Asianet Suvarna News Asianet Suvarna News

ಪಂಚಮಸಾಲಿ ಮೀಸಲಾತಿ ಹೋರಾಟ ಮತ್ತೆ ಶುರು; ಚಡಚಣದಲ್ಲಿ ಬೃಹತ್ ಸಮಾವೇಶ!

ಪಂಚಮಸಾಲಿ ಸಮಾಜಕ್ಕೆ 2ಎ ಮಿಸಲಾತಿ ಹೋರಾಟ ಮತ್ತೆ ಚುರುಕುಗೊಂಡಿದೆ. ಮೀಸಲಾತಿ ನೀಡೋವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದಿದ್ದ ಸ್ವಾಮೀಜಿ. ಇದೀಗ ವಿಜಯಪುರದ ಚಡಚಣದಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಮತ್ತೆ ಹೋರಾಟಕ್ಕೆ ಸಜ್ಜಾಗಿದ್ದಾರೆ.

Panchmasali reservation struggle starts again huge convention in Chadchan at vijayapur rav
Author
First Published Sep 24, 2023, 4:23 PM IST

ವಿಜಯಪುರ (ಸೆ.24) ಪಂಚಮಸಾಲಿ ಸಮಾಜಕ್ಕೆ 2ಎ ಮಿಸಲಾತಿ ಹೋರಾಟ ಮತ್ತೆ ಚುರುಕುಗೊಂಡಿದೆ. ಮೀಸಲಾತಿ ನೀಡೋವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದಿದ್ದ ಸ್ವಾಮೀಜಿ. ಇದೀಗ ವಿಜಯಪುರದ ಚಡಚಣದಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಮತ್ತೆ ಹೋರಾಟಕ್ಕೆ ಸಜ್ಜಾಗಿದ್ದಾರೆ.

ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಚಡಚಣದಲ್ಲಿ ನಡೆಯಲಿರುವ ಬೃಹತ್ ಸಮಾವೇಶ. ಚಡಚಣ ಪಟ್ಟಣದ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಆರಂಭವಾಗಿ ಪಟ್ಟಣದ ದೇವರನಿಂಬರಗಿ ಕ್ರಾಸ್ ನಿಂದ ಸಮಾವೇಶ ನಡೆಯೋ ಸ್ಥಳದವರೆಗೆ ಬೈಕ್ ರ್ಯಾಲಿ ನಡೆಯಲಿದೆ. ಸಾವಿರಾರು ಪಂಚಮಸಾಲಿ ಸಮುದಾಯದ ಜನರು ರಾಲಿಗೆ ಸಾಥ್. ಪಂಚಮಸಾಲಿಗ ಮೀಸಲಾತಿ ನೀಡದೆ ಪದೇ ಪದೆ ವಂಚಿಸುತ್ತಿರುವ ಸರ್ಕಾರಗಳು. ಈ ಹಿಂದೆ ಭರವಸೆ ನೀಡಿ ಕೈಕೊಟ್ಟಿದ್ದ ಬಿಜೆಪಿ ಸರ್ಕಾರ. ಲೋಕಸಭಾ ಚುನಾವಣೆ ಸಮೀಸುತ್ತಿದ್ದಂತೆ ಮತ್ತೆ ಹೋರಾಟ ಚುರುಕುಗೊಳಿಸಿರುವ ಪಂಚಮಸಾಲಿ ಸಮುದಾಯ. ಇದೀಗ ಕಾಂಗ್ರೆಸ್ ಸರ್ಕಾರದಲ್ಲಿ ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ, ನೀಡುವಂತೆ ಆಗ್ರಹಿಸಿದ್ದಾರೆ.

ಯಡಿಯೂರಪ್ಪ, ಬೊಮ್ಮಾಯಿ ಅನ್ಯಾಯ ಮಾಡಿದ್ದರಿಂದಲೇ ಬಿಜೆಪಿಗೆ ಹಿನ್ನಡೆ: ಕೂಡಲ ಶ್ರೀ

ಇತರೆ ಲಿಂಗಾಯತ ಒಳ ಸಮಾಜಗಳನ್ನು ಕೇಂದ್ರದ ಓಬಿಸಿ ಪಟ್ಟಿಯಲ್ಲಿ ಸೇರಲಿ ಶಿಫಾರಸ್ಸು ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯ. ಸಮಾವೇಶದ ಬಳಿಕ ಇಂಡಿ ತಾಲೂಕಿನ ಝಳಕಿ ಬಳಿಯ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಇಷ್ಟಲಿಂಗ ಪೂಜೆ ಮಾಡಲಿರುವ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ. ಈ ವೇಳೆ ಸ್ವಾಮೀಜಿಗೆ ಸಾಥ್ ನೀಡಲಿರೋ ಸಮಾಜದ ಸಾವಿರಾರು ಜನರು. ಸುಮಾರು 15 ರಿಂದ 30 ನಿಮಿಷಗಳ ಕಾಲ ಎನ್ ಎಚ್ 52 ಬಂದ್ ಮಾಡಿ ಇಷ್ಟಲಿಂಗ ಪೂಜೆ ಮಾಡಲಿರೋ ಸ್ವಾಮೀಜಿ. ಈ ಮೂಲಕ ಮೀಸಲಾತಿ ನೀಡಬೇಕೆಂದು ವಿಶೇಷ ಹೋರಾಟ ಮಡಲಿರೋ ಸ್ವಾಮೀಜಿ. 

ಪಂಚಮಸಾಲಿ ಸಮಾಜಕ್ಕೆ ಡಿಸಿಎಂ ಸ್ಥಾನ ನೀಡಲಿ: ಕೂಡಲ ಶ್ರೀ

Follow Us:
Download App:
  • android
  • ios