Asianet Suvarna News Asianet Suvarna News

ನಾನು ಸಿಎಂ ಆಗಬೇಕು ಅನ್ನೋದು ದೈವ ಇಚ್ಛೆ; ಪಂಚರತ್ನ ಸಮಾವೇಶದಲ್ಲಿ ಹೆಚ್‌ಡಿಕೆ ಭಾಷಣ

ನನಗೆ ರಾಜಕೀಯವಾಗಿ ಜನ್ಮ ಕೊಟ್ಟಿದ್ದು ರಾಮನಗರ ಕ್ಷೇತ್ರ. ಚನ್ನಪಟ್ಟಣದಲ್ಲಿ ತಡರಾತ್ರಿ ನಡೆದ ಪಂಚರತ್ನ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಷಣ.

Pancharatna Yatra convention at Ramnagar hd kumaraswamy statement rav
Author
First Published Dec 20, 2022, 10:57 AM IST

ರಾಮನಗರ (ಡಿ.20) : ನನಗೆ ರಾಜಕೀಯವಾಗಿ ಜನ್ಮ ಕೊಟ್ಟಿದ್ದು ರಾಮನಗರ ಕ್ಷೇತ್ರ. ಚನ್ನಪಟ್ಟಣದಲ್ಲಿ ತಡರಾತ್ರಿ ನಡೆದ ಪಂಚರತ್ನ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಷಣ.

ಕಳೆದ ಬಾರಿ ನಿಮ್ಮ ಒತ್ತಾಯಕ್ಕೆ ಮಣಿದು ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಎರಡೂ ಕಡೆ ನಿಂತೆ. ಹೀಗೆ ಅಕ್ಕಪಕ್ಕದ ತಾಲೂಕಿನಲ್ಲಿ ಯಾವ ರಾಜಕಾರಣಿ ಸಹ ಅಂತಹ ಎದೆಗಾರಿಕೆಯನ್ನ ತೋರಿಸಲ್ಲ. ನಾನು ನಾಮಪತ್ರ ಸಲ್ಲಿಸೋಕೆ ಮಾತ್ರ ಬಂದೆ, ಮತ ಕೇಳೋಕೆ ಬರಲಿಲ್ಲ. ಆದರೂ ಎರಡೂ ಕ್ಷೇತ್ರದ ಜನತೆ, ಕಾರ್ಯಕರ್ತರ ಶ್ರಮದಿಂದ ಜಯಗಳಿಸಿದೆ. ರಾಜಕೀಯವಾಗಿ ರಾಜ್ಯದಲ್ಲೇ ಇತಿಹಾಸ ನಿರ್ಮಿಸಿದೆ.

ಚನ್ನಪಟ್ಟಣ, ರಾಮನಗರ ನನ್ನ ಎರಡು ಕಣ್ಣುಗಳಿದ್ದಂತೆ. ಚುನಾವಣೆ ಸಮಯದಲ್ಲಿ ಬಹಳ ಜನ ನನ್ನ ಮೇಲೆ ಅಪಪ್ರಚಾರ ಮಾಡ್ತಿದ್ರು. ಚನ್ನಪಟ್ಟಣದಲ್ಲಿ ಮತ್ತೆ ನಿಲ್ತಾರೋ.. ಬಿಟ್ಟು ಹೋಗ್ತಾರೋ ಅಂತ ಪ್ರಚಾರ ಮಾಡಿದ್ರು.  ನನ್ನ ಕೆಲ ಕ್ಷೇತ್ರದ ಮುಖಂಡರು ಚನ್ನಪಟ್ಟಣ ಜೊತೆಗೆ, ಸುರಕ್ಷಿತ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದ್ರು.  ಚನ್ನಪಟ್ಟಣದಲ್ಲಿ ಕುತಂತ್ರದಿಂದಲೇ ನನ್ನ ಸೋಲಿಸಬಹುದು ಅಂತ ಆ ಮಾತು ಹೇಳಿದ್ರು. ಆದ್ರೆ ನಾನು ಹೇಳಿದ್ದು ಟೂರಿಂಗ್ ಟಾಕೀಸ್ ಅಲ್ಲಪ್ಪಾ ಅಂತ. ಇದೊಂದು ಬಾರಿ ಕಾರ್ಯಕರ್ತರು ಇದೇ ಕ್ಷೇತ್ರದಲ್ಲಿ ಸ್ಪರ್ದಿಸುವಂತೆ ಒತ್ತಡ ಹಾಕಿದ್ದೀರಿ‌ ಹೀಗಾಗಿ ನಿಮ್ಮ ಒತ್ತಡಕ್ಕೆ ಮಣಿದು ನಾನು ಚನ್ನಪಟ್ಟಣದಲ್ಲಿ ಸ್ರರ್ಧೆ ಮಾಡುತ್ತಿದ್ದೇನೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಕೊನೆಯ ಕ್ಷೇತ್ರದಲ್ಲಿ ಇಂದು ಪಂಚರತ್ನ ಯಾತ್ರೆ ಕಾರ್ಯಕ್ರಮ ಜರುಗುತ್ತಿದೆ. ಒಂದು ತಾಲೂಕು ಕೇಂದ್ರದಲ್ಲಿ ಈ ರೀತಿಯ ಜನ ಸೇರಿಸಲು ಸಾಧ್ಯವಿಲ್ಲ. ಪ್ರೀತಿ ವಿಶ್ವಾಸ ಇದ್ರೆ ಮಾತ್ರ ಈ ರೀತಿಯ ಜನ ಸೇರಿಸಲು ಸಾಧ್ಯ ಎಂದರು.

Assembly election: 2023ರ ವಿಧಾನಸಭಾ ಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಎರಡು ದಿನಗಳ ಹಿಂದೆ ಒಂದು ಪತ್ರಿಕೆಯಲ್ಲಿ ಕೇಂದ್ರ ಸರ್ಕಾರದ ವರದಿ ನೋಡಿದ್ದೆ. ರಾಜ್ಯದಲ್ಲಿ 57% ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ಹುದ್ದೆ ಖಾಲಿ ಇದೆ ಎಂದು ವರದಿಯಾಗಿತ್ತು. ಇದೊಂದೇ ಉದಾಹರಣೆ ಸಾಕು ನಮ್ಮ ಯೋಜನೆಯ ಶಿಕ್ಷಣ ಅವಶ್ಯಕತೆ ಎಷ್ಟಿದೆ ಅಂತ ಅರ್ಥೈಸಿಕೊಳ್ಳಲು.

ನಿಖಿಲ್ ಕುಮಾರಸ್ವಾಮಿ ಅವರನ್ನು ಚುನಾವಣೆಗೆ ನಿಲ್ಲಿಸೋಕೆ ನಾನು ಒಪ್ಪಿರಲಿಲ್ಲ. ಅಲ್ಲಿ ಸ್ಥಳೀಯ ಅಭ್ಯರ್ಥಿ ಇಲ್ಲದ ಪರಿಣಾಮ ನಿಖಿಲ್ ಅನಿವಾರ್ಯ ಸ್ಪರ್ಧೆ ಮಾಡಿ ಅಂತ ಅನಿತಾ ಕುಮಾರಸ್ವಾಮಿ ಘೋಷಣೆ ಮಾಡಿದ್ರು. ಹೀಗಾಗಿ ಇವತ್ತು ಮೊದಲ ಪಟ್ಟಿ ಬಿಡುಗಡೆ‌ ಮಾಡಿ ಬಂದಾಗ ಇಲ್ಲಿ ನನ್ನ  ಅಭೂತಪೂರ್ವ ಸ್ವಾಗತ ಮಾಡಿದ್ದು ಇತಿಹಾಸ. 2023 ರ ಚುನಾವಣೆಯಲ್ಲಿ ನಮ್ಮ ಪಕ್ಷ ಗೆದ್ದು, ನಾನು ಸಿಎಂ ಆಗಬೇಕು ಅನ್ನೋದು ದೈವ ಇಚ್ಛೆ. ಇದಕ್ಕೆ ನಿಮ್ಮ ಆಶೀರ್ವಾದ ಇರಬೇಕು ಎಂದರು.

ನಮ್ಮ ರಾಜ್ಯದಲ್ಲಿ ಹಣದ ಕೊರತೆಯಿಲ್ಲ. ಭಾಗ್ಯಲಕ್ಷ್ಮೀ ತುಂಬಿದ್ದಾಳೆ. ಕನಕಪುರ ಕ್ಷೇತ್ರದ ಮಹಾ ಜನತೆ ಸಾಮಾನ್ಯ ಕಾರ್ಯಕರ್ತನನ್ನು ಚುನಾವಣೆಗೆ  ನಿಲ್ಲಿಸಿದ್ರೂ 60-70 ಸಾವಿರ ಮತ ನೀಡ್ತಾರೆ. ಕನಕಪುರ ತಾ. ಸಾತನೂರಿನಲ್ಲಿ ಮಧ್ಯರಾತ್ರಿ 1:45 ಗಂಟೆಗೆ ಹೋಗಿದ್ದೆ. ಅಲ್ಲಿ ಅರ್ಧ ರಾತ್ರಿಯಲ್ಲೂ ಕನಕಪುರ ಜನ ನಮ್ಮನ್ನ ಸ್ವಾಗತ ಮಾಡಿದ್ರು. ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೈಸ್ ಕಂಪನಿ ಹತ್ತಿರ ಹೋಗಿ ಒಬ್ಬೊಬ್ಬರು ಒಂದು ಪ್ಯಾಕೆಟ್ ತಗೊಂಡು ಬಂದ್ರು. ಆದರೆ ನಾನು ರೈತರ ಜಮೀನು ಉಳಿವಿಗಾಗಿ ಹೋರಾಟ ಮಾಡಿದೆ. ಆಗಿನ ಸಮ್ಮಿಶ್ರ ಸರ್ಕಾರದ ಮಹಾ ನಾಯಕರು ನನ್ನ ಬಿಡಲಿಲ್ಲ. ಸಮ್ಮಿಶ್ರ ಸರ್ಕಾರ ಇದ್ದಾಗ ಹಣ ಇದ್ದಾಗ ಬೊಕ್ಕಸದಲ್ಲಿ ಹಣ ಇಲ್ಲ ಹೇಗೆ ಸಾಲಮನ್ನಾ ಮಾಡ್ತಾರೆ ಅಂತಾ ಅಂದ್ರು. ಆದರೆ ಸರ್ಕಾರ ಇದ್ದ ಹದಿನಾಲ್ಕು ತಿಂಗಳಲ್ಲಿ ರೈತರ ಸಾಲಮನ್ನಾ ಮಾಡಿದೆ ಎಂದರು.

ಕಣ್ವಾ ರಸ್ತೆ ಕಾಮಗಾರಿ ವಿಳಂಬವಾದಾಗ ಅಧಿಕಾರಿಗಳನ್ನು ಮನೆಗೆ ಕರೆಸಿ ಎಚ್ಚರಿಕೆ ಕೊಟ್ಟೆ, ಕಳಪೆ ಕಾಮಗಾರಿ ಆದ್ರೆ ಬ್ಲ್ಯಾಕ್ ಲಿಸ್ಟ್ ಹಾಕಿಸ್ತೀನಿ ಅಂತಾ ವಾರ್ನಿಂಗ್ ಮಾಡಿದೆ. ಇಲ್ಲಿನ ಭಗೀರಥ ಅಂತ ಕಟೌಟ್ ಹಾಕಿಸಿಕೊಳ್ಳುವನು ನನ್ನ ಬಗ್ಗೆ ಮಾತಾಡ್ತಾನೆ. ಸಿಪಿ ಯೋಗೇಶ್ವರ್ ಹೆಸರೇಳದೆ ಪರೋಕ್ಷವಾಗಿ ಟಾಂಗ್  ನೀಡಿದ ಕುಮಾರಸ್ವಾಮಿ.

6 ತಿಂಗಳಲ್ಲಿ ಮೂರು ಜನ ತಹಶಿಲ್ದಾರ್ ಬಂದ್ರೂ ಯಾವ ಅಧಿಕಾರಿಗಳ ಹತ್ತಿರ ಮಂತ್ಲಿ ಕಲೆಕ್ಟ್ ಮಾಡಿಲ್ಲ. ಅವರ ಯೋಗ್ಯತೆ ಏನು ಅಂತ ನನಗೆ ಗೊತ್ತು. ಅವನು ವರ್ಗಾವಣೆ ಮಾಡಿಸ್ತೇನೆ ಅಂತ ಅಧಿಕಾರಿಗಳಿಗೆ ಭಯ ಹುಟ್ಟಿಸ್ತಾ ಏನೇನೆಲ್ಲ ಮಾಡ್ತಾನೆ ಅಂತಾ ನನಗೆ ಗೊತ್ತಿದೆ. ಈ ರಾಜ್ಯದ ಸಿಎಂ ಆಗಿದ್ದು ನಾನು ಆಕಸ್ಮಿಕ. ಯಾಕಂದ್ರೆ ಬೇರೆಯವರ ಮುಲಾಜಿಗೆ ಸೀಮಿತವಾಗಿದ್ದೆ. ಹಾಸನದಲ್ಲಿ ಹುಟ್ಟಿದ್ರೂ ಇಡೀ ದೇಶಕ್ಕೆ ನನ್ನನ್ನು ಪರಿಚಯಸಿದ್ದು ರಾಮನಗರದ ಜನತೆ. ಅವರು ಕೊಟ್ಟ ಶಕ್ತಿಯ ಪರಿಣಾಮ ಇದು ಸಾಧ್ಯವಾಗಿದೆ ಎಂದರು.

ಹೆಚ್‌.ಡಿ.ಕೆ ಅಭಿಮಾನಿಗಳಿಗೆ ಡಬಲ್‌ ಸಂಭ್ರಮ: ಪಂಚರತ್ನ ಯಾತ್ರೆ ಜತೆಗೆ ಹುಟ್ಟುಹಬ್ಬದ ಖುಷಿ

ರಾಜ್ಯದಲ್ಲಿ ಅಪಾರ ಸಂಪತ್ತು ಲೂಟಿ ಆಗ್ತಿದೆ:

ನಮ್ಮ ರಾಜ್ಯದಲ್ಲಿ ಅಪಾರ ಸಂಪತ್ತು ಲೂಟಿ ಆಗ್ತಿದೆ. ನಿನ್ನೆ ಕನಕಪುರದಲ್ಲಿ ಒಂದು ಮಾತು ಹೇಳಿದ್ದೆ
ಈ ಜಿಲ್ಲೆಯ ಜನರು  ರಾಜಕೀಯವಾಗಿ ಇಬ್ಬರು ಮಕ್ಕಳನ್ನ ಬೆಳೆಸಿದ್ದೀರಿ. ಒಂದು ಡಿ.ಕೆ ಶಿವಕುಮಾರ್ ಮತ್ತೆ ನಾನು ಎಂದು ಹೇಳಿದ್ದೆ. ಇಲ್ಲಿನ ಜನ ಡಿ.ಕೆ.ಶಿವಕುಮಾರ್ ಸಹ ಸಿಎಂ ಆಗಬೇಕು ಅಂತಿದ್ದಾರೆ ನಾನು ಈಗಾಗಲೇ ಎರಡುಬಾರಿ ಸಿಎಂ ಆಗಿದ್ದೇನೆ. ಆದ್ರೆ ನಾನು ಯಾವ ರೀತಿ ನಡೆದುಕೊಳ್ತೀನಿ, ಡಿ.ಕೆ ಶಿವಕುಮಾರ್ ಹೇಗೆ ನಡೆದುಕೊಳ್ತಾರೆ..? ಎಂದು ಯೋಚಿಸಿ ನೋಡಿ. ಇಬ್ಬರ ನಡುವಿನ ಗುಣಾವಗುಣಗಳನ್ನು ನೋಡಿಯೇ ಕ್ಷೇತ್ರದ ಜನ ನನ್ನನ್ನು ಮತ್ತೆ ಸಿಎಂ ಆಗಬೇಕು ಎಂದು ಹೇಳುತ್ತಿದ್ದಾರೆ. ಚಿಕ್ಕ ಮಕ್ಕಳಿಂದ ಎಲ್ಲರೂ ಹೇಳ್ತಾರೆ ಕುಮಾರಣ್ಣ ಸಿಎಂ ಆಗಬೇಕು ಎಂದು ಹೇಳುತ್ತಿದ್ದಾರೆ. ಕನಪುರದ ಜನ ಇಬ್ಬರು ಮಕ್ಕಳನ್ನು ಬೆಳೆಸಿದ್ದಾರೆ. ಇದರಲ್ಲಿ ಪ್ರಾಮಾಣಿಕ ರಾಜಕಾರಣ ಯಾರು ಮಾಡಿದ್ದಾರೆ ಎಂದು ನೀವೇ ತೀರ್ಮಾನ ಮಾಡಿ ಎಂದು ಕನಕಪುರದ ಜನರಿಗೆ ಹೇಳಿದ್ದೆ. ಈಗಲೂ ಹೇಳುತ್ತೇನೆ. ಕನಕಪುರ ಜೆಡಿಎಸ್ ಭದ್ರಕೋಟೆ. ಆದರೆ ನಮ್ಮ ಕೆಲ ಮುಖಂಡರಿಂದ ನಮ್ಮ ಕಾರ್ಯಕರ್ತರು ನೋವು ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಶೀಘ್ರ ಅಂತ್ಯ ಹಾಕುತ್ತೇನೆ. ನಮ್ಮ ಕಾರ್ಯಕರ್ತರನ್ನು ಪ್ರೋತ್ಸಾಹಿಸಬೇಕೇ ಹೊರತು ನೋವು ಕೊಡಬಾರದು ಎಂದು ಮುಖಂಡರಿಗೆ ಸಲಹೆ ನೀಡಿದರು.

ಪಂಚರತ್ನ ಯಾತ್ರೆಯಿಂದ ಬಿಜೆಪಿ, ಕಾಂಗ್ರೆಸ್‌ಗೆ ನಡುಕ: ಎಚ್‌ಡಿಕೆ

ಮಾಧ್ಯಮದ ಮೇಲೆ ಹೆಚ್‌ಡಿಕೆ ಸಿಡಿಮಿಡಿ:

ಪಂಚರತ್ನ ಯಾತ್ರೆ ಸಮಾವೇಶದಲ್ಲಿ ಕುಮಾರಸ್ವಾಮಿಯವರು ಮಾಧ್ಯಮದ ಮೇಲೆ ಸಿಡಿಮಿಡಿಗೊಂಡ ಪ್ರಸಂಗ ನಡೆಯಿತು. ನಾನು ಸಾಲಮನ್ನಾ ಮಾಡಿದಾಗ ಒಕ್ಕಲಿಗ ಸಮಾಜಕ್ಕೋಸ್ಕರ ಮಾಡಿದ್ದಾರೆ ಎಂದು ಅಪಪ್ರಚಾರ ಮಾಡಿದ್ರು. ನನ್ನ ಬಣ್ಣದಿಂದ ಮಾಧ್ಯಮದವರು ಗೇಲಿ ಮಾಡ್ತಾರೆ. ಮುಖ ಕಪ್ಪು ಇದೆಯೆಂದು ಟ್ರೋಲ್ ಮಾಡ್ತಾರೆ. ಅಲ್ಲ ಸ್ವಾಮಿ ನನಗೂ ಸ್ವಾಭಿಮಾನ ಇದೆ. ಅವನ್ಯಾರೋ ಒಬ್ಬ ಟಿವಿಯವನು ಸರ್ಕಾರ ತೆಗೆಯೋವರೆಗೂ ಗಡ್ಡ ತೆಗಿಯಲ್ಲ ಅಂತ ಬಿಟ್ಟಿದ್ದ ಚನ್ನಪಟ್ಟಣ ಪಂಚರತ್ನಯಾತ್ರೆ ಸಮಾವೇಶದಲ್ಲಿ ಮಾಧ್ಯಮದ ಮೇಲೆ ಮಾಜಿ ಸಿಎಂ ಹೆಚ್ಡಿಕೆ ಗರಂ. ಮಾಧ್ಯಮದವರಿಗೆ ಕೈ ಮುಗಿದು ಹೇಳ್ತೀನಿ. ನನ್ನ ಬಣ್ಣದ ಬಗ್ಗೆ ಅಲ್ಲ ಕಣ್ರಯ್ಯ ನಮ್ಮ ಪಂಚರತ್ನ ಯಾತ್ರೆಯ ಯೋಜನೆಗಳ ಬಗ್ಗೆ ತೋರಿಸ್ರಯ್ಯಾ ಎಂದು ಮಾಧ್ಯಮದವರಿಗೆ ಕೈಮುಗಿದು ಮನವಿ ಮಾಡಿಕೊಂಡರು.

Follow Us:
Download App:
  • android
  • ios