ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಆನ್‌ಲೈನ್ ರಮ್ಮಿ ಆಟ: ಅರುಣ್ ಕುಮಾರ್ ಹೇಳಿದ್ದೇನು?
ಕರ್ನಾಟಕದ ವಿಧಾನ ಪರಿಷತ್ ಅಧಿವೇಶನದಲ್ಲಿ ಸೋಮವಾರ ಆನ್‌ಲೈನ್ ಜಂಗ್ಲೀ ರಮ್ಮಿ ಆಟದ ಬಗ್ಗೆ ಸದಸ್ಯ ಅರುಣ್ ಕುಮಾರ್ ಚರ್ಚೆ ಮಾಡಿದರು.
ಬೆಂಗಳೂರು (ಜು.10): ದೇಶಾದ್ಯಂತ ಆನ್‌ಲೈನ್ ರಮ್ಮಿ ಆಟದ ಹಾವಳಿ ಹೆಚ್ಚಾಗಿದೆ. ಬಾಲಿವುಡ್ ಸೇರಿದಂತೆ ಹಲವು ಭಾಷೆಗಳ ಸಿನಿಮಾ ಹಾಗೂ ಇತರೆ ಕ್ಷೇತ್ರಗಳ ಸೆಲೆಬ್ರಿಟಿಗಳೇ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಲಕ್ಷಾಂತರ ಯುವಕರು ಆನ್‌ಲೈನ್ ರಮ್ಮಿಗೆ ದಾಸರಾಗಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಚರ್ಚೆ ಮಾಡಲಾಗಿದೆ.
ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಸೋಮವಾರ ನಡೆದ ಅಧಿವೇಶನದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಅರುಣ್ ಕುಮಾರ್ ಅವರು, ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ರಮ್ಮಿ ಹಾವಳಿ ವಿಪರೀತ ಆಗಿದೆ. ಇದಕ್ಕೆ ಖ್ಯಾತ ಸೆಲೆಬ್ರಿಟಿ ಗಳು ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಇದರಿಂದ ಯುವಕರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಮೊದಲಿಗೆ ಈ ಗೇಮ್ ನಲ್ಲಿ ಅವರೇ ಸ್ವಲ್ಪ ಹಣ ಹಾಕಿ ಯುವಕರನ್ನು ಆಡುವಂತೆ ಪ್ರೇರೇಪಿಸಲಾಗುತ್ತದೆ. ನಂತರ ಅವರಿಗೆ ಇದೇ ಚಟವಾಗುತ್ತದೆ. ಇದಾದ ನಂತರ ಯುವಕರು ಹೆಚ್ಚು, ಹೆಚ್ಚು ಹಣವನ್ನು ತೊಡಗಿಸಿ ಆರ್ಥಿಕ ನಷ್ಟವಾಗುವಂತೆ ಮಾಡಲಾಗುತ್ತದೆ ಎಂದು ಕಿಡಿಕಾರಿದರು.
ರಾಹುಲ್ ಗಾಂಧಿಯಿಂದ ಮತ್ತೊಂದು ಭಾರತ್ ಜೋಡೋ ಯಾತ್ರೆ: ಈಸ್ಟ್ ಟು ವೆಸ್ಟ್ ಶೀಘ್ರ ಆರಂಭ
ಸಾಲ ಕೊಟ್ಟು ವೈಯಕ್ತಿಕ ಮಾಹಿತಿಗೆ ಕನ್ನ: ಆನ್‌ರೈನ್ ರಮ್ಮಿ ಆಟಕ್ಕೆ ದಯವಿಟ್ಟು ಇದಕ್ಕೆ ಕಡಿವಾಣ ಹಾಕಿ. ಇನ್ನು ಆನ್‌ಲೈನ್‌ನಲ್ಲಿ ಸಾಲ ಕೊಡುವ ನೆಪದಲ್ಲಿ ನಮ್ಮ ಮಾಹಿತಿ ಕೇಳ್ತಾರೆ. ನಂತರ ನಮ್ಮ ವೈಯಕ್ತಿಕ ಮಾಹಿತಿ ಕದಿಯುತ್ತಾರೆ. ಸಾಲ ವಾಪಸ್ ಕೊಡದೇ ಇದ್ದರೆ ಮಾನ ಕಳೆಯುವಂತೆ ಮಾಡ್ತಾರೆ. ಇದು ಗಂಭೀರವಾಗಿದ್ದು, ಕೂಡಲೇ ಕಡಿವಾಣ ಹಾಕುವ ಮೂಲಕ ಯುವಜನರನ್ನು ಸರಿಯಾದ ಹಾದಿಯಲ್ಲಿ ನಡೆಸಬೇಕಾಗಿದೆ. ಯುವಕರು ಆನ್‌ಲೈನ್ ಗೇಮ್‌ಗಳ ಚಟ ಬೆಳೆಸಿಕೊಂಡು ಜೀವನ ಹಾಳು ಮಾಡಿಕೊಳ್ಳದಂತೆ ಕಡಿವಾಣ ಹಾಕಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ್ ಕುಮಾರ್ ಗಂಭೀರ ಪ್ರಶ್ನೆ ಮಾಡಿದರು.
ಕೇಂದ್ರ ಮಟ್ಟದಲ್ಲಿಯೂ ಕಡಿವಾಣ ಹಾಕಬೇಕು: ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ಪರವಾಗಿ ವಿಧಾನ ಪರಿಷತ್ ಸದಸ್ಯರ ಪ್ರಶ್ನೆಗೆ ಸರ್ಕಾರದ ಪರವಾಗಿ ಉತ್ತರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಇದು ಕೇವಲ ರಾಜ್ಯ ಮಟ್ಟದಲ್ಲಿ ಇಲ್ಲ. ಕೇಂದ್ರ ಮಟ್ಟದಲ್ಲಿ ಇದೆ. ಇದರ ಬಗ್ಗೆ ಕೇಂದ್ರವೂ ಚರ್ಚಿಸಿ ಕ್ರಮ ತೆಗೆದುಕೊಳ್ಳಬೇಕಾಗಿದೆ. ಇಲ್ಲಿ ಸಂಬಂಧಿಸಿದ ಮಂತ್ರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವರ ಪರವಾಗಿ ದಿನೇಶ್ ಗುಂಡೂರಾವ್ ಉತ್ತರ ನೀಡಿದರು.
ಅನ್ನಭಾಗ್ಯ ಯೋಜನೆಗೆ ಮತ್ತೆರಡು ಷರತ್ತುಗಳು ಅನ್ವಯ: ನೀವು ಹಣ ಪಡೆಯಲು ಅರ್ಹರೇ..
ವಿಧಾನ ಪರಿಷತ್‌ನಲ್ಲಿ ಸದಸ್ಯರ ಆಸನಗಳು ಅದಲು ಬದಲು : ವಿಧಾನ ಪರಿಷತ್ (ಜು.04): ವಿಧಾನಸಭೆ ಚುನಾವಣೆಯ ನಂತರ ಆಡಳಿತ ಮತ್ತು ಪ್ರತಿಪಕ್ಷದ ಸ್ಥಾನಗಳು ಅದಲು ಬದಲಾಗುವುದು ಸಹಜ. ಸ್ವಾರಸ್ಯಕರವೆಂದರೆ ಮೇಲ್ಮನೆಯಲ್ಲಿ ಪ್ರತಿಪಕ್ಷದಲ್ಲಿದ್ದಾಗ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದವರು ಈಗ ಆಡಳಿತ ಪಕ್ಷದ ಕೊನೆಯ ಸಾಲಿಗೆ ‘ಹಿಂಬಡ್ತಿ’ ಪಡೆದಿದ್ದಾರೆ. ಅದೇ ರೀತಿ ಆಡಳಿತ ಪಕ್ಷದಲ್ಲಿದ್ದಾಗ ಎರಡು-ಮೂರನೇ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದವರು ಈಗ ಪ್ರತಿಪಕ್ಷದಲ್ಲಿ ‘ಮುಂಬಡ್ತಿ’ ಪಡೆದು ಮೊದಲ ಇಲ್ಲವೇ ಎರಡನೇ ಸಾಲು ಅಲಂಕರಿಸಿದ್ದಾರೆ. ಹೊಸ ಸರ್ಕಾರ ಬಂದ ನಂತರ ನಡೆದ ವಿಧಾನ ಪರಿಷತ್ತಿನ ಅಧಿವೇಶನದ ಮೊದಲ ದಿನವಾದ ಸೋಮವಾರದಂದು ಕಂಡು ಬಂದ ಚಿತ್ರವಿದು.
ಯಾವ ಸ್ಥಾನದಲ್ಲಿ ಯಾರು ಆಸೀನ: ಪ್ರತಿಪಕ್ಷದ ನಾಯಕರಾಗಿ ಮೊದಲ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದ ಬಿ.ಕೆ.ಹರಿಪ್ರಸಾದ್ ಈಗ ಆಡಳಿತ ಪಕ್ಷದ ಕೊನೆಯ ಸಾಲಿನಲ್ಲಿ ಕುಳಿತುಕೊಂಡಿದ್ದರು. ಲಕ್ಷ್ಮಣ ಸವದಿ ಕುಳಿತುಕೊಳ್ಳುತ್ತಿದ್ದ ಸ್ಥಾನದಲ್ಲಿ ಜಗದೀಶ್ ಶೆಟ್ಟರ್ ಆಸೀನರಾಗಿದ್ದರು. ಇನ್ನೂ ಬಿಜೆಪಿ ಸರ್ಕಾರದಲ್ಲಿ ಸಭಾನಾಯಕರಾಗಿ ಮೊದಲ ಸಾಲಿನಲ್ಲಿದ್ದ ಕೋಟ ಶ್ರೀನಿವಾಸ ಪೂಜಾರಿ ಇಂದು ಮೊದಲ ಸಾಲಿನ ಕೊನೆಯ ಆಸನದಲ್ಲಿ ಕುಳಿತುಕೊಂಡಿದ್ದರು. ಅದೇ ರೀತಿ ಆಡಳಿತ ಪಕ್ಷದಲ್ಲಿದ್ದಾಗ ಎರಡನೇ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದ ಬಿಜೆಪಿಯ ಶಶೀಲ್ ನಮೋಶಿ ಈಗ ಮುಂಬಡ್ತಿ ಪಡೆದು ಮೊದಲ ಸಾಲಿಗೆ ಬಂದಿದ್ದಾರೆ. ಎರಡನೇ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದ ಜೆಡಿಎಸ್‌ನ ಟಿ.ಎ. ಶರವಣ ಅವರು ಈಗ ಮೊದಲ ಸಾಲಿಗೆ ಜಿಗಿದಿದ್ದಾರೆ. ಇದೇ ರೀತಿ ಅನೇಕ ಸದಸ್ಯರು ಮೂರನೇ ಸಾಲಿನಿಂದ ಎರಡನೇ ಸಾಲಿಗೆ ಬಡ್ತಿ ಪಡೆದಿದ್ದಾರೆ.