Asianet Suvarna News Asianet Suvarna News

ಚಿಲುಮೆ ಸಂಸ್ಥೆಗೆ ಕಾರ್ಡ್ ಕೊಟ್ಟಿರುವುದು ನಿಜ ಎಂದ ಅಧಿಕಾರಿಗಳು

ರಾಜಧಾನಿಯಲ್ಲಿ ಮತದಾರರ ಮಾಹಿತಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆಯ 6 ಮಂದಿಯ ಜತೆಗೆ ಈಗ 4 ಅಧಿಕಾರಿಗಳು ಹಾಗೂ ಒಬ್ಬ ಮಧ್ಯವರ್ತಿ ಸೇರಿ ಒಟ್ಟು 11  ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಈ ವೇಳೆ ಎಲ್ಲರನ್ನೂ ಒಟ್ಟಿಗೆ ಕೂರಿಸಿ ವಿಚಾರಣೆ ಮಾಡಲಾಗಿದ್ದು, ಮಾಹಿತಿ ಕಳ್ಳತನಕ್ಕಾಗಿ ಕಾರ್ಡ್ ಗಳನ್ನು ಕೊಟ್ಟಿರುವ ಬಗ್ಗೆ ಬ್ಲಾಕ್‌ ಲೆವೆಲ್‌ ಅಧಿಕಾರಿಗಳು (ಬಿಎಲ್‌ಒ) ಒಪ್ಪಿಕೊಂಡಿದ್ದಾರೆ.

Officials said that card was given to Chilume organization
Author
First Published Nov 27, 2022, 12:50 PM IST

ಬೆಂಗಳೂರು (ನ.27): ರಾಜಧಾನಿಯಲ್ಲಿ ಮತದಾರರ ಮಾಹಿತಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆಯ 6 ಮಂದಿಯ ಜತೆಗೆ ಈಗ 4 ಅಧಿಕಾರಿಗಳು ಹಾಗೂ ಒಬ್ಬ ಮಧ್ಯವರ್ತಿ ಸೇರಿ ಒಟ್ಟು 11  ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಈ ವೇಳೆ ಎಲ್ಲರನ್ನೂ ಒಟ್ಟಿಗೆ ಕೂರಿಸಿ ವಿಚಾರಣೆ ಮಾಡಲಾಗಿದ್ದು, ಮಾಹಿತಿ ಕಳ್ಳತನಕ್ಕಾಗಿ ಕಾರ್ಡ್ ಗಳನ್ನು ಕೊಟ್ಟಿರುವ ಬಗ್ಗೆ ಬ್ಲಾಕ್‌ ಲೆವೆಲ್‌ ಅಧಿಕಾರಿಗಳು (ಬಿಎಲ್‌ಒ) ಒಪ್ಪಿಕೊಂಡಿದ್ದಾರೆ. ಇನ್ನು ಅಧಿಕಾರಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಸಂಜೆ ನ್ಯಾಯಾಲಯದ ಮುಂಜೆ ಹಾಜರುಪಡಿಸಲಾಗುತ್ತದೆ.

ಮತದಾರರ ವೈಯಕ್ತಿಕ ಮಾಹಿತಿ ಕಳವು ಸಂಬಂಧ ಈವರೆಗೆ 11 ಜನರ ಬಂಧಿಸಲಾಗಿದೆ. ಚಿಲುಮೆ ಸಂಸ್ಥೆಗೆ ಸೇರಿದ ಆರು ಜನ, ಹಾಗೂ ನಾಲ್ವರು ಸರ್ಕಾರಿ ಅಧಿಕಾರಿಗಳು ಪ್ರಕರಣದಲ್ಲಿ ಬಂಧನವಾಗಿದೆ. ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್, ಮೇಲ್ವಿಚಾರಕ ಕೆಂಪೇಗೌಡ ಹಾಗೂ ಇತರೆ ನಾಲ್ವರು ಸಿಬ್ಬಂದಿ ಸೇರಿದ್ದಾರೆ. ಇನ್ನುಳಿದಂತೆ ಮೂವರು ರಿಟರ್ನಿಂಗ್‌ ಅಧಿಕಾರಿಗಳು (ಆರ್ ಓ) ಒಬ್ಬ ಸಹಾಯಕ ರಿಟರ್ನಿಂಗ್‌ ಅಧಿಕಾರಿ (ಎಆರ್ ಓ) ಬಂಧನವಾಗಿದೆ. ಇನ್ನು ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಶಿವಕುಮಾರ್ ಎಂಬಾತನನ್ನು ಬಂಧಿಸಲಾಗಿದೆ. ಇವರು ನಗರದ ಆರ್‍‌ಒ ಕಚೇರಿಗಳಿಗೆ ತೆರಳಿ ಮತದಾರರ ಗುರುತಿನ ಚೀಟಿಗಳನ್ನು ತಂದು ಕೊಡುತ್ತಿದ್ದನು. ಈಗ ಶಿವಕುಮಾರ್‍‌ನನ್ನೂ ಹಲಸೂರು ಗೇಟ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಮತದಾರರ ಮಾಹಿತಿ ಕಳವು: ಚಿಲುಮೆ ಸಂಸ್ಥೆಯ ಮುಖ್ಯಸ್ಥನ ಮನೆ ಮೇಲೆ ಪೊಲೀಸರ ದಾಳಿ

ಒಟ್ಟಿಗೆ ಎಲ್ಲ ಆರೋಪಿಗಳ ವಿಚಾರಣೆ: ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮೂವರು ಆರ್ ಓ ಮತ್ತು ಓರ್ವ ಎಆರ್ ಓ ಗಳನ್ನು ರಾತ್ರಿಯಿಂದಲೇ ವಿಚಾರಣೆ ಮಾಡಲಾಗುತ್ತಿದೆ. ಚಿಲುಮೆ ಸಂಸ್ಥೆ ಸಿಬ್ಬಂದಿ ಹಾಗೂ ಆರ್ ಓಗಳ ಒಟ್ಟಿಗೆ ವಿಚಾರಣೆ ಮಾಡಲಾಗಿದೆ. ಈ ವೇಳೆ ಬಿಎಲ್ಓ ಕಾರ್ಡ್ ಗಳನ್ನು ಕೊಟ್ಟಿರುವುದು, ಸೀಲು ಮತ್ತು ಸಹಿ ಹಾಕಿದ ಬಗ್ಗೆ ವಿಚಾರಣೆ ಮಾಡಲಾಗಿದೆ. ಈ ವೇಳೆ ಕಾರ್ಡ್ ಕೊಟ್ಟಿದ್ದು ನಿಜ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಈ ಇನ್ನೂ ಕೆಲವು ಮಾಹಿತಿ ಕಲೆ ಹಾಕಲು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ವೈದ್ಯಕೀಯ ಪರೀಕ್ಷೆಗೆ ಹಾಜರ್: ಪೊಲೀಸರು ಬಂಧಿಸಿದ ಮೂವರು ಆರ್ ಓ ಮತ್ತು ಒಬ್ಬ ಎಆರ್ ಓಗಳನ್ನು ವಿಚಾರಣೆ ನಡೆಸಿದ ಪೊಲೀಸರು, ಎಲ್ಲ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಯಿತು. ಬೌರಿಂಗ್ ಅಸ್ಪತ್ರೆಯಲ್ಲಿ ಬಂಧಿತ ಅಧಿಕಾರಿಗಳಿಗೆ ವೈದ್ಯಕೀಯ ಪರೀಕ್ಷೆ ಮಾಡಲಾಗುತ್ತಿದೆ. ಸಂಜೆ  4 ಗಂಟೆ ನಂತರ ಆರೋಪಿಗಳು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತಿದೆ. ಕೋರಮಂಗಲ ನ್ಯಾಯಾಧೀಶರ ನಿವಾಸಕ್ಕೆ ಹಾಜರು ಪಡಿಸಲು ಪೊಲೀಸರ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. 

ಮತದಾರರ ಪಟ್ಟಿ ಡಿಲೀಟ್‌ ಪ್ರಕರಣ ತನಿಖೆಗೆ ಆಗಮಿಸಿದ ಕೇಂದ್ರ ತಂಡ

ಬಂಧಿತ ಆರೋಪಿಗಳು :

  • ರವಿಕುಮಾರ್, ಚಿಲುಮೆ ಸಂಸ್ಥೆ ಮುಖ್ಯಸ್ಥ
  • ಕೆಂಪೇಗೌಡ, ಚಿಲುಮೆ ಸಂಸ್ಥೆ ಮೇಲ್ವಿಚಾರಕ
  • ಧರ್ಮೇಶ್, ಚಿಲುಮೆ ಸಂಸ್ಥೆ ಸಿಬ್ಬಂದಿ
  • ರೇಣುಕಾ ಪ್ರಸಾದ್, ಚಿಲುಮೆ ಸಂಸ್ಥೆ ನಿರ್ದೇಶಕ
  • ಪ್ರಜ್ವಲ್, ಚಿಲುಮೆ ಸಂಸ್ಥೆ ಡಿಜಿಟಲ್ ಆ್ಯಪ್‌ ನೋಡಿಕೊಳ್ಳುತ್ತಿದ್ದವ
  • ಲೋಕೇಶ್, ಚಿಲುಮೆ ಸಂಸ್ಥೆ ಸರ್ವೇ ಸಿಬ್ಬಂದಿ
  • ಶಿವಕುಮಾರ್, ಚಿಲುಮೆ ಸಂಸ್ಥೆ ಮತ್ತು ಅಧಿಕಾರಿಗಳ ನಡುವಿನ ಮಧ್ಯವರ್ತಿ
  • ಚಂದ್ರಶೇಖರ್, ಆರ್ ಓಮಹದೇವಪುರ ಕ್ಷೇತ್ರ
  • ಭಿಮಾಶಂಕರ್, ಆರ್ ಓ  ಚಿಕ್ಕಪೇಟೆ ಕ್ಷೇತ್ರ
  • ಸೊಹೇಲ್ ಅಹಮದ್, ಆರ್ ಓ ಶಿವಾಜಿನಗರ ಕ್ಷೇತ್ರ.
  • ಮಹೇಶ್, ಎಆರ್ ಓ ರಾಜರಾಜೇಶ್ವರಿ ನಗರ ಕ್ಷೇತ್ರ
Follow Us:
Download App:
  • android
  • ios