ಅನ್ನಭಾಗ್ಯ ಯೋಜನೆಗೆ ಮತ್ತೆರಡು ಷರತ್ತುಗಳು ಅನ್ವಯ: ನೀವು ಹಣ ಪಡೆಯಲು ಅರ್ಹರೇ..

ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಗೆ ಹತ್ತಾರು ಕಂಡಿಷನ್‌ಗಳನ್ನು ಹಾಕಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಮತ್ತೆರಡು ಹೊಷ ಷರತ್ತುಗಳನ್ನು ವಿಧಿಸಿದೆ.

Two more conditions apply to Karnataka Anna bhagya Yojana Are you eligible to receive money sat

ಬೆಂಗಳೂರು (ಜು.08): ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಗೆ ಹತ್ತಾರು ಕಂಡಿಷನ್‌ಗಳನ್ನು ಹಾಕಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಮತ್ತೆರಡು ಹೊಷ ಷರತ್ತುಗಳನ್ನು ವಿಧಿಸಿದೆ. ಈ ಮೂಲಕ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ಹಣ ಹಂಚಿಕೆ ಮಾಡದಿರಲು ಹಲವು ಕಾರಣಗಳನ್ನು ಸರ್ಕಾರ ಹುಡುತ್ತಿದೆ. ರಾಜ್ಯದ ಲಕ್ಷಾಂತರ ಜನರು ಅನ್ನಭಾಗ್ಯ ಯೋಜನೆಯಿಂದ ವಂಚಿತರಾಗಲಿದ್ದಾರೆ.

ರಾಜ್ಯ ವಿಧಾನಸಭಾ ಚುನಾಣೆಯಲ್ಲಿ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದ ಕಾಂಗ್ರೆಸ್‌, ಅಧಿಕಾರಕ್ಕೆ ಬಂದ ಕೂಡಲೇ ಹತ್ತಾರು ಷರತ್ತುಗಳನ್ನು ವಿಧಿಸುತ್ತಿದೆ. ಅದರಲ್ಲಿ ಈಗಾಗಲೇ ಬಿಪಿಎಲ್‌ ಕಾರ್ಡ್‌ದಾರರು ಮತ್ತು ಅಂತ್ಯೋದಯ ಕಾರ್ಡ್‌ ಉಳ್ಳವರಿಗೆ ಮಾತ್ರ ಅನ್ನಭಾಗ್ಯ ಯೋಜನೆಯ 10 ಕೆ.ಜಿ. ಅಕ್ಕಿಯನ್ನು ವಿತರಣೆ ಮಾಡುವುದಾಗಿ ಸರ್ಕಾರ ತಿಳಿಸಿದೆ. ಆದರೆ, ಜುಲೈ 1 ರಿಂದ ಆರಂಭವಾಗಬೇಕಿದ್ದ ಯೋಜನೆಗೆ ಅಕ್ಕಿ ಸಿಗದ ಹಿನ್ನೆಲೆಯಲ್ಲಿ ಹಿನ್ನಡೆ ಉಂಟಾಗಿದೆ. ಇನ್ನು ಅಕ್ಕಿ ಲಭ್ಯವಾಗದ ಹಿನ್ನೆಲೆಯಲ್ಲಿ 5 ಕೆ.ಜಿ ಅಕ್ಕಿಯನ್ನು ಹಾಗೂ ಉಳಿದ 5 ಕೆ.ಜಿ. ಅಕ್ಕಿಯ ಬದಲಾಗಿ 170 ರೂ. ಹಣವನ್ನು ಪಾವತಿಸುವುದಾಗಿ ಸರ್ಕಾರ ಹೇಳಿದೆ. ಆದರೆ, ಈಗ ಹಣ ಪಾವತಿಗೆ ಪುನಃ ನೂರೆಂಟು ಷರತ್ತುಗಳನ್ನು ವಿಧಿಸಲು ಮುಂದಾಗಿದೆ.

ಗೃಹಜ್ಯೋತಿ ಅರ್ಜಿ ಸ್ಥಿತಿ ತಿಳಿಯಲು ಪ್ರತ್ಯೇಕ ಲಿಂಕ್‌ ಬಿಡುಗಡೆ: ಮೊಬೈಲ್‌ನಲ್ಲೇ ಪರಿಶೀಲನೆ ಮಾಡಿ

ಅಂತ್ಯೋದಯ ಕಾರ್ಡ್‌ದಾರರಿಗೆ ಹಣವಿಲ್ಲ: ರಾಜ್ಯದಲ್ಲಿ 2023ರ ಜುಲೈನಿಂದ ಅರ್ಹ ಫಲಾನುಭವಿಗಳ ಖಾತೆಗೆ ಹಣ ರವಾನೆ ಆಗಲಿದೆ. ಜುಲೈ 10ಕ್ಕೆ ಫಲಾನುಭವಿಗಳ ಅಕೌಂಟ್‌ಗೆ ಹಣವನ್ನು ಹಾಕುವುದಾಗಿ ಸರ್ಕಾರ ಹೇಳಿದೆ. ಆದರೆ, ಈಗ ಅನ್ನಭಾಗ್ಯ ಜಾರಿಗೆ ಹತ್ತಾರು ಕಂಡೀಷನ್ ಹಾಕುತ್ತಿದೆ. ಅಂತ್ಯೋದಯ ಕಾರ್ಡ್​ ಹೊಂದಿದವರಿಗೆ ಷರತ್ತು ವಿಧಿಸಿದೆ. ಅಂತ್ಯೋದಯ ಕಾರ್ಡ್ ಹೊಂದಿದ ಕುಟುಂಬದಲ್ಲಿ 3 ಅಥವಾ 3ಕ್ಕಿಂತ ಕಡಿಮೆ ಜನರಿದ್ದರೆ ಅಕ್ಕಿಯ ಬದಲಾಗಿ ಹಣ ಸಿಗುವುದಿಲ್ಲ. ಅಂತ್ಯೋದಯ ಕಾರ್ಡ್‌ಗೆ ಈಗ 35ಕೆಜಿ ಅಕ್ಕಿ ನೀಡಲಾಗ್ತಿದೆ. ಆದರೆ, ಮೂವರಿಗೆ 35 ಕೆಜಿ ಅಕ್ಕಿ ಸಾಕು ಅನ್ನೋದು ಸರ್ಕಾರದ ಲೆಕ್ಕವಾಗಿದೆ. ಅಂತ್ಯೋದಯ ಕಾರ್ಡ್​ನಲ್ಲಿ 4 ಜನರಿದ್ರೆ 35 ಕೆಜಿ ಅಕ್ಕಿ ಜತೆ 170 ರೂ. ಹಣ ಲಭ್ಯವಾಗುತ್ತದೆ.  ಆದರೆ, ಬಿಪಿಎಲ್​ ಕಾರ್ಡ್​ದಾರರಿಗೆ ಈ ನಿಯಮ ಅನ್ವಯಿಸಲ್ಲ.

ಮೂರು ತಿಂಗಳು ಅಕ್ಕಿ ಪಡೆಯದಿದ್ದರೆ ಹಣವಿಲ್ಲ: ಇನ್ನು ಅಂತ್ಯೋದಯ ಕಾರ್ಡ್‌ ಹೊಂದಿದವರ ಕುಟುಂಬದಲ್ಲಿ 4 ಅಥವಾ ಅದಕ್ಕಿಂತ ಹೆಚ್ಚಿನ ಜರಿದ್ದರೆ ಮಾತ್ರ ಅಕ್ಕಿಯ ಬದಲಾಗಿ ವಿತರಣೆ ಮಾಡುವ ಹೆಚ್ಚುವರಿ ಹಣ ಲಭ್ಯವಾಗುತ್ತದೆ. ಆದರೆ, ಈ ನಿಯಮ ಬಿಪಿಎಲ್‌ ಕಾರ್ಡ್‌ದಾರರಿಗೆ ಅನ್ವಯ ಆಗದಿದ್ದರೂ ಅವರಿಗೆ ಮತ್ತೊಂದು ಷರತ್ತು ವಿಧಿಸಲಾಗಿದೆ. ಅದೇನೆಂದರೆ, ಕಳೆದ ಮೂರು ತಿಂಗಳಿನಿಂದ ನೀವು ನ್ಯಾಯಬೆಲೆ ಅಂಗಡಿಯಿಂದ ಅಕ್ಕಿಯನ್ನು ಪಡೆದುಕೊಳ್ಳದಿದ್ದರೂ ಅಂತಃ ಕುಟುಂಬಗಳಿಗೆ ಅಕ್ಕಿಯ ಬದಲಾಗಿ ಹಣವನ್ನು ವಿತರಣೆ ಮಾಡುವುದಿಲ್ಲ. 

ವಿಪರೀತ ಕೆಮ್ಮಿನಿಂದ ಬಳಲುತ್ತಿರುವ ಸಿಎಂ ಸಿದ್ದರಾಮಯ್ಯ

ಅಂತ್ಯೋದಯ ಕಾರ್ಡ್‌ ಉಳ್ಳವರಿಗೆ ನಿಯಮಗಳು ಹೀಗಿವೆ: ಅಂತ್ಯೋದಯ ಕಾರ್ಡ್‌ಗೆ ಈಗ 35ಕೆಜಿ ಅಕ್ಕಿ ನೀಡಲಾಗುತ್ತಿದೆ. ಆದ್ದರಿಂದ ಮೂವರು ಅಥವಾ ಅದಕ್ಕಿಂತ ಕಡಿಮೆ ಜನರಿದ್ದರೆ ಅಕ್ಕಿಯ ಬದಲಾಗಿ ಹಣ ಕೊಡುವುದಿಲ್ಲ. ಜೊತೆಗೆ, ಅಂತ್ಯೋದಯ ಕಾರ್ಡ್​ನಲ್ಲಿ 4 ಜನರಿದ್ರೆ 35 ಕೆಜಿ ಅಕ್ಕಿ ಜೊತೆಗೆ 170 ರೂ. ಹಣ ಕೊಡಲಾಗುತ್ತದೆ. 5 ಜನರಿದ್ದರೆ 35 ಕೆಜಿ ಅಕ್ಕಿ ಜೊತೆಗೆ 510 ರೂ., 6 ಜನರಿದ್ದರೆ 850 ರೂ. ಹಣವನ್ನು ಪಡಿತರ ಚೀಟಿಯ ಕುಟುಂಬದ ಯಜಮಾನರ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಆದರೆ, ಬಿಪಿಎಲ್‌ ಕಾರ್ಡ್‌ದಾರರಿಗೆ ತಲಾ 5 ಕೆ.ಜಿ. ಅಕ್ಕಿಯ ಜೊತೆಗೆ ತಲಾ ಸದಸ್ಯರಿಗೂ 170 ರೂ. ಹಣವನ್ನು ಹಂಚಿಕೆ ಮಾಡಲಾಗುತ್ತದೆ.

ಜುಲೈ 10 ರಂದು ಹಣ ಹಂಚಿಕೆಗೆ ಚಾಲನೆ:
ಅನ್ನಭಾಗ್ಯ ಹಣ ನೇರವಾಗಿ ಅವರ ಖಾತೆಗೆ ಹಣ ಹಾಕುತ್ತೇವೆ. ಜುಲೈ 10ರ ಸಂಜೆ 5 ಗಂಟೆಗೆ ಹಣ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಜುಲೈ 10ರಿಂದ ಮುಂದಿನ 15 ದಿನಗಳಲ್ಲಿ ಎಲ್ಲರಿಗೂ ಹಣ ಹಾಕುತ್ತೇವೆ‌. ಒಟ್ಟು 4 ಕೋಟಿ 41 ಲಕ್ಷ ಜನರಿಗೆ 800 ಕೋಟಿ ಹಣ ತಲುಪಲಿದೆ.
- ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ

Latest Videos
Follow Us:
Download App:
  • android
  • ios