Asianet Suvarna News Asianet Suvarna News

Omicron Variant : ಡೆಲ್ಟಾದಷ್ಟು ಓಮಿಕ್ರಾನ್ ಅಷ್ಟು ಆತಂಕಕಾರಿ ಅಲ್ಲ

  • ಕೊರೋನಾ ಹೊಸ ತಳಿ ಒಮಿಕ್ರೋನ್‌ ಸೋಂಕು ಸಕ್ರಿಯವಾಗಿರುವ ದಕ್ಷಿಣ ಆಫ್ರಿಕಾ
  • ದಕ್ಷಿಣ ಆಫ್ರಿಕಾದಿಂದ ರಾಜ್ಯಕ್ಕೆ ಆಗಮಿಸಿದ್ದ ಇಬ್ಬರಲ್ಲಿ ಕೋವಿಡ್‌ ಸೋಂಕು ಪತ್ತೆ
Omicron Not Dangerous than Delta variant Says Minister Sudhakar snr
Author
Bengaluru, First Published Nov 30, 2021, 8:15 AM IST

ಬೆಂಗಳೂರು (ನ.30):  ಕೊರೋನಾ (Corona virus) ಹೊಸ ತಳಿ ಒಮಿಕ್ರೋನ್‌ (Omicron) ಸೋಂಕು ಸಕ್ರಿಯವಾಗಿರುವ ದಕ್ಷಿಣ ಆಫ್ರಿಕಾದಿಂದ (South Africa) ರಾಜ್ಯಕ್ಕೆ ಆಗಮಿಸಿದ್ದ ಇಬ್ಬರಲ್ಲಿ ಕೋವಿಡ್‌ ಸೋಂಕು (Covid ) ಪತ್ತೆಯಾಗಿದ್ದು, ಆ ಪೈಕಿ ಒಬ್ಬರ ಜಿನೋಮಿಕ್‌ ಸೀಕ್ವೆನ್ಸ್‌ ವರದಿಯಲ್ಲಿ ಡೆಲ್ಟಾಗಿಂತ ಭಿನ್ನ ಮಾದರಿಯ ವಂಶವಾಹಿ ಗುಣಗಳು ಪತ್ತೆಯಾಗಿವೆ. ಅವರಿಗೆ ಯಾವ ರೂಪಾಂತರಿ ಸೋಂಕು ತಗುಲಿದೆ ಎಂಬ ನಿಗೂಢತೆಯು ಆತಂಕ ಸೃಷ್ಟಿಸಿದೆ.ನ.1ರಿಂದ ನ.20ರವರೆಗೆ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿನ (Bengaluru) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (International Airport) ಮೂಲಕ ರಾಜ್ಯಕ್ಕೆ ಆಗಮಿಸಿದ್ದ 94 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ಇಬ್ಬರಲ್ಲಿ ಕೊರೋನಾ ಸೋಂಕು ದೃಢಪಟ್ಟಿತ್ತು.

ಇವರ ಜಿನೋಮಿಕ್‌ ಸೀಕ್ವೆನ್ಸ್‌ ವರದಿಯಲ್ಲಿ ನ.11ರಂದು ಸೋಂಕು ದೃಢಪಟ್ಟಿದ್ದ ವ್ಯಕ್ತಿಗೆ ಡೆಲ್ಟಾ (Delta) ಮಾದರಿಯ ಸೋಂಕಿರುವುದು ಖಚಿತವಾಗಿದೆ. ಆದರೆ, ನ.20ರಂದು ಸೋಂಕು ದೃಢ ಪಟ್ಟಿದ್ದ ವ್ಯಕ್ತಿಯ ವರದಿಯಲ್ಲಿ ಡೆಲ್ಟಾ ಮಾದರಿಗಿಂತ ಭಿನ್ನ ಅಂಶಗಳು ಪತ್ತೆಯಾಗಿವೆ. ಹೀಗಾಗಿ ರಾಜ್ಯ ಸರ್ಕಾರವು (state govt) ಈ ಮಾದರಿಯನ್ನು ಕೇಂದ್ರದ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅದು ಯಾವ ರೂಪಾಂತರಿ ವೈರಾಣು ಎಂಬ ಬಗ್ಗೆ ಕುತೂಹಲ ಹಾಗೂ ಆತಂಕ ಮೂಡಿದೆ.

ಸಂಪರ್ಕಿತರ ಪತ್ತೆ, ಪರೀಕ್ಷೆ:  ಇನ್ನು ದಕ್ಷಿಣ ಆಫ್ರಿಕಾದಿಂದ ಆಗಮಿಸಿದ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕ ಹೊಂದಿದ 224 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಯಾರಿಗೂ ಸೋಂಕು ದೃಢಪಟ್ಟಿಲ್ಲ. ಇಬ್ಬರು ಕೊರೋನಾ ಸೋಂಕಿತರ 12 ಮಂದಿ ಪ್ರಾಥಮಿಕ ಹಾಗೂ 212 ಮಂದಿ ದ್ವಿತೀಯ ಹಂತದ ಸಂಪರ್ಕಿತರನ್ನು ಪರೀಕ್ಷೆ ಮಾಡಲಾಗಿದೆ. ಈ ಪೈಕಿ ಯಾರಿಗೂ ಸೋಂಕು ದೃಢಟ್ಟಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾದಿಂದ ಆಗಮಿಸಿ ಕೊರೋನಾ ಸೋಂಕು (Corona Virus) ದೃಢಪಟ್ಟಿದ್ದವರ ಮಾದರಿಗಳ ಜಿನೋಮಿಕ್‌ ಸೀಕ್ವೆನ್ಸಿಂಗ್‌ ನಡೆಸಲಾಗಿದೆ. ಈ ಪೈಕಿ ಒಬ್ಬರ ವರದಿ ಡೆಲ್ಟಾಗಿಂತ ಭಿನ್ನವಾಗಿರುವುದು ಕಂಡುಬಂದಿದೆ. ಹೀಗಾಗಿ ಹೆಚ್ಚಿನ ಪರೀಕ್ಷೆಗೆ ಕೇಂದ್ರದ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ.

- ಡಾ.ಕೆ.ಸುಧಾಕರ್‌, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ

ಡೆಲ್ಟಾ ದಷ್ಟು ಡೇಂಜರ್‌ ಅಲ್ಲ

ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರೋನ್‌ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಮಾತುಕತೆ ನಡೆಸಿದ್ದೇನೆ. ಇದು ವೇಗವಾಗಿ ಹರಡುತ್ತಿದ್ದರೂ ಡೆಲ್ಟಾರೂಪಾಂತರಿಯಷ್ಟುಅಪಾಯಕಾರಿ ಅಲ್ಲ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಡಿ.1ರ ವೇಳೆಗೆ ಒಮಿಕ್ರೋನ್‌ ಕುರಿತ ಅಧ್ಯಯನ ವರದಿ ನಮ್ಮ ಕೈಸೇರಲಿದೆ.

- ಡಾ.ಕೆ. ಸುಧಾಕರ್‌ ಆರೋಗ್ಯ ಸಚಿವ

 ಇನ್ನೂ ಲ್ಯಾಬ್ ತೆರೆದಿಲ್ಲ  :  ಕೊರೋನಾ(Coronavirus) ವೈರಾಣುವಿನ ರೂಪಾಂತರವನ್ನು ಆರಂಭದಲ್ಲೇ ಪತ್ತೆ ಹಚ್ಚುವ ಉದ್ದೇಶದಿಂದ ರಾಜ್ಯ ಸರ್ಕಾರ ಆರು ಕಡೆಗಳಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಜಿನೋಮಿಕ್‌ ಸೀಕ್ವೆನ್ಸಿಂಗ್‌ ಲ್ಯಾಬ್‌ (ತಳಿ ಪತ್ತೆ ಪ್ರಯೋಗಾಲಯ) ಇನ್ನೂ ಸಜ್ಜಾಗಿಲ್ಲ. ಇತ್ತೀಚೆಗೆ ಕೊರೋನಾ ಸೋಂಕು ಕಡಿಮೆಯಾಗಿರುವುದು, ಲ್ಯಾಬ್‌ ಸ್ಥಾಪನೆಗೆ ಆಗುವ ದುಬಾರಿ ವೆಚ್ಚ, ಮಾನವ ಸಂಪನ್ಮೂಲದ ನಿರ್ವಹಣೆ ಮುಂತಾದ ಕಾರಣಗಳಿಂದ ಸರ್ಕಾರ ಲ್ಯಾಬ್‌ ಸ್ಥಾಪನೆಗೆ ಹೆಚ್ಚಿನ ಆಸಕ್ತಿ ತೋರಿಸಿಲ್ಲ. ಆದ ಕಾರಣ ಲ್ಯಾಬ್‌ ಶುರುವಾಗಿಲ್ಲ ಎಂದು ಹೇಳಲಾಗಿದೆ.

ಕೊರೋನಾ ವೈರಾಣು ರೂಪಾಂತರಗೊಂಡು ಹರಡುವುದನ್ನು ಪತ್ತೆ ಮಾಡಿ ಇದಕ್ಕೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲು ಮಹತ್ವದ ಪಾತ್ರ ವಹಿಸುವ ಜಿನೋಮಿಕ್‌ ಸೀಕ್ವೆನ್ಸಿಂಗ್‌ ಲ್ಯಾಬ್‌ಗಳು(Genomic Sequencing Lab) ಬೆರಳೆಣಿಕೆಯಷ್ಟು ಇವೆ. ಕೊರೋನಾ ಎರಡನೇ ಅಲೆ ಮಿತಿ ಮೀರಿದ ಸಂದರ್ಭದಲ್ಲಿ ರೂಪಾಂತರಿ ಕೊರೋನಾ ವೈರಾಣು ತಳಿ ಕಂಡು ಬಂದಿತ್ತು. ಆಗ ತಳಿ ಪತ್ತೆ ಮಾಡುವ ಉದ್ದೇಶದಿಂದ ಸರ್ಕಾರ ಈ ಲ್ಯಾಬ್‌ಗಳನ್ನು ರಾಜ್ಯದ(Karnataka) ಬೇರೆ ನಗರಗಳಲ್ಲಿ ಸ್ಥಾಪಿಸಲು ನಿರ್ಧರಿಸಿತ್ತು. ಆದರೆ ಈವರೆಗೂ ಕಾರ್ಯಾರಂಭವಾಗಿಲ್ಲ.

ವೈದ್ಯಕೀಯ ಶಿಕ್ಷಣ ಇಲಾಖೆಯಡಿ(Department of Medical Education) ಕಲಬುರಗಿಯ(Kalaburagi) ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೆಳಗಾವಿಯ(Belagavi) ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೆಂಗಳೂರಿನ(Bengaluru) ಅಟಲ್‌ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ವಿಜ್ಞಾನ ಸಂಸ್ಥೆ, ಮೈಸೂರು ಮೆಡಿಕಲ್‌ ಕಾಲೇಜು, ಮಂಗಳೂರು(Mangaluru) ಮತ್ತು ವಿಜಯಪುರ(Vijayapura) ಜಿಲ್ಲಾ ಆಸ್ಪತ್ರೆಯಲ್ಲಿ ಜಿನೋಮಿಕ್‌ ಸೀಕ್ವೆನ್ಸಿಂಗ್‌ ಲ್ಯಾಬ್‌ ಅನ್ನು ತೆರೆಯಲು ಜೂನ್‌ ತಿಂಗಳಿನಲ್ಲೇ ಸರ್ಕಾರ ನಿರ್ಧಾರ ಕೈಗೊಂಡಿತ್ತು.

ರಾಜ್ಯಕ್ಕೆ ಡವಡವ

  • - ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರೋನ್‌ ಸೋಂಕು ಭಾರಿ ಸಕ್ರಿಯವಾಗಿದೆ
  • - ನ.1ರಿಂದ 20ರವರೆಗೆ ಅಲ್ಲಿಂದ 94 ಮಂದಿ ಬೆಂಗಳೂರಿಗೆ ಬಂದಿದ್ದಾರೆ
  • - ಆ ಪೈಕಿ ಇಬ್ಬರು ಪ್ರಯಾಣಿಕರಿಗೆ ಕೊರೋನಾ ಸೋಂಕು ದೃಢಪಟ್ಟಿದೆ
  • - ಒಬ್ಬ ಪ್ರಯಾಣಿಕನ ಸೋಂಕು ಡೆಲ್ಟಾಮಾದರಿ ಎಂದು ಖಚಿತಪಟ್ಟಿದೆ
  • - ಆದರೆ ಇನ್ನೊಬ್ಬ ವ್ಯಕ್ತಿಯ ಸೋಂಕು ಡೆಲ್ಟಾಗಿಂತ ವಿಭಿನ್ನವಾಗಿದೆ
  • - ಈತನ ಜಿನೋಮಿಕ್‌ ಮಾದರಿಯನ್ನು ಸರ್ಕಾರ ಕೇಂದ್ರಕ್ಕೆ ಕಳಿಸಿದೆ
  • - ಅದು ಯಾವ ರೂಪಾಂತರಿ ಎಂಬ ಆತಂಕ ಹೆಚ್ಚಾಗತೊಡಗಿದೆ
Follow Us:
Download App:
  • android
  • ios