* ಕರ್ನಾಟಕ ಕಾಂಗ್ರೆಸ್‌ನಿಂದ 'Vaccinate Karnataka' ಅಭಿಯಾನ* ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಜಾಗೃತಿ ಅಭಿಯಾನ* ಐದು ಸಾವಿರ ಮಂದಿ ಹಿಂದಿಕ್ಕಿ ಮೊದಲ ವಿನ್ನರ್ ಆದ ಉಜಿರೆಯ ಬಾಲಕ

ಬೆಂಗಳೂರು(ಜೂ.21): ದೇಶಾದ್ಯಂತ ಜನರಲ್ಲಿ ಕೊರೋನಾ ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಕರ್ನಾಟಕದಲ್ಲೂ ಜೂನ್ 19ರಿಂದ ಇಂತಹುದ್ದೊಂದು ಅಭಿಯಾನ ಆರಂಭಗೊಂಡಿತ್ತು. ಹೀಗಿರುವಾಗ ಅನೇಕ ಮಂದಿ ಟ್ವಿಟರ್, ಫೇಸ್‌ಬುಕ್, ಇನ್ಸ್ಟಾಗ್ರಾಂನಂತಹ ಸಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಪೋಸ್ಟ್ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಸುಮಾರು ಐದು ಸಾವಿರ ಮಂದಿ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದು, ಐದನೇ ತರಗತಿ ಬಾಲಕ ಅಖಿಲೇಶ್ ಡಿ. ಜೈನ್ ಜಯಶಾಲಿಯಾಗಿದ್ದಾರೆ.

ಕರ್ನಾಟಕ ಕಾಂಗ್ರೆಸ್‌ನ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಈ ಬ್ಗಗೆ ಟ್ವೀಟ್ ಮಾಡಿದ್ದು, ಐದನೇ ತರಗತಿ ಬಾಲಕ Vaccinate Karnatakaದ ಮೊದಲ ವಿಜೇತನಾಗಿದ್ದಾನೆ. ಉಜಿರೆಯ ಬಾಲಕನ ವಿಡಿಯೋ ಆಕರ್ಷಕವಾಗಿದೆ ಎಂದಿದ್ದಾರೆ. ಅಲ್ಲದೇ ಇನ್ನೂ 99 ಮಕ್ಕಳಿಗೆ ಜಯಶಾಲಿಗಳಾಗಿ ಟ್ಯಾಬ್‌ ಗೆಲ್ಲುವ ಅವಕಾಶ ಇದೆ ಎಂದಿದ್ದಾರೆ. ಐದು ಸಾವಿರ ಮಂದಿ ಪಾಲ್ಗೊಂಡ ಈ ಅಭಿಯಾನದಲ್ಲಿ ಅಖಿಲೇಶ್ ಮೊದಲ ವಿನ್ನರ್ ಆಗಿದ್ದಾರೆ.

Scroll to load tweet…

ಕಾಂಗ್ರೆಸ್‌ನಿಂದ ಜಾಗೃತಿ ಅಭಿಯಾನ

ಜನರಲ್ಲಿ ಕೊರೋನಾ ನಿರ್ಮೂಲ ನನಗೆ ಲಸಿಕೆ ಹಾಕಿಸಲು ಜಾಗೃತಿ ಮೂಡಿಸಲು ಕಾಂಗ್ರೆಸ್‌ ಪಕ್ಷ 'ವ್ಯಾಕ್ಸಿನೇಟ್ ಕರ್ನಾಟಕ' ಅಬಿಯಾನನ ಆರಂಭಿಸಿದೆ. ಇದರಲ್ಲಿ ಹಿರಿಯರಿಗೆ ಲಸಿಕೆ ಹಾಕಿಸಲು ಕ್ರಿಯಾತ್ಮಕವಾಗಿ ಪ್ರೋತ್ಸಾಹಿಸಲು ಹೇಳಲಾಗಿದೆ. 

ನೀವೂ ಭಾಗವಹಿಸಿ:

ಇನ್ನೂ 99 ಮಂದಿ ಈ ಅಭಿಯಾನದಲ್ಲಿ ಗೆಲುವಿನ ನಗೆ ಬೀರುವ ಸಾಧ್ಯತೆಗಳಿವೆ. ಇದಕ್ಕಾಗಿ ಲಸಿಕೆ ಪರ ಜಾಗೃತಿ ಮೂಡಿಸುವ ವಿಡಿಯೋ ಮಾಡಿ ಟ್ವಿಟರ್, ಫೇಸ್‌ಬುಕ್, ಇನ್ಸ್ಟಾಗ್ರಾಂನಲ್ಲಿ #VaccinateKarnataka ಎಂಬ ಹ್ಯಾಷ್‌ ಟ್ಯಾಗ್‌ನಡಿ ಪೋಸ್ಟ್ ಮಾಡಿ.