ಬೆಂಗಳೂರು(ಆ.06): ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಹೆಸರಿನಲ್ಲಿ ಹನುಮಂತನಗರದಲ್ಲಿ ಆರಂಭಿಸಲಾಗಿರುವ ‘ನಮ್ಮ ಅಪ್ಪಾಜಿ ಕ್ಯಾಂಟೀನ್‌’ಗೆ ಇದೀಗ ಮೂರು ವರ್ಷದ ಸಂಭ್ರಮ.

ಈ ಹಿನ್ನೆಲೆಯಲ್ಲಿ ಇಂದಿನಿಂದ(ಗುರುವಾರ) ಮಧ್ಯಾಹ್ನ 12ರಿಂದ ಒಂದು ರು.ಗೆ ಊಟ ವಿತರಿಸಲಾಗುತ್ತದೆ. ಇನ್ನು ಮುಂದೆ ಈ ಕ್ಯಾಂಟೀನ್‌ನಲ್ಲಿ ರೋಗ ನಿರೋಧಕ ಹೆಚ್ಚಿಸುವ ಆಹಾರ ದೊರೆಯುತ್ತದೆ. ಸ್ಯಾನಿಟೈಸರ್‌, ಸ್ವಚ್ಛತೆ ಹಾಗೂ ಕೋವಿಡ್‌ ಸುರಕ್ಷಾ ಕ್ರಮಗಳನ್ನು ಪಾಲಿಸಲಾಗುವುದು ಎಂದು ಕ್ಯಾಂಟೀನ್‌ ಆರಂಭಿಸಿರುವ ಜೆಡಿಎಸ್‌ ಮುಖಂಡ ಟಿ.ಎ.ಶರವಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಪ್ಪಾಜಿ ಕ್ಯಾಂಟೀನ್ ಇಂದು ಲೋಕಾರ್ಪಣೆ; ವಿಶೇಷತೆಗಳೇನು?

ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಬಡವರಿಗೆ ಕಡಮೆ ದರದಲ್ಲಿ ಆಹಾರ ನೀಡಬೇಕು ಎಂಬ ಉದ್ದೇಶದಿಂದ ಇಂದಿರಾ ಕ್ಯಾಂಟೀನ್‌ಗಳನ್ನು ತೆರೆಯಲಾಯಿತು. ಅದರ ಬೆನ್ನಲ್ಲೇ ಶರವಣ ಅವರು ದೇವೇಗೌಡರ ಮೇಲಿನ ಅಭಿಮಾನದಿಂದ ಅವರ ಹೆಸರಿನಲ್ಲಿ ನಮ್ಮ ಅಪ್ಪಾಜಿ ಕ್ಯಾಂಟೀನ್‌ ಆರಂಭಿಸಿದ್ದರು.