ಗುಂಡ್ಲುಪೇಟೆ: ಸಿದ್ದಗಂಗಾ ಮಠಾಧೀಶರಾದ ಡಾ.ಶಿವಕುಮಾರ ಸ್ವಾಮೀಜಿ ಪ್ರಭಾವಕ್ಕೆ ಒಳಗಾಗಿ ಚಾಮರಾಜನಗರ ಜಿಲ್ಲೆ ಕಾಡಂಚಿನ ಕುರುಬರಹುಂಡಿ ಗ್ರಾಮಸ್ಥರು ಊರಿನ ಹೆಸರನ್ನೇ ಬದಲಿಸಿದ್ದಾರೆ! 

ತಾಲೂಕಿನ ಬೇಗೂರು ಹೋಬಳಿಯ ಕುರುಬರಹುಂಡಿ ಗ್ರಾಮದ ಹೆಸರನ್ನು ಬದಲಿಸಿ ಶಿವಕುಮಾರಪುರ ಎಂದು ಮರು ನಾಮಕರಣ ಮಾಡಿಕೊಂಡಿದ್ದರು. 2008 ರ ಸಮಯದಲ್ಲಿ ಗ್ರಾಮಸ್ಥರೆಲ್ಲ ಸೇರಿ ಕುರುಬರಹುಂಡಿ ಹೆಸರಿನ ಬದಲಾಗಿ ಸಿದ್ಧಗಂಗಾಶ್ರೀಗಳಾದ ಡಾ.ಶಿವಕುಮಾರ ಸ್ವಾಮೀಜಿ ಹೆಸರು ಇಡೋಣ ಎಂದು ನಿರ್ಣಯ ಮಾಡಿಕೊಂಡಿದ್ದರು.

ನಾಮಫಲಕದಲ್ಲಿ ಶಿವಕುಮಾರಪುರ ಹೆಸರು ಬರೆಸುವ ಜೊತೆಗೆ ಡಾ.ಶಿವಕುಮಾರ ಸ್ವಾಮೀಜಿ ಹಾಗೂ ಬಸವೇಶ್ವರರ ಭಾವಚಿತ್ರ ಮುದ್ರಿಸಿ ಗ್ರಾಮದ ಅರಳಿ ಕಟ್ಟೆಯ ಬಳಿ ಹಾಕಿದ್ದಾರೆ. ಊರಿನ ಮರುನಾಮಕರಣ ಸಮಾರಂಭಕ್ಕೆ ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿ, ಅಂದಿನ ಶಾಸಕರಾಗಿದ್ದ ಎಚ್.ಎಸ್.ಮಹದೇವ ಪ್ರಸಾದ್ ಭಾಗವಹಿಸಿದ್ದರು.