ಕನ್ನಡ ಪರ ಕಾಯ್ದೆಗಳಿಗೆ ಕಾನೂನು ಹೋರಾಟದ ಅಡ್ಡಿ: ಸರ್ಕಾರದ ಅನೇಕ ಪ್ರಯತ್ನ ಮೂಲೆಗೆ!
ಕನ್ನಡ ನಾಡು-ನುಡಿ ಬೆಳವಣಿಗೆ ಹೊಸದಾಗಿ ರಾಜ್ಯದಲ್ಲಿ ಜಾರಿಗೆ ತರಲು ಹೊರಟರೆ ಅದಕ್ಕೆ ನೂರೆಂಟು ವಿಘ್ನ, ಸ್ವಯಂ ಪ್ರೇರಣೆಯಿಂದ ಬೆಳವಣಿಗೆಗೆ ಕೊಡುಗೆ ನೀಡುವುದು ದೂರದ ಮಾತು.
• ವೆಂಕಟೇಶ್ ಕಲಿಪಿ
ಬೆಂಗಳೂರು (ಅ.31): ಕನ್ನಡ ನಾಡು-ನುಡಿ ಬೆಳವಣಿಗೆ ಹೊಸದಾಗಿ ರಾಜ್ಯದಲ್ಲಿ ಜಾರಿಗೆ ತರಲು ಹೊರಟರೆ ಅದಕ್ಕೆ ನೂರೆಂಟು ವಿಘ್ನ, ಸ್ವಯಂ ಪ್ರೇರಣೆಯಿಂದ ಬೆಳವಣಿಗೆಗೆ ಕೊಡುಗೆ ನೀಡುವುದು ದೂರದ ಮಾತು. ಕಾನೂನು ಮೂಲಕ ಜಾರಿಗೆ ತರಲು ಹೊರಟರೆ ತಕ್ಷಣ ನ್ಯಾಯಾಲಯದ ಮೆಟ್ಟಿಲು ಹತ್ತುತ್ತಿರುವುದರಿಂದ ಪ್ರಯತ್ನಗಳು ಮೂಲೆ ಸೇರುವಂತಾಗುತ್ತದೆ. ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕಲಿಕೆ, ಒಂದು ಭಾಷೆಯಾಗಿ ಕನ್ನಡ ಕಲಿಕೆ ಇಲ್ಲವೇ ವಾಣಿಜ್ಯ ಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕೆಂಬ ಆದೇಶ ಜಾರಿಯಾದರೂ ಸಹ ರಾಜ್ಯದ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡವವರೇ ಜಾರಿಗೆ ಆಕ್ಷೇಪಿಸುತ್ತಾರೆ.
ಕೆಲವರು ನ್ಯಾಯಾಲಯದ ಮೊರೆ ಹೋಗುವಂತಹ ಪ್ರಸಂ ಗಗಳು ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ನಡೆದಿವೆ. ಸರ್ಕಾರದ ಕಾನೂನು, ಆದೇಶಗಳನ್ನು ಯಾರು ಬೇಕಾದರೂ ಪ್ರಶ್ನಿಸಬಹುದು, ಸಂವಿಧಾನದ ಅಡಿ ಯಲ್ಲಿ ನೀಡಿರುವ ಹಕ್ಕುಗಳ ಉಲ್ಲಂಘನೆಯಾಗದಂತೆ ಜಾರಿ ತರಬೇಕೆಂಬ ವಾದ ಸರಿ. ಆದರೆ ಕನ್ನಡ ನಾಡಿ ನಲ್ಲಿದ್ದು ಇಲ್ಲಿಯ ಭಾಷೆ, ಸಂಸ್ಕೃತಿಗಳ ಬಗ್ಗೆ ಅರಿವು ಮೂಡಿಸಬೇಕೆಂಬ ಉದ್ದೇಶದ ಕಾನೂ ನುಗಳನ್ನು ಪಾಲಿಸಬೇಕು ಎಂಬ ಔದಾರ್ಯ ಕೆಲ ಸಂಘ- ಸಂಸ್ಥೆಗಳು, ಕೆಲವರಲ್ಲಿ ಕಾಣುತ್ತಿಲ್ಲ.
100 ಸಾಧಕರಿಗೆ ಸುವರ್ಣೋತ್ಸವ ಸಂಭ್ರಮ ಪ್ರಶಸ್ತಿ: ಸಚಿವ ಶಿವರಾಜ ತಂಗಡಗಿ
ಕನ್ನಡಪರ ಕಾನೂನು ಜಾರಿಗೆ ಮುಂದಾಗುತ್ತಿದ್ದಂತೆ ಕೆಲವರು ಕೋರ್ಟ್‌ಗಳಲ್ಲಿ ಪ್ರಶ್ನಿಸುತ್ತಿವೆ. ಸಹಜವಾಗಿ ಕೋರ್ಟ್‌ಗಳು ಕಾನೂನಿನ ಕಣ್ಣಿನಲ್ಲಿ ಪರಿಶೀಲಿಸಿ ಜಾರಿಗೆ ತಡೆಯಾಜ್ಞೆ ನೀಡು ಇವೆ. ಇಲ್ಲವೇ ನ್ಯಾಯಾಲಯದ ಅನುಮತಿ ಪಡೆ ಯದೇ ಜಾರಿ ಮಾಡಬಾರದು ಎಂದು ಆದೇಶಿಸಿದರೆ, ಕಾನೂನುಗಳು ಜಾರಿ ಅನಿರ್ದಿಷ್ಟಾವಧಿಗೆ ಮುಂದೂ ಡುತ್ತದೆ. ಇನ್ನೂ ಕೆಲ ಕಾನೂನುಗಳನ್ನೇ ಅಸಿಂಧು ಗೊಳಿಸಿದೆ, ಹೀಗಾಗಿ ಕನ್ನಡಮಯ ವಾತಾವರಣ ಸೃಷ್ಟಿಸಲು ಸರ್ಕಾರದ ಯತ್ನ ಒಂದು ರೀತಿಯಲ್ಲಿ ವಿಫಲವಾಗುತ್ತಿವೆ.
ಕನ್ನಡ ಮಾಧ್ಯಮಕ್ಕೆ ಸೋಲು: ರಾಜ್ಯದಲ್ಲಿ 1ರಿಂದ 5ನೇ ತರಗತಿವರೆಗೆ ವಿದ್ಯಾರ್ಥಿಗಳು ಕನ್ನಡ ಮಾಧ್ಯ ಮ ದಲ್ಲೇ ಕಲಿಯಬೇಕು ಎಂದು ರಾಜ್ಯ ಸರ್ಕಾರ ಕಾನೂನು ರೂಪಿಸಿ 1989ರಲ್ಲಿ ಜಾರಿಗೆ ತಂದಿತ್ತು. ಆದರೆ, ಅದನ್ನು ಪ್ರಶ್ನಿಸಿ ಹಲವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಯಾವ ಮಾಧ್ಯಮದಲ್ಲಿ ಶಿಕ್ಷಣ ಪಡೆದುಕೊಳ್ಳಬೇಕು ಎಂಬ ಆಯ್ಕೆ ಪೋಷಕರಿಗೆ ಬಿಟ್ಟಿರುತ್ತದೆ. ಕಡ್ಡಾಯಗೊಳಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ಹೈಕೋರ್ಟ್ 2009ರಲ್ಲಿ ಆದೇಶಿಸಿತ್ತು. ಈ ಆದೇಶವನ್ನು 2013ರಲ್ಲಿ ಸುಪ್ರೀಂ ಎತ್ತಿಹಿಡಿಯಿತು. ಇದರಿಂದ ಕನ್ನಡ ಮಾಧ್ಯ ಮದ ಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆಯ ಬೇಕೆಂದು ರೂಪಿಸಿದ ಕಾನೂನಿಗೆ ಸೋಲಾಯಿತು.
ಕನ್ನಡ ಭಾಷೆ ಕಲಿಕೆಗೂ ಆಕ್ಷೇಪ: ರಾಜ್ಯದ ಎಲ್ಲ ಶಾಲೆಗಳಲ್ಲೂ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸು ವುದನ್ನು ಕಡ್ಡಾಯಗೊಳಿಸಲು ರೂಪಿಸಿದ ಕನ್ನಡ ಭಾಷೆ ಕಲಿಕಾ ಕಾಯ್ದೆ-2018 ಅನ್ನು ಪ್ರಶ್ನಿಸಿ 4ನೇ ತರಗತಿ ವಿದ್ಯಾರ್ಥಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ. ಈ ವಿಚಾರಣೆ ಕೋರ್ಟ್ ನಲ್ಲಿ ಬಾಕಿಯಿದೆ. ಇದರಿಂದ ಈ ನಿಯಮ ಸಹ ಇನ್ನೂ ಜಾರಿಯಾಗಿಲ್ಲ. ಹಾಗೆಯೇ, ರಾಜ್ಯದ ಪದವಿ ಕಾಲೇಜುಗಳಲ್ಲಿ ಕನ್ನಡವನ್ನು ಒಂದು ಭಾಷಾ ವಿಷಯವಾಗಿ ಕಲಿಯು ವುದನ್ನು ಕಡ್ಡಾಯಗೊಳಿಸಿ 2021ರಲ್ಲಿ ಸರ್ಕಾರವು ಹೊರಡಿಸಿದ್ದ ಆದೇಶ ಸಹ ವಿವಾದ ಸ್ವರೂಪ ಪಡೆದು ಕೋರ್ಟ್ ಮೆಟ್ಟಿಲೇರಿದೆ.
ಪದವಿ ಹಂತದಲ್ಲಿ ಕನ್ನಡ ಕಡ್ಡಾಯ ಕಲಿಕೆ ಮಾಡಿದ ಆದೇಶ ಪ್ರಶ್ನಿಸಿ ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್, ಮಹಾವಿದ್ಯಾಲಯ ಸಂಸ್ಕೃತ ಪ್ರಾಧ್ಯಾಪಕ ಸಂಘ ಹಾಗೂ ಕೆಲವು ವಿದ್ಯಾರ್ಥಿಗಳು ಸಲ್ಲಿಸಿರುವ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿಗಳ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿ ಪರಿಗಣಿಸಿದ ಹೈ ಕೋರ್ಟ್ ವಿಭಾಗೀಯ ಪೀಠ, ರಾಜ್ಯದಲ್ಲಿ ಪದವಿ ಶಿಕ್ಷಣದಲ್ಲಿ ಕನ್ನಡ ಭಾಷಾ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಬಯಸದ ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಡದಂತೆ ಸೂಚಿಸಿ 2021ರ ನ.1 ರಂದು ಹೈಕೋರ್ಟ್ ಮಧ್ಯಂತ ಆದೇಶ ಮಾಡಿದೆ. ಪ್ರಕರಣವು ವಿಚಾರಣಾ ಹಂತ ದಲ್ಲಿದ್ದು, ಪದವಿ ಶಿಕ್ಷಣದಲ್ಲಿ ಕನ್ನಡ ಬೋಧಿಸುವ ನಿಯಮ ಜಾರಿಯಾಗದೆ ಉಳಿದಿದೆ.
ಕನ್ನಡಫಲಕಕ್ಕೂ ವಿರೋಧ: ಇನ್ನೂ ರಾಜ್ಯದಲ್ಲಿರುವ ವಾಣಿಜ್ಯ ಸಂಸ್ಥೆಗಳು ಕನ್ನಡದಲ್ಲಿ ನಾಮಫಲಕ ಅಳವ ಡಿಸುವ ನಿಯಮ ಕೋರ್ಟ್ ಮೆಟ್ಟಿಲೇರಿದೆ. ಕನ್ನಡ ದಲ್ಲಿ ನಾಮಫಲಕ ಅಳವಡಿಸುವ ಕುರಿತು ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳು ನೀಡಿದ ನೋಟಿಸ್ಗಳನ್ನು ಪ್ರಶ್ನಿಸಿ ವಾಣಿಜ್ಯ ಸಂಸ್ಥೆಗಳು ಹೈಕೋರ್ಟ್ ಮೆಟ್ಟಿಲೇರಿವೆ. ನೋಟಿಸ್/ ಸುತ್ತೋಲೆ ಪ್ರಕಟಿಸುವ ಮೂಲಕ ಜಾರಿಗೊಳಿಸಿದ್ದರಿಂದ ಆ ನೋಟಿಸ್/ ಸುತ್ತೋಲೆಯನ್ನು ಹೈಕೋರ್ಟ್ ರದ್ದುಪಡಿಸಿದೆ. ನಂತರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಕಾಯ್ದೆ -2022ಗೆ ತಿದ್ದುಪಡಿ ತಂದ ರಾಜ್ಯ ಸರ್ಕಾರ, ರಾಜ್ಯದ ವಾಣಿಜ್ಯ ಮತ್ತು ಇತರೆ ಸಂಸ್ಥೆಗಳು ತಮ್ಮ ನಾಮಫಲಕಗಳಲ್ಲಿ (ಸೂಚನಾ ಫಲಕಗಳಲ್ಲಿ) ಶೇ.60ರಷ್ಟು ಕಡ್ಡಾಯವಾಗಿ ಕನ್ನಡ ಭಾಷೆ ಬಳಸಬೇಕು ಎಂದು ಸೂಚಿಸಿ 2024ರ ಫೆ.26ರಂದು ಆದೇಶಿಸಿದೆ. ಅದನ್ನು ಪ್ರಶ್ನಿಸಿ ಭಾರತೀಯ ರಿಟೇಲರ್ಸ್ ಅಸೋಸಿಯೇಷನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ಇದರಿಂದ ಈ ವಿಚಾರವೂ ಇದೀಗ ಹೈಕೋರ್ಟ್ ವಿಚಾರಣಾ ಸುಪರ್ದಿಗೆ ಒಳಪಟ್ಟಿದೆ.
ನನ್ನನ್ನು ಸಂಪುಟದಿಂದ ಕಿತ್ತೊಗೆಯಲು ಸಾಧ್ಯವಿಲ್ಲ: ಸಚಿವ ಜಮೀರ್ ಅಹ್ಮದ್ ಖಾನ್
ಬಂದ್‌ಗೂ ನಿರ್ಬಂಧ: ಕನ್ನಡದ ನೆಲ-ಜಲ, ಭಾಷೆ ಗಳ ಪರವಾಗಿ ಕನ್ನಡ ಸಂಘಟನೆಗಳು ಬಂದ್ ನಡೆಸದಂತೆ ಆಕ್ಷೇಪಿಸಿ ಕೆಲವರು ಕಾನೂನಿನ ಮೊರೆ ಹೋಗಿದ್ದಾರೆ.ಹೀಗಾಗಿ ನಾಡಿನ ಪರವಾಗಿ ಕನ್ನಡ ಪರ ಸಂಘಟನೆಗಳು ಬಂದ್ ಮಾಡದಂತೆ ಕಾನೂನಿನ ಕಟ್ಟಲಾಗಿದೆ. ಇದರಿಂದ ಬಂದ್‌ಗಳು ವಿಫಲವಾದ ಉದಾಹರಣೆ ಗಳೂ ಇವೆ.