ಬೆಂಗಳೂರು (ಸೆ.20):  ರಾಜ್ಯದಲ್ಲಿ ಶನಿವಾರ ಒಂದೇ ದಿನ ಮತ್ತೆ 8364 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, 144 ಮಂದಿ ಸೋಂಕಿತರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಇದೇ ದಿನ ಸೋಂಕಿನಿಂದ ಗುಣಮುಖರಾದ 10,815 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಇದರೊಂದಿಗೆ ರಾಜ್ಯದಲ್ಲಿ ಇದುವರೆಗೆ ಸೋಂಕು ದೃಢಪಟ್ಟವರ ಒಟ್ಟು ಸಂಖ್ಯೆ 5,11,346ಕ್ಕೇರಿದ್ದು, ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ ಎಂಟು ಸಾವಿರದ ಗಡಿಯಂಚು 7922ಕ್ಕೆ (ಆತ್ಮಹತ್ಯೆ ಸೇರಿ ಅನ್ಯ ಕಾರಣದಿಂದ ಮೃತಪಟ್ಟ19 ಜನರನ್ನು ಬಿಟ್ಟು) ತಲುಪಿದೆ.

ಶನಿ​ವಾರ 10,815 ಮಂದಿ ಡಿಸ್‌​ಚಾಜ್‌ರ್‍ ಆಗು​ವು​ದ​ರೊಂದಿ​ಗೆ ಒಟ್ಟು ಸೋಂಕಿತರದಲ್ಲಿ ಇದುವರೆಗೆ 4,04,841 ಮಂದಿ ಗುಣಮುಖರಾದಂತಾ​ಗಿದೆ. ಸಕ್ರಿಯ ಸೋಂಕಿ​ತರ ಸಂಖ್ಯೆ 1 ಲಕ್ಷ​ಕ್ಕಿಂತ ಕೆಳಗೆ ಇಳಿ​ದಿದೆ. ಈ ಮೂಲಕ 98,564 ಸಕ್ರಿಯ ಸೋಂಕಿತರು ವಿವಿಧ ಆಸ್ಪತ್ರೆಗಳು, ಕೋವಿಡ್‌ ನಿಗಾ ಕೇಂದ್ರ ಹಾಗೂ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶನಿವಾರ ರಾಜ್ಯಾದ್ಯಂತ ಒಟ್ಟು 63784 ಕೊರೋನಾ ಪರೀಕ್ಷೆ ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆಯ ವರದಿಯಲ್ಲಿ ತಿಳಿಸಲಾಗಿದೆ.

ಜಿಲ್ಲಾವಾರು ಪ್ರಕರಣ:

ಜಿಲ್ಲಾವಾರು ಶನಿವಾರ ರಾಜಧಾನಿ ಬೆಂಗಳೂರಿನಲ್ಲಿ ಹೊಸದಾಗಿ 3733 ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನು ಮೈಸೂರು ಜಿಲ್ಲೆಯಲ್ಲಿ 626, ದಕ್ಷಿಣ ಕನ್ನಡ 432, ಗದಗ 391, ಬಳ್ಳಾರಿ 300, ಧಾರವಾಡ 264, ಉಡುಪಿ 215, ಬೆಂಗಳೂರು ಗ್ರಾಮಾಂತರ 189, ಚಿಕ್ಕಮಗಳೂರು 165, ದಾವಣಗೆರೆ 163, ತುಮಕೂರು 159, ರಾಯಚೂರು 156, ಬಾಗಲಕೋಟೆ 152, ಉತ್ತರ ಕನ್ನಡ 129, ಯಾದಗಿರಿ 127, ಕಲಬುರಗಿ 110, ಹಾವೇರಿ 107, ಶಿವಮೊಗ್ಗ 106, ಬೆಳಗಾವಿ 100, ಕೊಪ್ಪಳ 96, ಮಂಡ್ಯ 94, ಕೋಲಾರ 91, ಚಿಕ್ಕಬಳ್ಳಾಪುರ 89, ವಿಜಯಪುರ 87, ಚಿತ್ರದುರ್ಗ 84, ಚಾಮರಾಜನಗರ 72, ರಾಮನಗರ 47, ಕೊಡಗು 38, ಬೀದರ್‌ 23, ಹಾಸನದಲ್ಲಿ 19 ಮಂದಿಗೆ ಸೋಂಕು ದೃಢಪಟ್ಟಿದೆ.

ಬೆಂಗಳೂರಲ್ಲೇ 33 ಸಾವು:

ಇನ್ನು ಶನಿವಾರದ 114 ಸೋಂಕಿತರ ಸಾವಿನ ಪೈಕಿ ಬೆಂಗಳೂರಿನಲ್ಲೇ 33 ಮಂದಿ ಸಾವನ್ನಪ್ಪಿದ್ದಾರೆ. ಉಳಿದೆಡೆ ಮೈಸೂರಿನಲ್ಲಿ 12, ಬಳ್ಳಾರಿ, ಚಾಮರಾಜನಗರ, ಕೊಪ್ಪಳ ತಲಾ 7, ಬೆಳಗಾವಿ, ಉತ್ತರ ಕನ್ನಡ ತಲಾ 6, ದಕ್ಷಿಣ ಕನ್ನಡ, ಧಾರವಾಡ, ಹಾಸನ ತಲಾ 5, ತುಮಕೂರು 4, ಕಲಬುರಗಿ, ದಾವಣಗೆರೆ ತಲಾ 3, ಹಾವೇರಿ, ಮಂಡ್ಯ, ವಿಜಯಪುರ ತಲಾ 2, ರಾಯಚೂರು, ಶಿವಮೊಗ್ಗ, ಉಡುಪಿ, ಬಾಗಲಕೋಟೆ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತಲಾ ಒಬ್ಬರು ಕೋವಿಡ್‌ಗೆ ಬಲಿಯಾಗಿದ್ದಾರೆ.