಾರೆ.

ಜನರು ಮಲಗಿದ ಮೇಲೆ ನೈಟ್ ಕರ್ಫ್ಯೂ ಜಾರಿಯಿಂದ ಕೊರೋನಾ ತಡೆಗಟ್ಟಲು ಸಾಧ್ಯನಾ? ನೈಟ್ ಕರ್ಫ್ಯೂ ಬಗ್ಗೆ ಸರ್ಕಾರವೇ ಸ್ಪಷ್ಟನೆ ಕೊಡಬೇಕಿದೆ.

Latest Videos
Follow Us:
Download App:
  • android
  • ios