Asianet Suvarna News Asianet Suvarna News

ಯುವತಿ ಬಗ್ಗೆ ಆಕ್ಷೇಪಾರ್ಹ ಕಮೆಂಟ್, ಬೆದರಿಕೆ: ಮಹೇಶ್‌ ವಿಕ್ರಮ್ ಹೆಗ್ಡೆ ವಿರುದ್ಧ ಎಫ್‌ಐಆರ್!

ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೋರ್ವರಿಗೆ ಬೆದರಿಕೆ ಮಾನಹಾನಿಕಾರ ಕಾಮೆಂಟ್ ಹಾಕಿದ ಆರೋಪ ಹಿನ್ನೆಲೆ ಹಿಂದು ಮುಖಂಡ ಮಹೇಶ್ ವಿಕ್ರಮ್ ಹೆಗಡೆ ವಿರುದ್ಧ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

Offensive comment on young woman threat FIR against Mahesh Vikram Hegde at jeevan bhima nagar bengaluru rav
Author
First Published Sep 18, 2023, 1:04 PM IST

ಬೆಂಗಳೂರು (ಸೆ.18): ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೋರ್ವರಿಗೆ ಬೆದರಿಕೆ ಮಾನಹಾನಿಕಾರ ಕಾಮೆಂಟ್ ಹಾಕಿದ ಆರೋಪ ಹಿನ್ನೆಲೆ ಹಿಂದು ಮುಖಂಡ ಮಹೇಶ್ ವಿಕ್ರಮ್ ಹೆಗಡೆ ವಿರುದ್ಧ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ದೂರುದಾರ ಸುರೇಶ್ ಬಾಬು ಮತ್ತು ಆತನ ಮಗಳ ಬಗ್ಗೆ ವಿಕ್ರಮ್ ಹೆಗಡೆ ಟಿವಿ ವಿಕ್ರಮ್ ಅಧಿಕೃತ ಪೇಜ್‌ನಲ್ಲಿ ಮಾನಹಾನಿಯಾಗುವ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಹೀಗಾಗಿ ಆರೋಪಿ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ದೂರದಾರ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.

ಉದಯನಿಧಿ ಹಿಂದೂ ಧರ್ಮವನ್ನು ವಿರೋಧಿಸುವ ತಲೆಕೆಟ್ಟ ರಾಜಕಾರಣಿ: ಸಂಸದ ರಾಘವೇಂದ್ರ

ದೂರುದಾರರಿಗೆ ಕರೆ ಮಾಡಿರುವ ಮಹೇಶ್ ವಿಕ್ರಮ್ ಹೆಗಡೆ, ನಾವು ಸೌಜನ್ಯಳನ್ನೇ ಬಿಟ್ಟಿಲ್ಲ.ಅಂತಹ ಕಟೀಲ್ ಕೈನಲ್ಲೂ ಏನೂ ಮಾಡಲು ಆಗಿಲ್ಲ. ಇನ್ನು ನೀನು ಏನ್ ಕಿತ್ಕೊಳ್ತಿಯಾ? ಎಂದು ಬೆದರಿಕೆ ಹಾಕಿದ್ದಲ್ಲದೇ, ಕೇಂದ್ರ ಸರ್ಕಾರ ನಮ್ಮ ಕೈಯಲ್ಲಿದೆ ಸೌಜನ್ಯಳಿಗೆ ಆದ ಗತಿಯೇ ನಿನ್ನ ಮಗಳಿಗೆ ಆಗುತ್ತೆ ಎಂಬ ರೀತಿ ದೂರುದಾರರಿಗೆ ಬೆದರಿಕೆಯೊಡ್ಡಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಆರೋಪಿ ವಿರುದ್ಧ ಸೂಕ್ತ ಕ್ರಮಕ್ಕೆ ದೂರುದಾರ ಸುರೇಶ ಬಾಬು ಎಂಬುವವರಿಂದ ದೂರು ದಾಖಲು ಮಾಡಲಾಗಿದೆ.

Follow Us:
Download App:
  • android
  • ios