Asianet Suvarna News Asianet Suvarna News

ಜಂಟಲ್‌ಮನ್ ಆನೆಗಳಿಗೆ ದಾರಿ ಬಿಡುವುದು ಮನುಷ್ಯನ ಕರ್ತವ್ಯ: ಸುಪ್ರೀಂಕೋರ್ಟ್!

‘ಆನೆಗಳಿಗೆ ದಾರಿ ಮಾಡಿಕೊಡುವುದು ಮನುಷ್ಯರ ಕರ್ತವ್ಯ’| ನೀಲಗಿರಿ ರೆಸಾರ್ಟ್ ಮಾಲೀಕರಿಗೆ ಚಾಟಿ ಬೀಸಿದ ಸುಪ್ರೀಂಕೋರ್ಟ್| ತಮಿಳುನಾಡು ಸರ್ಕಾರದ ‘ನೀಲಗಿರಿ ಎಲಿಫಂಡ್ ಕಾರಿಡಾರ್’ ಆದೇಶ ಎತ್ತಿ ಹಿಡಿದ ಸುಪ್ರೀಂ| ಆನೆಗಳ ಕಾರಿಡಾರ್ ನೀತಿಗೆ ಭಂಗ ತರವುದು ಸಲ್ಲ ಎಂದ ಸುಪ್ರೀಂ| ಸರ್ಕಾರದ ಆದೇಶದ ವಿರುದ್ಧ ಸುಪ್ರೀಂ ಕದ ತಟ್ಟಿದ್ದ ರೆಸಾರ್ಟ್ ಮಾಲೀಕರು|

Supreme Court Upholds Tamil Nadu Govt Nilgiris Elephant Corridor Order
Author
Bengaluru, First Published Jan 23, 2020, 6:34 PM IST

ಚೆನ್ನೈ(ಜ.23): ಆನೆಗಳು ತುಂಬ ಜಾಣ ಪ್ರಾಣಿಗಳಾಗಿದ್ದು, ಅವುಗಳಿಗೆ ದಾರಿ ಮಾಡಿಕೊಡುವುದು ಮನುಷ್ಯರ ಕರ್ತವ್ಯ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ತಮಿಳುನಾಡು ಸರ್ಕಾರದ ‘ನೀಲಗಿರಿ ಎಲಿಫಂಡ್ ಕಾರಿಡಾರ್’ ಆದೇಶವನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್, ಆನೆಗಳಿಗೆ ದಾರಿ ಮಾಡಿಕೊಡುವುದು ಕಡ್ಡಾಯ ಎಂದು ನೀಲಗಿರಿ ಅಭಯಾರಣ್ಯದ ರೆಸಾರ್ಟ್’ಗಳಿಗೆ ಸೂಚನೆ ನೀಡಿದೆ.

ನಾಡಿಗೆ ಬಂದ ಪುಟ್ಟ ಆನೆ ಮರಿಯನ್ನು ಉಪಚರಿಸಿ ಕಾಡಿಗೆ ಬಿಟ್ಟರು!

ಅಭಯಾರಣ್ಯದಲ್ಲಿ ರೆಸಾರ್ಟ್ ಪ್ರಾರಂಭಿಸುವುದು ಕಾನೂನುಬಾಹಿರ ಎಂದಿರುವ ಸುಪ್ರೀಂಕೋರ್ಟ್, ಆನೆಗಳ ಕಾರಿಡಾರ್ ನೀತಿಗೆ ಭಂಗ ತರವುದು ಸಲ್ಲ ಎಂದು ಸ್ಪಷ್ಟಪಡಿಸಿದೆ.

ನೀಲಗಿರಿ ಅಭಯಾರಣ್ಯದ ಎಲಿಫಂಟ್ ಕಾರಿಡಾರ್ ಸಮೀಪವಿರುವ ರೆಸಾರ್ಟ್’ಗಳನ್ನು ಮುಚ್ಚಬೇಕು ಎಂದು ತಮಿಳುನಾಡು ಸರ್ಕಾರ ಆದೇಶ ಹೊರಡಸಿತ್ತು. ಈ ಆದೇಶದ ವಿರುದ್ಧ ರೆಸಾರ್ಟ್ ಮಾಲೀಕರು ಸುಪ್ರೀಂಕೋರ್ಟ್’ಗೆ ಅರ್ಜಿ ಸಲ್ಲಿಸಿದ್ದರು.

ಗ್ರಾಮದೊಳಗೆ ಕಾಡಾನೆಯ ಗಂಭೀರ ನಡಿಗೆ..! ಹೋಗಪ್ಪಾ ಹೋಗು ಎಂದ್ರು ಜನ
ಇದಕ್ಕೂ ಮೊದಲು ಪ್ರಕರಣದ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್, ತಮಿಳುನಾಡು ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿತ್ತು. ಇದೀಗ ಸುಪ್ರೀಂಕೋರ್ಟ್ ಕೂಡ ಸರ್ಕಾರದ ಆದೇಶದ ಪರ ಆದೇಶ ಹೊರಡಿಸಿದೆ.

ಆದರೆ ರೆಸಾರ್ಟ್ ಮಾಲೀಕರ ತೊಂದರೆಗಳನ್ನು ಆಲಿಸಲು ಮಾಜಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ವಿಶೇಷ ಸಮಿತಿಯನ್ನೂ ರಚಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.

Follow Us:
Download App:
  • android
  • ios