ಪಂಚಮಸಾಲಿ ಮೀಸಲಾತಿ; ಮತ್ತೆ ಹೋರಾಟಕ್ಕೆ ಚಾಲನೆ ನೀಡಿದ ಬಸವ ಜಯಮೃತ್ಯುಂಜಯಶ್ರೀ

ಪಂಚಮಸಾಲಿಗಳಿಗೆ 2A ಮೀಸಲಾತಿ ನೀಡುವಂತೆ ಒತ್ತಾಯಿಸಿ ಮತ್ತೆ ಹೋರಾಟಕ್ಕೆ ಚಾಲನೆ ನೀಡಿದ ಬಸವ ಜಯಮೃತ್ಯುಂಜಯ ಶ್ರೀಗಳು. ನವೆಂಬರ್ 10 ರಂದು ರಾಷ್ಟ್ರೀಯ ಹೆದ್ದಾರಿ ತಡೆ ಮಾಡಿ ಪ್ರತಿಭಟನೆ ನಡೆಸಲು ನಿರ್ಧಾರ.

Panchamasali reservation issue Basava jayamrityunjaya shree statement at davanagere rav

ದಾವಣಗೆರೆ (ನ.2): ಪಂಚಮಸಾಲಿಗಳಿಗೆ 2A ಮೀಸಲಾತಿ ನೀಡುವಂತೆ ಒತ್ತಾಯಿಸಿ ಮತ್ತೆ ಹೋರಾಟಕ್ಕೆ ಚಾಲನೆ ನೀಡಿದ ಬಸವ ಜಯಮೃತ್ಯುಂಜಯ ಶ್ರೀಗಳು. ನವೆಂಬರ್ 10 ರಂದು ರಾಷ್ಟ್ರೀಯ ಹೆದ್ದಾರಿ ತಡೆ ಮಾಡಿ ಪ್ರತಿಭಟನೆ ನಡೆಸಲು ನಿರ್ಧಾರ.

ಇಂದು ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಪ್ರತಿಭಟನೆಗೆ ನಿರ್ಧಾರ ಮಾಡಿದ್ದೇವೆ. 2A ಮೀಸಲಾತಿ ಜೊತೆ ಲಿಂಗಾಯತ ಉಪ ಪಂಗಡಗಳನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸಲು ಒತ್ತಾಯ ಮಾಡುತ್ತೇವೆ. ಕಳೆದ ಬಿಜೆಪಿ ಸರ್ಕಾರ ಮೀಸಲಾತಿ ಘೋಷಣೆ ಮಾಡಿತು. ಅದರೆ ನೀತಿ ಸಂಹಿತಿ ಹಿನ್ನಲೆ ಜಾರಿಯಾಗಲಿಲ್ಲ. ಹೀಗಾಗಿ ಆಗ ಅನುಷ್ಠಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಆದರೆ ಈ ಸರ್ಕಾರಕ್ಕೆ ಕೂಡ ಪಂಚಮಸಾಲಿ ಸಮಾಜದ ಋಣ ಇದೆ.  ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮನವಿ ಮಾಡಿದ್ದೆವು. ಆದರೆ ಸಮಯಾವಕಾಶ ಕೇಳಿದ್ದರು. ತಿಂಗಳಾದರೂ ಆ ಬಗ್ಗೆ ಪ್ರತಿಕ್ರಿಯಿಸದ ಸಿಎಂ. ಹೀಗಾಗಿ ಪದೇಪದೆ ಸರ್ಕಾರದ ಮನೆ ಭಾಗಲಿಗೆ ಹೋಗಿ ಕೇಳುವುದಕ್ಕಿಂತ ಹೋರಾಟ ಮಾಡುವುದು ಲೇಸು ಎಂದುಕೊಂಡು ಹೋರಾಟಕ್ಕೆ ಇಳಿದಿದ್ದೇವೆ ಎಂದರು.

ಪಂಚಮಸಾಲಿ ಮೀಸಲಾತಿಗಾಗಿ ನಾಳೆ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ: ಬಸವ ಜಯಮೃತ್ಯುಂಜಯ ಶ್ರೀ

ಸರ್ಕಾರ ಈಗ ಅಧಿಕಾರಕ್ಕೆ ಬಂದು ಕೆಲವೇ ತಿಂಗಳಾಗಿವೆ. ನಾವು ಮೀಸಲಾತಿಗೆ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೂತು  ಇಷ್ಟಲಿಂಗ  ಪೂಜೆಯ ಮೂಲಕ ಹೋರಾಟ ಶುರುಮಾಡುತ್ತೇವೆ. ಸರ್ಕಾರದಿಂದ ಬಂದ ನಂತರ ಗ್ಯಾರೆಂಟಿ ಯೋಜನೆ ಬಗ್ಗೆ ಯೋಚಿಸದೆ. ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ, ನಮ್ಮ‌ 2A ಮೀಸಲಾತಿ ಕೊಡಿ ಎಂದು ಮನವಿ ಮಾಡುತ್ತೇವೆ. ಲೋಕಾಸಭಾ ಚುನಾವಣೆಯ ಒಳಗೆ ನಮಗೆ ಮೀಸಲಾತಿ ನೀಡಬೇಕು. ಇಲ್ಲವಾದ್ರೆ ಲೋಕಾಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಬಹಳ ಹೊಡೆತ ಬೀಳುತ್ತದೆ ಎಂದು ಎಚ್ಚರಿಸಿದರು.

ಇನ್ನು ಜಾತಿ ಗಣತಿ ಬಿಡುಗಡೆ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಶ್ರೀಗಳು, ಜಾತಿ ಗಣತಿ ಬಗ್ಗೆ ನಮಗೆ ಯಾವುದೇ ವಿರೋಧ ಇಲ್ಲ. ಲಿಂಗಾಯತ ಒಕ್ಕಲಿಗರ ಸಮಾಜದ ಮುಖಂಡರು ಸ್ವಾಮೀಜಿಗಳನ್ನು ಸೇರಿಸಿ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿ ಸರ್ಕಾರ ಎರಡು ಸಮಾಜದ ಶಾಸಕರನ್ನು ಸೇರಿಸಿ ಸಭೆ ಮಾಡಿ ಮನವರಿಕೆ ಮಾಡಿಕೊಳ್ಳಲಿ. ಲಿಂಗಾಯತ ಒಳ ಪಂಗಡದವರು ಎಲ್ಲಿ ಸೌಲಭ್ಯ ಕಟ್ ಆಗುತ್ತದೆ ಎಂದು ಲಿಂಗಾಯತ ಎಂದು ಬರೆಸಿಲ್ಲ. ಇದರಿಂದ ಲಿಂಗಾಯತ ಸಮುದಾಯದ ಸಂಖ್ಯೆ ಕಡಿಮೆಯಾಗಿದೆ ಎನ್ನುವುದು ನಮ್ಮ ಆತಂಕ. ಜಾತಿ ಗಣತಿ ಪ್ರಾಮಾಣಿಕವಾಗಿರಲಿ ಎಲ್ಲಾ ಸಮುದಾಯಕ್ಕೂ ನ್ಯಾಯ ಸಿಗಲಿ ಎಂದು ಅಭಿಪ್ರಾಯಪಟ್ಟರು. 

ಲೋಕಸಭಾ ಚುನಾವಣೆಯೊಳಗೆ ಮೀಸಲಾತಿ ನೀಡಿ ಇಲ್ಲವೇ ಹೋರಾಟ ಎದುರಿಸಿ; ಜಯಮೃತ್ಯುಂಜಯ ಸ್ವಾಮೀಜಿ ವಾರ್ನಿಂಗ್!

2A ಮೀಸಲಾತಿ ನ್ಯಾ, ಜಯಪ್ರಕಾಶ್ ಹೆಗಡೆ ವರದಿ ವಿಚಾರ ಸಂಬಂಧ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಗಳು ಜಯಪ್ರಕಾಶ್ ಹೆಗಡೆಯವರ ಮಧ್ಯಂತರ ವರದಿ ನಮ್ಮ‌ಪರವಾಗಿ ಬಂದಿದೆ. ಆದರೆ ಆಗ ಕೊಡಬೇಕಿತ್ತು ಕೊಟ್ಟರು. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. 2A ಮೀಸಲಾತಿಯಿಂದ ಅಲ್ಲಿರುವ ಜಾತಿಗಳಿಗೆ ಅನ್ಯಾಯವಾಗುತ್ತವೆ ಎಂದುಕೊಂಡಿದ್ದಾರೆ. ಯಾರಿಗೂ ಅನ್ಯಾಯ ವಾಗದಂತೆ ಮೀಸಲಾತಿ ನೀಡಿ ಎಂದು ಒತ್ತಾಯಿಸಿದರು.

Latest Videos
Follow Us:
Download App:
  • android
  • ios