ಲೋಕಸಭಾ ಚುನಾವಣೆ 2024: ಕರ್ತವ್ಯನಿರತ ಇಬ್ಬರು ಅಧಿಕಾರಿಗಳು ಹೃದಯಾಘಾತದಿಂದ ಸಾವು
ಚುನಾವಣಾ ಕರ್ತವ್ಯನಿರತರಾಗಿದ್ದ ವೇಳೆಯೇ ಇಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಬಾಗಲಕೋಟೆ ಮತ್ತು ಬೀದರ್‌ನಲ್ಲಿ ಜರುಗಿದೆ.
ಬೀದರ್(ಮೇ.07): ಚುನಾವಣಾ ಕರ್ತವ್ಯನಿರತರಾಗಿದ್ದ ವೇಳೆಯೇ ಇಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಬಾಗಲಕೋಟೆ ಮತ್ತು ಬೀದರ್‌ನಲ್ಲಿ ಜರುಗಿದೆ. ಬೀದರ್‌ನ ನಿರ್ಣಾ ಗ್ರಾಮದಲ್ಲಿ ರೈತ ಸಂಪರ್ಕ ಕಚೇರಿಯಲ್ಲಿ ಸಹಾಯಕ ಅಧಿಕಾರಿಯಾಗಿದ್ದ ಆನಂದ (32) ಅವರು ಕರ್ತವ್ಯದ ಸಂದರ್ಭ ಕೋಡಂಬಲ್ ಚೆಕ್ ಪೋಸ್ಟ್‌ನಲ್ಲಿ ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದರು. ಅವರನ್ನು ಸಿಪಿಐ ಶ್ರೀನಿವಾಸ್ ಅಲ್ಲಾಪುರೆ ಅವರುಹುಮನಾಬಾದ್ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ನಿಧನರಾಗಿದ್ದಾರೆ.
ಕುಸಿದುಬಿದ್ದು ಸಾವು:
ಬಾಗಲಕೋಟೆಯ ಮುಧೋಳ ನಗರದಲ್ಲಿ ಜಮಖಂಡಿ ತಾಲೂಕಿನ ಬಿದರಿ ಪ್ರಾಥಮಿಕ ಶಾಲೆ ಶಿಕ್ಷಕ ಗೋವಿಂದಪ್ಪ ಸಿದ್ದಾಪುರ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ: ಬಿಜೆಪಿಗರಿಗೆ ನಾಚಿಕೆಯಾಗಬೇಕು, ಸಲೀಂ ಅಹಮದ್ ವಾಗ್ದಾಳಿ
ಬಿಸಿಲಿ ತಾಪಕ್ಕೆ ಸಿಬ್ಬಂದಿಗೆ ಸ್ಟ್ರೋಕ್
ಸುರಪುರ: ಯಾದಗಿರಿ ಜಿಲ್ಲೆ ಸುರಪುರದಲ್ಲಿ ತಾಪಮಾನ 43 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಬಿಸಿಲ ತಾಪ ದಿಂದಾಗಿ ಚುನಾವಣಾ ಕರ್ತವ್ಯದಲ್ಲಿದ್ದ ಸಿಬ್ಬಂದಿಯೊಬ್ಬರಿಗೆ ಪಾರ್ಶವಾಯು (ಸ್ಟ್ರೋಕ್) ಆಗಿ ಅಸ್ವಸ್ಥಗೊಂಡ ಘಟನೆ ಸೋಮವಾರ ಮಧ್ಯಾಹ್ನ ಇಲ್ಲಿನ ಶ್ರೀಪ್ರಭು ಕಾಲೇಜಿನ ಆವರಣದಲ್ಲಿ ನಡೆದಿದೆ. ಲೋಕಸಭೆ, ವಿಧಾನಸಭೆ ಉಪಚುನಾವಣೆ ನಿಮಿತ್ತ ನಗರದ ಶ್ರೀ ಪ್ರಭು ಕಾಲೇಜಲ್ಲಿ ಬೆಳಗಿನಿಂದಲೇ ಮತಯಂತ್ರಗಳ ವಿತರಣೆ ನಡೆಯುತ್ತಿ ತ್ತು. ಆಗ ಮಲ್ಲಿಕಾರ್ಜುನ (55) ಎಂಬುವರಿಗೆ ಸ್ಟ್ರೋಕ್ ಆಗಿದ್ದು, ತಕ್ಷಣ ವೈದ್ಯರು ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕಳುಹಿಸಿದ್ದಾರೆ.