ನಿನ್ನೆ ಮನೋರಂಜನ್ ದೇಶಕ್ಕೆ ಮನರಂಜನೆ ಕೊಟ್ಟಿದ್ದಾನೆ. ವಿಶ್ವಗುರು ನರೇಂದ್ರ ಮೋದಿಯವರನ್ನ ದೇವರು ಎಂದು ಮನೋರಂಜನ್ ಪರಿಗಣಿಸುತ್ತಿದ್ದರು ಎಂದು ಅವರ ತಂದೆ ಹೇಳಿದ್ದಾರೆ. ಫೇಕ್ ಅಂಧಭಕ್ತರು ಯಾವ ರೀತಿ ಇರ್ತಾರೆ ಎಂದು ನಿನ್ನೆ ಸಾಬೀತು ಮಾಡಿದ್ದಾರೆ ಎಂದು ಎಂಎಲ್ಸಿ ಬಿಕೆ ಹರಿಪ್ರಸಾದ್ ಬಿಜೆಪಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಂಗಳೂರು (ಡಿ.14): ನಿನ್ನೆ ಮನೋರಂಜನ್ ದೇಶಕ್ಕೆ ಮನರಂಜನೆ ಕೊಟ್ಟಿದ್ದಾನೆ. ವಿಶ್ವಗುರು ನರೇಂದ್ರ ಮೋದಿಯವರನ್ನ ದೇವರು ಎಂದು ಮನೋರಂಜನ್ ಪರಿಗಣಿಸುತ್ತಿದ್ದರು ಎಂದು ಅವರ ತಂದೆ ಹೇಳಿದ್ದಾರೆ. ಫೇಕ್ ಅಂಧಭಕ್ತರು ಯಾವ ರೀತಿ ಇರ್ತಾರೆ ಎಂದು ನಿನ್ನೆ ಸಾಬೀತು ಮಾಡಿದ್ದಾರೆ ಎಂದು ಎಂಎಲ್ಸಿ ಬಿಕೆ ಹರಿಪ್ರಸಾದ್ ಬಿಜೆಪಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ನಿನ್ನೆಯ ಘಟನೆ ಮೂಲಕ ರಾಷ್ಟ್ರ ಪ್ರಖ್ಯಾತಿಗೆ ಕಪ್ಪು ಮಸಿ ಬಳೆದಿದ್ದಾರೆ. ವಿಶ್ವಗುರು ಆಡಳಿತ ವೈಫಲ್ಯವನ್ನು ನಿನ್ನೆ ಇಡೀ ವಿಶ್ವವೇ ನೋಡಿದೆ. ಆದ್ದರಿಂದ ವಿಶ್ವಗುರು ಇದರ ಹೊಣೆ ಹೊರಬೇಕಾಗುತ್ತದೆ. ಡಿಸೆಂಬರ್ 13 ರಂದು ಯೋಧರು, ಪೊಲೀಸರು ಪಾರ್ಲಿಮೆಂಟ್ ರಕ್ಷಣೆ ಮಾಡಿದ ದಿನ. ಇವರೆಲ್ಲ ಅಂತಹ ದಿನಾನೇ ಹುಡುಕಾತ್ತಾರೆ‌. ಡಿಸೆಂಬರ್ 6, ಬುದ್ದ ಹುಟ್ಟಿದ ದಿನಗಳನ್ನೆ ಇವರು ಹುಡುಕುತ್ತಾರೆ.

ಪಾರ್ಲಿಮೆಂಟ್ ನಲ್ಲಿ ಭದ್ರತಾ ಲೋಪ‌ ವಿಚಾರ; ಸಂಸದ ಪ್ರತಾಪ ಸಿಂಹ ವಿರುದ್ಧ ಎಚ್‌ ವಿಶ್ವನಾಥ ವಾಗ್ದಾಳಿ!

ಮನೋರಂಜನ್ ಹಿನ್ನೆಲೆಯನ್ನ ಕರ್ನಾಟಕ ರಾಜ್ಯದ ಪೊಲೀಸರು ತನಿಖೆ ಮಾಡಬೇಕು. ಸಂಪೂರ್ಣ ತನಿಖೆಯನ್ನ ಮಾಡಬೇಕು. ಕೆಲವರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಲೋಕಸಭೆಯಲ್ಲಿ ಎರಡನೇ ಬಾರಿ ಈ ರೀತಿಯ ಘಟನೆ ನಡೆಯುತ್ತಿದೆ. 75 ವರ್ಷಗಳಲ್ಲಿ ನಾವು ಪಾಸ್ ಕೊಟ್ಟಿದ್ದೇವೆ. ಅವರೆಲ್ಲರೂ ಹೀಗೆ ಮಾಡಿದ್ದಾರಾ? ಯಾಕೆಂದರೆ ವಿಶ್ವಗುರು ಆಗಾಗ ಸಂಶೋಧನೆ ಮಾಡಿ ಅಂಧಭಕ್ತರಿಗೆ ಪಾಠ ಮಾಡ್ತಾ ಇರ್ತಾರೆ. ಮೋರಿಯಲ್ಲಿ ಪೈಪ್ ಹಾಕಿ ಗ್ಯಾಸ್ ಕಂಡುಹಿಡಿದಿದ್ದು ಇದೇ ವಿಶ್ವಗುರು ಅದರ ಮೂಲಕ ಗ್ಯಾಸ್ ಪ್ರಯೋಗ ಮಾಡಲು ಬಂದಿದ್ರಾ ಎಂದು ನೋಡಬೇಕಾಗುತ್ತದೆ ಎಂದು ಪ್ರಧಾನಿ ವಿರುದ್ಧ ಎಂಎಲ್ಸಿ ಬಿಕೆ ಹರಿಪ್ರಸಾದ್ ಕಿಡಿಕಾರಿದರು.

ಪಾರ್ಲಿಮೆಂಟ್‌ ಭದ್ರತಾ ಲೋಪಕ್ಕೆ ರಾಜ್ಯದ ನಂಟು: ಪ್ರತಾಪ್ ಸಿಂಹ ಕಚೇರಿಯಿಂದ ಮನೋರಂಜನ್‌ಗೆ ಸಿಕ್ಕಿತಾ ಪಾಸ್ ?

ಡಿ.13 ರಂದು ಎಂಪಿ ಪ್ರತಾಪ್ ಸಿಂಹರಿಂದ ಪಾಸ್‌ ಪಡೆದಿದ್ದಾರೆನ್ನಲಾದ ಇಬ್ಬರು ಆಗಂತುಕರು ಸ್ಮೋಕ್ ಬಾಂಬ್‌ನೊಂದಿಗೆ ಪಾರ್ಲಿಮೆಂಟ್ ಪ್ರವೇಶಿಸಿದ್ದರು. ಕಲಾಪ ನಡೆಯುವ ವೇಳೆ ವೀಕ್ಷಕರ ಗ್ಯಾಲರಿಯಿಂದ ಸಭಾಂಗಣಕ್ಕೆ ಜಿಗಿದ ಓರ್ವ ಕೇಂದ್ರ ಸರ್ಕಾರದ ಘೋಷಣೆ ಕೂಗುತ್ತ ಗ್ಯಾಸ್ ಸಿಡಿಸಿದ್ದ. ಹಲವು ಸಂಸದರು ಇದು ವಿಷಾನಿಲ ಇರಬಹುದು ಎಂದು ಹೊರಕ್ಕೆ ಓಡಿಹೋಗಿದ್ದರು. ಕೆಲಕಾಲ ಆತಂಕ ಸೃಷ್ಟಿ ಮಾಡಿತ್ತು. ಸ್ಪೀಕರ್ ಬಳಿ ನುಗ್ಗಲು ಯತ್ನಿಸಿದ ಆರೋಪಿಗಳನ್ನು ಇತರೆ ಸಂಸದರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದರು. ಆದರೆ ಈ ಘಟನೆಯಿಂದ ದೇಶದ ಭದ್ರತೆ ವ್ಯವಸ್ಥೆ ಭಾರೀ ಲೋಪವಾಗಿರುವುದು ಕಂಡುಬಂದಿದೆ. ಸದ್ಯ ಈ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ತನಿಖೆಗೆ ಸಮಿತಿ ರಚನೆ ಮಾಡಿದೆ. ಇತ್ತ ಕಾಂಗ್ರೆಸ್ ಇದನ್ನೇ ದಾಳವಾಗಿ ಬಳಸಿಕೊಂಡು ಆಡಳಿತ ಪಕ್ಷದ ವಿರುದ್ಧ ಮುಗಿಬಿದ್ದಿದೆ.