ರಾಜ್ಯಕ್ಕಿದು ಬೆಚ್ಚಿಬೀಳಿಸುವ ವರದಿ, 10 ಸಾವಿರಕ್ಕೂ ಅಧಿಕ ಕಂದಮ್ಮಗಳು ನಾಪತ್ತೆ
ರಾಜ್ಯದಲ್ಲಿ 10 ಸಾವಿರಕ್ಕೂ ಅಧಿಕ ಮಕ್ಕಳು ನಾಪತ್ತೆಯಾಗಿದ್ದು, ವರ್ಷದಿಂದ ವರ್ಷಕ್ಕೆ ಸಂಖ್ಯೆ ಏರಿಕೆಯಾಗುತ್ತಿದೆ. 2018 ರಿಂದ 2023ರ ತನಕ ಬರೋಬ್ಬರಿ 10,687 ಮಕ್ಕಳು ನಾಪತ್ತೆಯಾಗಿದ್ದಾರೆ. ಇದರಲ್ಲಿ ಬರೋಬ್ಬರಿ 1578 ಕಂದಮ್ಮಗಳು ಇನ್ನೂ ಪತ್ತೆಯಾಗಿಲ್ಲ.
ಬೆಂಗಳೂರು (ಫೆ.12): ರಾಜ್ಯದಲ್ಲಿ 10 ಸಾವಿರಕ್ಕೂ ಅಧಿಕ ಮಕ್ಕಳು ನಾಪತ್ತೆಯಾಗಿದ್ದು, ವರ್ಷದಿಂದ ವರ್ಷಕ್ಕೆ ಸಂಖ್ಯೆ ಏರಿಕೆಯಾಗುತ್ತಿದೆ. 2018 ರಿಂದ 2023ರ ತನಕ ಬರೋಬ್ಬರಿ 10,687 ಮಕ್ಕಳು ನಾಪತ್ತೆಯಾಗಿದ್ದಾರೆ. ಇದರಲ್ಲಿ ಬರೋಬ್ಬರಿ 1578 ಕಂದಮ್ಮಗಳು ಇನ್ನೂ ಪತ್ತೆಯಾಗಿಲ್ಲ.
ರಾಜ್ಯಪಾಲ ಭಾಷಣದಲ್ಲಿ ಕೇಂದ್ರದ ವಿರುದ್ಧ ಟಾಕ್‌ಫೈಟ್, ತೆರಿಗೆ ವಿಚಾರದಲ್ಲಿ ಕರ್ನಾಟಕಕ್ಕೆ ತಾರತಮ್ಯ ಉಲ್ಲೇಖ
ಮಕ್ಕಳ ನಾಪತ್ತೆ ಪ್ರಕರಣದ ಅಂಕಿ ಅಂಶ ಬೆಚ್ಚಿ ಬೀಳಿಸುವಂತಿದೆ. ರಾಜಧಾನಿಯಲ್ಲಿ 3571 ಮಕ್ಕಳ ಮಿಸ್ಸಿಂಗ್ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಕಂದಮ್ಮಗಳ ಪೈಕಿ ಹೆಣ್ಣು ಮಕ್ಕಳೇ ಅಧಿಕ ಸಂಖ್ಯೆಯಲ್ಲಿದ್ದಾರೆ. 3,277 ಗಂಡು ಮಕ್ಕಳು, 7410 ಹೆಣ್ಣು ಮಕ್ಕಳು ಕಣ್ಮರೆಯಾಗಿದ್ದಾರೆ. ಇದರಲ್ಲಿ ಬರೋಬ್ಬರಿ 1,578 ಮಕ್ಕಳು ಇನ್ನೂ ಪತ್ತೆಯಾಗಿಲ್ಲ. 383 ಗಂಡು ಮಕ್ಕಳು ,586 ಹೆಣ್ಣು ಮಕ್ಕಳು ಏನಾದವು? ಎಲ್ಲಿ ಹೋದವು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಕೆಲ ಮಕ್ಕಳ ಕಣ್ಮರೆಯ ಹಿಂದಿನ ಕಾರಣವೇ ನಿಗೂಢವಾಗಿದೆ.
ಸಹೋದ್ಯೋಗಿ ಅಂತ್ಯಸಂಸ್ಕಾರಕ್ಕೆ ತೆರಳಿದ ರೈಲ್ವೆ ಸಿಬ್ಬಂದಿ, ಚಾಲಕರಿಲ್ಲದೆ ಮುಂಬೈನಲ್ಲಿ 147 ರೈಲು ಸಂಚಾರ ಸ್ಥಗಿತ!
ವರ್ಷ | ಗಂಡು | ಹೆಣ್ಣು | ಒಟ್ಟು |
2018 | 404 | 468 | 872 |
2019 | 835 | 1317 | 2152 |
2020 | 432 | 1150 | 1582 |
2021 | 501 | 1647 | 2148 |
2022 | 753 | 1860 | 2613 |
2013 | 352 | 968 | 1320 |
ಒಟ್ಟು | 3277 | 7410 | 10,687 |
ಈವರೆಗೆ ಪತ್ತೆಯಾಗಿರುವ ಪ್ರಕರಣಗಳು:
ವರ್ಷ | ಗಂಡು | ಹೆಣ್ಣು | ಒಟ್ಟು |
2018 | 378 | 452 | 830 |
2019 | 781 | 1241 | 2022 |
2020 | 410 | 1084 | 1494 |
2021 | 467 | 1501 | 1968 |
2022 | 682 | 1578 | 2260 |
2013 | 176 | 359 | 535 |
ಒಟ್ಟು | 6215 | 6215 | 9109 |