Asianet Suvarna News Asianet Suvarna News

ವಿಜಯಪುರದಲ್ಲಿ ಧೂಳೆಬ್ಬಿಸಿದ ಆಫ್‌ರೋಡ್ ರೇಸಿಂಗ್; ಯುವಕರನ್ನೇ ಹಿಂದಿಕ್ಕಿದ 70 ವರ್ಷದ ವೃದ್ಧ!

ವಿಜಯಪುರ ನಗರದ ಹೊರವಲಯದ ಹಂಚಿನಾಳ ಗ್ರಾಮದ ಬಳಿಯ ಹಳೆಯ ಕಲ್ಲು ಕ್ವಾರಿಯಲ್ಲಿ ನಡೆದ ಆಫ್ ರೋಡ್‌  ರೇಸ್‌ ಆಯೋಜಿಸಲಾಗಿತ್ತು. ರೇಸ್ ನಲ್ಲಿ ಪಾಲ್ಗೊಂಡ ವಾಹನಗಳು ಜನರನ್ನ ಆಕರ್ಷಿಸಿದವು. ನೋಡುಗರನ್ನ ಸೆಳೆದವು. ಇದೆ ಮೊದಲ ಬಾರಿ ವಿಜಯಪುರದಲ್ಲಿ ಆಪ್ ರೋಡ್ ಪೋರ್ ವ್ಹಿಲರ್ ರೇಸ್ ನಡೆಯುತ್ತಿರೋದು ಜನರಲ್ಲಿ ಕುತೂಹಲವನ್ನು ಮೂಡಿಸಿತ್ತು.

Off road racing by KA 28 off racing association at vijayapur today rav
Author
First Published Oct 1, 2023, 7:27 PM IST

- ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರದ (ಅ.1): ಮಲೆನಾಡು, ಗುಡ್ಡುಗಾಡು ಪ್ರದೇಶಗಳಲ್ಲಿ ಆಫ್ ರೋಡ್‌ ಜೀಪ್ ರೇಸ್‌(Off Road Jeep Race) ನಡೆಯೋದು ಕಾಮನ್.‌ ಆದ್ರೆ ಬಹುಪಾಲು ಬಯಲು ಪ್ರದೇಶವನ್ನೆ ಹೊಂದಿರೋ ವಿಜಯಪುರದಲ್ಲಿ ಇದೆ ಮೊದಲ ಬಾರಿಗೆ ಆಫ್ ರೋಡ್‌  ವಾಹನ ಸ್ಪರ್ಧೆ ರಣರೋಚಕ ಎನ್ನುವ ರೀತಿಯಲ್ಲಿ ನಡೆಯಿತು. ತಗ್ಗುದಿನ್ನೆಗಳಲ್ಲಿ ಜೀಪ್ ಗಳು ಓಡ್ತಿದ್ರೆ ನೋಡ್ತಿದ್ದ ಪ್ರೇಕ್ಷಕರು ಥ್ರಿಲ್‌ ಆದ್ರು. ಇನ್ನು ಆಗಾಗ ಪಲ್ಟಿ ಹೊಡೆಯುತ್ತಿದ್ದ ವಾಹನಗಳು ನೋಡುಗರನ್ನ ಮತ್ತಷ್ಟು ರೋಮಾಂಚನಗೊಳಿಸಿದ್ವು

Off road racing by KA 28 off racing association at vijayapur today rav

ಮೊದಲ ಬಾರಿ ಗುಮ್ಮಟನಗರಿಯಲ್ಲಿ ನಡೆದ ಆಫ್ ರೋಡ್‌  4×4 ರೇಸ್!

ಜೀಪ್ ರೇಸಿಂಗ್‌ ಪ್ರಿಯರನ್ನ ಥ್ರಿಲ್‌ ಗೊಳಿಸೋ ಈ ಆಫ್ ರೋಡ್‌  ಫೋರ್ ವಿಲ್ಹರ್‌ ರೇಸ್‌ ನಡೆದಿದ್ದು ಗುಮ್ಮಟನಗರಿ ವಿಜಯಪುರದಲ್ಲಿ. ಇದೆ ಮೊದಲ ಬಾರಿಗೆ ವಿಜಯಪುರದ "KA 28 ಆಫ್ ರೋಡ್ ಅಸೋಶಿಯೇಶನ್‌" ಈ ಆಫ್ ರೋಡ್‌  ರೇಸ್‌ ಹಮ್ಮಿಕೊಂಡಿತ್ತು. 

ವಿಜಯಪುರ ನಗರದ ಹೊರವಲಯದ ಹಂಚಿನಾಳ ಗ್ರಾಮದ ಬಳಿಯ ಹಳೆಯ ಕಲ್ಲು ಕ್ವಾರಿಯಲ್ಲಿ ನಡೆದ ಆಫ್ ರೋಡ್‌  ರೇಸ್‌ ಆಯೋಜಿಸಲಾಗಿತ್ತು. ರೇಸ್ ನಲ್ಲಿ ಪಾಲ್ಗೊಂಡ ವಾಹನಗಳು ಜನರನ್ನ ಆಕರ್ಷಿಸಿದವು. ನೋಡುಗರನ್ನ ಸೆಳೆದವು. ಇದೆ ಮೊದಲ ಬಾರಿ ವಿಜಯಪುರದಲ್ಲಿ ಆಪ್ ರೋಡ್ ಪೋರ್ ವ್ಹಿಲರ್ ರೇಸ್ ನಡೆಯುತ್ತಿರೋದು ಜನರಲ್ಲಿ ಕುತೂಹಲವನ್ನು ಮೂಡಿಸಿತ್ತು.

ಸ್ಪರ್ಧೆಗಾಗಿ ಕಲ್ಲುಕ್ವಾರಿಯಲ್ಲಿ 5 ಆಫ್ ನಿರ್ಮಿಸಿದ ಆಯೋಜಕರು..!

ಈ ಸ್ಪರ್ಧೆಯಲ್ಲಿ ಮಾಡಿಪೈಡ್‌ ಕಾರ್‌ ಹಾಗೂ ಸ್ಟಾಕ್‌ ವಾಹನಗಳಿಗೆ ಪ್ರತ್ಯೇಕ ವಿಭಾಗಗಳನ್ನ ಮಾಡಲಾಗಿತ್ತು. ಕಲ್ಲು ಕ್ವಾರಿಯಲ್ಲಿ 5 ಡಿಫ್ರೆಂಟ್ ಆಫ್‌ ರೋಡ್‌ ಗಳನ್ನ ಆಯೋಜಕರೆ ನಿರ್ಮಾಣ ಮಾಡಿದ್ದರು. ತಗ್ಗು-ದಿನ್ನೆಗಳಲ್ಲಿ ಜೀಪ್‌ಗಳು ಓಡ್ತಿದ್ರೆ ನೋಡ್ತಿದ್ದವರು ಕೇಕೆ ಚಪ್ಪಾಳೆ ಹಾಕಿದ್ರು. ಒಂದು ಕಡೆಗೆ ಕಲ್ಲು ಕ್ವಾರಿಯಿಂದ ತಗ್ಗು ದಿನ್ನೆ ಉಂಟಾಗಿದ್ದು, ಹಾಗೂ ಬಯಲು ಪ್ರದೇಶದಲ್ಲಿ ನೈಸರ್ಗಿಕವಾಗಿ ತಗ್ಗು ದಿನ್ನೆಗಳು ಇರೋದು ಆಫ್ ರೋಡ್‌  ರೇಸಿಂಗ್‌ಗೆ ಅನುವು ಮಾಡಿಕೊಟ್ಟಿದ್ದು ವಿಶೇಷ.

ಪಲ್ಟಿ ಹೊಡೆದ ರೇಸ್ ವಾಹನಗಳು, ಯಾವುದೇ ಪ್ರಾಣಾಪಾಯ ಇಲ್ಲ

ಇನ್ನು ರೇಸ್‌ ವೇಳೆ ಕೆಲ ವಾಹನಗಳು ಪಲ್ಟಿ ಹೊಡೆದ್ವು. ಈ ದೃಶ್ಯಗಳು ನೋಡುಗರನ್ನ ಮತ್ತಷ್ಟು ಥ್ರಿಲ್‌ ಗೊಳಿಸಿದವು. ವಾಹನಗಳು ಪಲ್ಟಿಯಾದಾಗ ಒಳಗೆ ಸಿಕ್ಕವರನ್ನ ಹೊರ ತೆಗೆಯಲು ಆಯೋಜಕರು ಹರಸಾಹಸ ಪಡಬೇಕಾಯ್ತು. ಮೂರ್ನಾಲ್ಕು ಜೀಪ್‌ಗಳು ಪಲ್ಟಿ ಹೊಡೆದರು ಒಳಗಿದ್ದವರಿಗೆ ಯಾವುದೆ ಗಾಯಗಳಾಗಿಲ್ಲ. ಸುರಕ್ಷಿತವಾಗಿಯೇ ಪಾರಾಗಿದ್ದಾರೆ. ಇನ್ನು ಸ್ಪರ್ಧೆ ವೇಳೆ ಸ್ಪರ್ಧಾಳುಗಳು ಎಲ್ಲ ರೀತಿಯ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿದ್ದರು. ತಲೆಗೆ ಹೆಲ್ಮೆಟ್, ವಿಶೇಷ ಸುರಕ್ಷತಾ ಪೋಷಾಕುಗಳನ್ನ ಧರಿಸಿಯೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಆಯೋಜನರು ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರು.

Off road racing by KA 28 off racing association at vijayapur today rav

ಹೊರ ರಾಜ್ಯಗಳಿಂದ ಬಂದ ಸ್ಪರ್ಧಾಳುಗಳು

ಈ ರೇಸ್‌ ನಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗೋವಾ ಸೇರಿ ಐದಾರು ರಾಜ್ಯಗಳ ಸ್ಪರ್ಧಾಳುಗಳು ಭಾಗಿಯಾಗಿದ್ದರು. 55ಕ್ಕು ಅಧಿಕ ಆಪ್‌ ರೋಡ್‌ ವಾಹನಗಳು ರೇಸ್‌ಲ್ಲಿ ಪಾಲ್ಗೊಂಡಿದ್ದವು. ಕಳೆದ ಹಂಪಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಸ್ಪರ್ಧಾಳುಗಳು ಸಹ ಇಲ್ಲಿ ಪಾಲ್ಗೊಂಡು ಸ್ಪರ್ಧೆಗೆ ಮೆರಗು ತಂದರು.

ರೇಸಲ್ಲಿ ಪಾಲ್ಗೊಂಡು ಗಮನ ಸೆಳೆದ ಮಹಿಳಾಮಣಿಗಳು!

ಮಹಿಳೆಯರು ಈಗ ಎಲ್ಲ ಕ್ಷೇತ್ರಗಳಲ್ಲು ತಮ್ಮ ಛಾಪು ಮೂಡಿಸಿದ್ದಾರೆ.  ಹಾಗೇ ಇಲ್ಲಿ ನಡೆದ ಆಪ್ ರೋಡ್ ಜೀಪ್ ರೇಸ್‌ನಲ್ಲಿಯು ಮಹಿಳೆಯರು ಪಾಲ್ಗೊಂಡಿದ್ದರು. 4 ಮಹಿಳೆಯರು ರೇಸ್‌ನಲ್ಲಿ ಪಾಲ್ಗೊಂಡು ಜೀಪ್ ಓಡಿಸಿದ್ರು‌. ವಿಶೇಷ ಅಂದ್ರೆ ಪಾಲ್ಗೊಂಡ ಮಹಿಳೆಯರೆಲ್ಲರು ವಿಜಯಪುರ ಜಿಲ್ಲೆಯರೇ ಅನ್ನೋದು.

Off road racing by KA 28 off racing association at vijayapur today rav

ಆಫ್ ರೋಡ್‌  ರೇಸಲ್ಲಿ ಸಮಯವೇ ಎಲ್ಲಾ..!

ಐದು ವಿಭಾಗಗಳಲ್ಲಿ ನಡೆದ ಸ್ಪರ್ದೆಗಳಲ್ಲಿ ಟೈಂ ಟ್ರಯಲ್ಸ್ ಪ್ರಕಾರ ವೆಹಿಕಲ್ಸ್ ಗಳು ಗುರಿ ತಲುಪಬೇಕು. ಯಾವ ವೆಹಿಕಲ್ ಗುರಿ ತಲಕುಪಿ ಬೇಗನೇ ಬರುತ್ತದೆಯೋ ಅವರು ಸ್ಪರ್ಧೆಯಲ್ಲಿ ಗೆದ್ದ ಹಾಗೆ ಎಂಬ ನಿಯಮವಿದೆ. ಹಾಗೇ ಸಮಯಕ್ಕೆ ಕಟ್ಟು ಬಿದ್ದ ಸ್ಪರ್ಧಾಳುಗಳು ವೇಗವಾಗಿ ಗುರಿ ಸಲುಪಲು ಸಾಗುತ್ತಿದ್ದದ್ದು ಪ್ರೇಕ್ಷಕರನ್ನ ಸಿಳ್ಳೆ ಹೊಡೆಯುವ ಹಾಗೇ ಮಾಡಿತ್ತು.

ರೇಸಲ್ಲಿ ಯುವಕರನ್ನೆ ಹಿಂದಿಕ್ಕಿದ 70 ವರ್ಷದ ವೃದ್ಧ!

ಇನ್ನೊಂದು ವಿಶೇಷ ಅಂದ್ರೆ ಮಹಾರಾಷ್ಟ್ರದ ಪೂಣಾ ಮೂಲದ 70 ವರ್ಷದ ರಮೇಶ್‌ ಔಜಾ ಅನ್ನೋ ವೃದ್ದ ಸಹ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ. ಯುವ ರೇಸರ್ಸ್‌ ಗಳನ್ನ ಮೀರಿಸುವ ರೀತಿಯಲ್ಲಿ ಪ್ರದರ್ಶನ ನೀಡಿ ಜನರನ್ನ ಬೆರಗಾಗುವ ಹಾಗೇ ಮಾಡಿದ. ಕಳೆದ 40 ವರ್ಷಗಳಿಂದ ರೇಸಿಂಗ್, ಥ್ರಿಲ್ಲಿಂಗ್ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳೊದು ಅಂದ್ರೆ ರಮೇಶ ಔಜಾಗೆ  ಪಂಚಪ್ರಾಣವಂತೆ. ವಯಸ್ಸಾಗಿದ್ದರು, ರೇಸಿಂಗ್‌ನಲ್ಲಿ ಯುವಕರಿಗೆ ಟಕ್ಕರ್ ಕೊಡ್ತಾರಂತೆ ವೃದ್ಧ ರಮೇಶ ಔಜಾ.. 

Off road racing by KA 28 off racing association at vijayapur today rav

ವಿಜಯಪುರಿಗರಿಂದ ಉತ್ತಮ ಪ್ರತಿಕ್ರಿಯೆ..!

ಮೊದಲ ಬಾರಿ ಆಯೋಜಿಸಿದ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕ ಹಿನ್ನೆಲೆ ಆಯೋಜಕರು ಪ್ರತಿ ವರ್ಷ ಸಿದ್ದೇಶ್ವರ ಜಾತ್ರೆಗೆ ಆಪ್‌ ರೋಡ್‌ ರೇಸ್‌ ಹಮ್ಮಿಕೊಳ್ಳುವ ನಿರ್ಧಾರಕ್ಕೆ ಬಂದಿದೆ. ಚಿಕ್ಕಮಗಳೂರು, ಮಲೆನಾಡು ಈ ಭಾಗದಲ್ಲಿ ಹೆಚ್ಚೆಚ್ಚು ನಡೆಯುತ್ತಿದ್ದ ಆಪ್‌ ರೋಡ್‌ ರೇಜಿಂಗ್‌ ಇದೆ ಮೊದಲ ಬಾರಿಗೆ ವಿಜಯಪುರದಲ್ಲಿ ನಡೆದರು ಸಖತ್‌ ರೆಸ್ಪಾನ್ಸ್‌ ಸಿಕ್ಕಿದೆ. ಒಟ್ಟಿನಲ್ಲಿ ಎತ್ತಿನ ಬಂಡಿ ಓಟ, ಹೋರಿ ಓಟ ಕಂಡು ಎಂಜಾಯ್‌ ಮಾಡ್ತಿದ್ದ ವಿಜಯಪುರಿಗರಿಗೆ ಜೀಪ್‌ ರೇಸ್‌ ಸಖತ್‌ ಮಜಾ ನೀಡಿದೆ.

Follow Us:
Download App:
  • android
  • ios