ನೃತ್ಯ ಕಲಿಕೆಯಿಂದ ಜೀವನದಲ್ಲಿ ತಾಳ್ಮೆ ಸಹನೆ ಏಕಾಗ್ರತೆ ಬೆಳೆಯಲು ಸಾಧ್ಯ ಎಂದು ಸ್ಪೀಕರ್‌ ಯು.ಟಿ. ಖಾದರ್‌ ಅಭಿಪ್ರಾಯಪಟ್ಟರು. ನಗರದ ಪುರಭವನದಲ್ಲಿ ಭರತಾಂಜಲಿ ಕೊಟ್ಟಾರ ಮಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಭಾನುವಾರ ಆಯೋಜಿಸಿರುವ ‘ನೃತ್ಯಾಮೃತಂ-2023’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಂಗಳೂರು (ಜು.10) : ನೃತ್ಯ ಕಲಿಕೆಯಿಂದ ಜೀವನದಲ್ಲಿ ತಾಳ್ಮೆ ಸಹನೆ ಏಕಾಗ್ರತೆ ಬೆಳೆಯಲು ಸಾಧ್ಯ ಎಂದು ಸ್ಪೀಕರ್‌ ಯು.ಟಿ. ಖಾದರ್‌ ಅಭಿಪ್ರಾಯಪಟ್ಟರು. ಅವರು ನಗರದ ಪುರಭವನದಲ್ಲಿ ಭರತಾಂಜಲಿ ಕೊಟ್ಟಾರ ಮಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಭಾನುವಾರ ಆಯೋಜಿಸಿರುವ ‘ನೃತ್ಯಾಮೃತಂ-2023’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭರತನಾಟ್ಯ ಮತ್ತು ಯಕ್ಷಗಾನ ಕರಾವಳಿಯ ಎರಡು ಕಣ್ಣುಗಳು. ಮನುಷ್ಯ ಸುಸಂಸ್ಕೃತ ಜೀವನಕ್ಕೆ ಕಲಾಭಿರುಚಿಯನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ. ಭರತನಾಟ್ಯ ಕಲೆಯು ಆಧ್ಯಾತ್ಮಿಕ ವಿಷಯಗಳ ಅರಿವನ್ನು ನೀಡುತ್ತದೆ. ಕಲೆಯಲ್ಲಿ ಪ್ರಸಿದ್ಧಿ ಪಡೆಯಬೇಕಾದರೆ ಕಠಿಣ ಪರಿಶ್ರಮ ಅತ್ಯಗತ್ಯ. ಸನಾತನ ಭಾರತೀಯ ಸಂಸ್ಕೃತಿ, ಸಂಸ್ಕಾರಗಳನ್ನು ಮಕ್ಕಳಿಗೆ ಹಾಗೂ ಯುವ ಜನಾಂಗಕ್ಕೆ ತಿಳಿಸಿದಾಗ ಮಾತ್ರ ಮುಂದಿನ ಪೀಳಿಗೆಗೆ ಸುಂಸ್ಕೃತರಾಗಲು ನಾವು ಹಾಗೂ ಕಲಾವಿದರು ಪ್ರಯತ್ನ ಮಾಡಬೇಕು ಎಂದರು.

ಪತ್ರಕರ್ತರಿಗೂ ‘ಆರೋಗ್ಯ ಭಾಗ್ಯ’ ನೀಡಲು ಸಿಎಂ ಜತೆ ಚರ್ಚೆ: ಸ್ಪೀಕರ್‌ ಯು.ಟಿ.ಖಾದರ್‌

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್‌, ಗಿರಿ ಪ್ರಕಾಶ್‌ ತಂತ್ರಿ, ನಾಟ್ಯ ಗುರು ಕಲಾಶ್ರೀ ಕಮಲಾ ಭಟ್‌ ಇದ್ದರು.

ಭರತಾಂಜಲಿ ನಿರ್ದೇಶಕ ಶ್ರೀಧರ ಹೊಳ್ಳ ಸ್ವಾಗತಿಸಿದರು. ನಿರ್ದೇಶಕಿ ವಿದುಷಿ ಪ್ರತಿಮಾ ಶ್ರೀಧರ್‌ ವಂದಿಸಿದರು.

ವಿಧಾನಸಭೆಯೊಳಗೆ ಸಂವಿಧಾನ ಪೀಠಿಕೆ ಓದು; ಸ್ಪೀಕರ್ ಖಾದರ್ ಹೊಸ ಸಂಪ್ರದಾಯ