ಪ್ರಜ್ವಲ್ ಕೇಸಿನ ಪೆನ್‌ಡ್ರೈವ್‌ನಲ್ಲಿರುವ ಅಶ್ಲೀಲ ವಿಡಿಯೋ: ಅಸಲಿಯೋ?, ನಕಲಿಯೋ: ಎಫ್ಫೆಸ್ಸೆಲ್ ವರದಿಯಲ್ಲಿದೆ ಸತ್ಯಾಂಶ..!
ಪೆನ್‌ಡ್ರೈವ್‌ನಲ್ಲಿ ಪತ್ತೆಯಾದ ಅಶ್ಲೀಲ ವಿಡಿಯೋಗಳು ತಿರುಚಿದ ವಿಡಿಯೋಗಳಲ್ಲ. ಅವುಗಳು ಅಸಲಿಯಾಗಿವೆ. ಆ ದೃಶ್ಯಗಳಲ್ಲಿ ಕಾಣುವ ವ್ಯಕ್ತಿಯ ಅಂಗಾಂಗಗಳಿಗೂ ಆರೋಪಿ ಪ್ರಜ್ವಲ್ ಅಂಗಾಂಗಗಳಿಗೂ ಹೋಲಿಕೆಯಾಗಿದೆ ಎಂದು ಎಫ್‌ಎಸ್‌ಎಲ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರು(ಆ.02): ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಪೆನ್‌ಡ್ರೈವ್‌ನಲ್ಲಿದ್ದ ಅಶ್ಲೀಲ ವಿಡಿಯೋಗಳಲ್ಲಿ ಕಾಣಿಸಿಕೊಂಡ ವ್ಯಕ್ತಿಗೂ ಪ್ರಜ್ವಲ್‌ಗೂ ಹೋಲಿಕೆಯಿದೆ ಎಂದು ಎಸ್‌ಐಟಿಗೆ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್‌ಎಲ್) ವರದಿ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.
ಪೆನ್‌ಡ್ರೈವ್‌ನಲ್ಲಿ ಪತ್ತೆಯಾದ ಅಶ್ಲೀಲ ವಿಡಿಯೋಗಳು ತಿರುಚಿದ ವಿಡಿಯೋಗಳಲ್ಲ. ಅವುಗಳು ಅಸಲಿಯಾಗಿವೆ. ಆ ದೃಶ್ಯಗಳಲ್ಲಿ ಕಾಣುವ ವ್ಯಕ್ತಿಯ ಅಂಗಾಂಗಗಳಿಗೂ ಆರೋಪಿ ಪ್ರಜ್ವಲ್ ಅಂಗಾಂಗಗಳಿಗೂ ಹೋಲಿಕೆಯಾಗಿದೆ ಎಂದು ಎಫ್‌ಎಸ್‌ಎಲ್ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಕುಟುಂಬದ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ; ಕಾಲವೇ ಉತ್ತರಿಸಲಿದೆ: ಎಂಎಲ್‌ಸಿ ಸೂರಜ್ ರೇವಣ್ಣ
ಲೋಕಸಭಾ ಚುನಾವಣೆ ವೇಳೆ ಹಾಸನ ಕ್ಷೇತ್ರದಲ್ಲಿ ಮಾಜಿ ಸಂಸದ ಪ್ರಜ್ವಲ್ ಅವರಿಗೆ ಸೇರಿದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ತುಂಬಿದ್ದ ಪೆನ್ ಡ್ರೈವ್ ಹಂಚಿಕೆ ಬಿರುಗಾಳಿ ಎಬ್ಬಿಸಿತ್ತು. ಈ ಪೆನ್‌ಡ್ರೈವ್ ಹಗರಣದ ತನಿಖೆ ಕೈಗೆತ್ತಿಕೊಂಡ ಎಸ್‌ಐಟಿ, ಪೆನ್ ಡ್ರೈವ್‌ನಲ್ಲಿದ್ದ ಅಶ್ಲೀಲ ವಿಡಿಯೋಗಳ ಸತ್ಯಾಸತ್ಯತೆ ತಿಳಿಯಲು ಎಫ್‌ಎಸ್‌ಎಲ್‌ಗೆ ರವಾನಿಸಿತ್ತು. ವಿಡಿಯೋಗಳನ್ನು ಪರಿಶೀಲಿಸಿ ಎಫ್‌ಎಸ್ಎಲ್ ತಜ್ಞರು ಸಲ್ಲಿಸಿರುವ ವರದಿಯಲ್ಲಿ ಅವು ಅಸಲಿ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ: ಎಸ್‌ಐಟಿಗೆ ಹೈಕೋರ್ಟ್ ನೋಟಿಸ್
ಕೆಲವು ವಿಡಿಯೋ ಬಗ್ಗೆ ಮತ್ತೆ ಸ್ಪಷ್ಟನೆ:
ಪೆನ್ ಡ್ರೈವ್‌ನ ಅಶ್ಲೀಲ ವಿಡಿಯೋಗಳು ಅಸಲಿ ಎಂದು ಎಫ್‌ಎಸ್‌ಎಲ್ ಹೇಳಿದೆ. ಆದರೆ ಕೆಲ ವಿಡಿಯೋಗಳ ಬಗ್ಗೆ ಮತ್ತೆ ಸ್ಪಷ್ಟನೆ ಕೋರಿ ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದೆ. ಈ ವರದಿ ಬಳಿಕ ಆರೋಪ ಪಟ್ಟಿ ಸಲ್ಲಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ತಿಂಗಳಾಂತ್ಯಕ್ಕೆ ಆರೋಪ ಪಟ್ಟಿ ಸಲ್ಲಿಕೆ:
ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆ ಅಂತಿಮ ಹಂತಕ್ಕೆ ಬಂದಿದೆ. ಪ್ರಜ್ವಲ್ ವಿರುದ್ಧ ಮೂರು ಅತ್ಯಾಚಾರ ಪ್ರಕರಣಗಳು ಹಾಗೂ ಒಂದು ಪೆನ್‌ಡ್ರೈವ್ ಹಂಚಿಕೆ ಸೇರಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ. ಈ ಎಲ್ಲ ಪ್ರಕರಣಗಳ ತನಿಖೆಯನ್ನು ಭಾಗಶಃ ಮುಗಿಸಿರುವ ಎಸ್‌ಐಟಿ, ಆಗಸ್ಟ್ ತಿಂಗಳಾಂತ್ಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ ಎಂದು ಮೂಲಗಳು ಹೇಳಿವೆ.
ತಮ್ಮ ಮನೆಯ ಇಬ್ಬರು ಕೆಲಸದಾಳುಗಳು ಹಾಗೂ ಹಾಸನ ಜಿಲ್ಲೆಯ ಮಾಜಿ ಜಿ.ಪಂ. ಸದಸ್ಯೆ ಮೇಲಿನ ಅತ್ಯಾಚಾರ ಸೇರಿ ಮೂರು ಅತ್ಯಾಚಾರ ಪ್ರಕರಣಗಳು ಹಾಗೂ ಅನುಮತಿ ಇಲ್ಲದೆ ಅಶ್ಲೀಲ ವಿಡಿಯೋ ಮಾಡಿಕೊಂಡ ಆರೋಪದ ಮೇರೆಗೆ ಪೆನ್ ಡ್ರೈವ್ ಹಗರಣದ ಬಗ್ಗೆ ಎಫ್ಐಆರ್ ದಾಖಲಾಗಿವೆ.