ಸಿಎಂ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಸಂಸದ ಅನಂತಕುಮಾರ ಹೆಗ್ಡೆಗೆ ತಾತ್ಕಾಲಿಕ ರಿಲೀಫ್!
ರಾಮಮಂದಿರ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ಅನಂತಕುಮಾರ್ ಹೆಗ್ಡೆಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಮುಂದಿನ ವಿಚಾರಣೆವರೆಗೆ ಬಯವಂತದ ಕ್ರಮ ಬೇಡ ಎಂದು ತಿಳಿಸಿದೆ.
ಬೆಂಗಳೂರು (ಫೆ.16) ರಾಮಮಂದಿರ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ಅನಂತಕುಮಾರ್ ಹೆಗ್ಡೆಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಮುಂದಿನ ವಿಚಾರಣೆವರೆಗೆ ಬಯವಂತದ ಕ್ರಮ ಬೇಡ ಎಂದು ತಿಳಿಸಿದೆ.
ತನ್ನ ವಿರುದ್ಧದ ಪ್ರಕರಣಕ್ಕೆ ತಡೆಯಾಜ್ಞೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಅನಂತಕುಮಾರ್ ಹೆಗ್ಡೆ. ಅರ್ಜಿ ವಿಚಾರಣೆ ಹೈಕೋರ್ಟ್‌ನ ನ್ಯಾ. ಕೃಷ್ಣ ಎಸ್. ದೀಕ್ಷಿತ್‌ರ ಏಕಸದಸ್ಯ ಪೀಠದಲ್ಲಿ ನಡೆಯಿತು. ವಿಚಾರಣೆ ವೇಳೆ ಸಂಸದ ಅನಂತಕುಮಾರ ಹೆಗ್ಡೆಗೆ ತಿಳಿಹೇಳಿದ ಹೈಕೋರ್ಟ್. ಮುಖ್ಯಮಂತ್ರಿ ವಿರುದ್ಧ ಈ ರೀತಿ ಪದ ಬಳಕೆ ಮಾಡಬಹುದೇ? ಎಂದು ಪ್ರಶ್ನಿಸಿತು. ನಿಮಗೂ ಅವರಿಗೂ ಅಭಿಪ್ರಾಯ ಭೇದವಿರಬಹುದು. ಅವರ ಪಾಲಿಸಿ ಇಷ್ಟಪಡಬಹುದು ಅಥವಾ ಇಲ್ಲದಿರಬಹುದು. ಆದರೆ ಅವರು ರಾಜ್ಯದ ಮುಖ್ಯಮಂತ್ರಿ ಅಲ್ಲವೇ? ಅವರ ಬಗ್ಗೆ ಈ ರೀತಿಯ ಪದ ಬಳಕೆ ಮಾಡುವುದು ಸರಿಯಲ್ಲ. ಏಕವಚನದಲ್ಲಿ ಮಾತನಾಡುವುದು ಶೋಭೆ ತರುವ ವಿಚಾರವಲ್ಲ. ಪ್ರಧಾನಮಂತ್ರಿ, ಮುಖ್ಯಮಂತ್ರಿಗಳಿಗೆ ನಾವು ಗೌರವ ಸಲ್ಲಿಸದಿದ್ದರೆ ಹೇಗೆ? ಭಾಷೆ ಪ್ರಯೋಗ ಹಿಡಿತದಲ್ಲಿರಬೇಕು ಎಂದು ಸಂಸದ ಅನಂತಕುಮಾರ ಹೆಗ್ಡೆಗೆ ನ್ಯಾಯಾಧೀಶರು ತಿಳಿಹೇಳಿದರು.
ಅವರಾಗಲಿ, ನೀವಾಗಲಿ ಏಕವಚನದಲ್ಲಿ ಮಾತನಾಡಬಾರದು. ಚುನಾವಣೆಯಲ್ಲಿ ಒಂದು ಪಕ್ಷ ಬರುತ್ತದೆ, ಇನ್ನೊಂದು ಪಕ್ಷ ಹೋಗುತ್ತದೆ. ಪ್ರಜಾಪ್ರಭುತ್ವ ಕೆಲಸ ಮಾಡುವುದೇ ಹೀಗೆ ಅಲ್ಲವೇ.? ಯಾವಾಗಲೂ ಭಾಷೆಯ ಬಳಕೆ ಗೌರವಯುತ ಆಗಿರಬೇಕು. ಮುಖ್ಯಮಂತ್ರಿ, ಪ್ರಧಾನಮಂತ್ರಿಗೆ ಮನಸಿಗೆ ಬಂದಂತೆ ಮಾತನಾಡಬಾರದು. ನೀವು ನಿಮ್ಮ ಅರ್ಜಿದಾರರಿಗೆ ಸಲಹೆ ನೀಡಬೇಕು. ಸ್ವಲ್ಪ ಗಮನ ಇರಲಿ ನಿಮ್ಮ ಅರ್ಜಿದಾರರಿಗೆ ಸಲಹೆ ನೀಡಿ ಎಂದು ಹೆಗ್ಡೆ ಪರ ವಕೀಲರಿಗೂ ನ್ಯಾ. ಕೃಷ್ಣ ಎಸ್ ದೀಕ್ಷಿತ್ ಸೂಚನೆ ನೀಡಿದರು. ಮುಂದಿನ ವಿಚಾರಣೆವರೆಗೆ ಯಾವುದೇ ಬಲವಂತದ ಕ್ರಮ ಬೇಡವೆಂದು ಆದೇಶ ನೀಡಿ ಅರ್ಜಿ ವಿಚಾರಣೆ ಹೈಕೋರ್ಟ್ ಮುಂದೂಡಿತು.
'ನೀನು ಬಾರದಿದ್ದರೆ ರಾಮಜನ್ಮಭೂಮಿ ನಿಲ್ಲಲ್ಲ ಮಗನೇ..' ಸಿದ್ಧರಾಮಯ್ಯಗೆ ಏಕವಚನದಲ್ಲಿ ವಾಗ್ದಾಳಿ!