Breaking: ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯಗೆ ನೋಟಿಸ್‌

ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯಗೆ ಮೈಸೂರು ಲೋಕಾಯುಕ್ತ ನೋಟಿಸ್‌ ಜಾರಿ ಮಾಡಿದೆ.ಕಚೇರಿಗೆ ಬಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿದೆ.

Notice to CM Siddaramaiah in Muda case By lokayukta san

ಬೆಂಗಳೂರು (ನ.4): ಸಿಎಂ ಸಿದ್ಧರಾಮಯ್ಯ ಅವರ ಘನತೆಗೆ ಕುತ್ತು ತಂದಿರುವ ಮುಡಾ ಹಗರಣದಲ್ಲಿ ದೊಡ್ಡ ಬೆಳವಣಿಗೆಯಾಗಿದೆ. ಸಿಎಂ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿ ಅವರನ್ನು ಗುಪ್ತ ಸ್ಥಳದಲ್ಲಿ ಲೋಕಾಯುಕ್ತ ವಿಚಾರಣೆ ನಡೆಸಿದ ಬಳಿಕ ಈಗ ಸಿದ್ದರಾಮಯ್ಯ ಅವರಿಗೆ ನೋಟಿಸ್‌ ಜಾರಿ ಮಾಡಿದೆ. ಲೋಕಾಯುಕ್ತ ಪೊಲೀಸರು ಸೋಮವಾರ ಸಿದ್ದರಾಮಯ್ಯಗೆ ನೋಟಿಸ್‌ ಜಾರಿ ಮಾಡಿದ್ದಾರೆ. ನವೆಂಬರ್ 6 ರಂದು ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸುವಂತೆ ನೋಟಿಸ್ ನೀಡಲಾಗಿದೆ. ಮೈಸೂರು ಕಚೇರಿಗೆ ಬಂದು ವಿಚಾಣೆ ಎದುರಿಸುವಂತೆ ನೋಟಿಸ್‌ ಕೊಡಲಾಗಿದೆ. ಇಡೀ ಪ್ರಕರಣದಲ್ಲಿ ಸಿದ್ಧರಾಮಯ್ಯ ಅವರೇ ಎ1 ಆರೋಪಿಯಾಗಿದ್ದಾರೆ. ಸದ್ಯ ರಾಜ್ಯದಲ್ಲಿ ವಕ್ಫ್‌ ಹಾಗೂ ಉಪಚುನಾವಣೆಯ ಗಲಾಟೆಗಳು ವ್ಯಾಪಕವಾಗಿದೆ. ಉಪಚುನಾವಣೆ ಹೋರಾಟದ ನಡುವೆಯೇ ಲೋಕಾಯುಕ್ತ ಪೊಲೀಸರು ಸಿದ್ದರಾಮಯ್ಯ ಅವರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರ 40 ವರ್ಷದ ರಾಜಕೀಯ ಜೀವನದಲ್ಲಿ ಹಗರಣವೊಂದರ ಕೇಸ್‌ನಲ್ಲಿ ಈ ರೀತಿಯ ವಿಚಾರಣೆ ಎದುರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಲೋಕಾಯುಕ್ತ ಈಗಾಗಲೇ ಪ್ರಕರಣದಲ್ಲಿ ಎಲ್ಲಾ ಆರೋಪಿಗಳ ವಿಚಾರಣೆಯನ್ನು ಮುಗಿಸಿದ್ದು, ಸಿಎಂ ಸಿದ್ದರಾಮಯ್ಯ ಅವರ ವಿಚಾರಣೆ ಮಾತ್ರವೇ ಬಾಕಿ ಉಳಿದಿತ್ತು. ಈಗ ಅವರಿಗೂ ವಿಚಾರಣೆಗೆ ಬರುವಂತೆ ನೋಟಿಸ್‌ ನೀಡಲಾಗಿದೆ.

ಮುಡಾ ಪ್ರಕರಣದಲ್ಲಿ ಲೋಕಾಯುಕ್ತರಿಂದ ನೋಟೀಸ್ ಜಾರಿ ಮಾಡಿದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾವೇರಿಯಲ್ಲಿ ಪ್ರತಿಕ್ರಿಯೆ ನೀಡಿದ್ದು, ನೋಟಿಸ್‌ ನೀಡಿದ್ದಾರೆ. ವಿಚಾರಣೆಗೆ ಹೋಗುತ್ತೇನೆ.. ಎಂದಷ್ಟೇ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಎದುರಿಸುತ್ತಿರುವ ಮೊಟ್ಟಮೊದಲ ವಿಚಾರಣೆ ಇದಾಗಿದೆ. ಯಾವುದೇ ಪ್ರಕರಣದಲ್ಲಿ ಈ ರೀತಿಯ ಆರೋಪಿಯಾಗಿ ಅವರು ವಿಚಾರಣೆ ಎದುರಿಸಿರಲಿಲ್ಲ.ಆದರೆ, ಮುಡಾ ಕೇಸ್‌ ಬಗೆದಷ್ಟು ಆಳವಾಗುತ್ತಿದ್ದು, ಅವರ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗೆ ಲೋಕಾಯುಕ್ತ ತನಿಖೆ ಎದುರಿಸಿದಂತಾಗಲಿದೆ.

'ಬ್ಲ್ಯಾಕ್‌ಮೇಲರ್‌' ಎಂದಿದ್ದಕ್ಕೆ ಸಿಎಂ ವಿರುದ್ಧ ಅಬ್ರಾಹಂ ಮಾನಹಾನಿ ದಾವೆ

ಸಣ್ಣ ಪುಟ್ಟ ಕಳ್ಳರನ್ನು ಹಿಡಿಯುತ್ತೀರಿ. ಆದರೆ, ಸಿದ್ದರಾಮಯ್ಯ ಮೇಲೆ ದೂರು ದಾಖಲಾಗಿದ್ದರೂ ಅವರನ್ನು ವಿಚಾರಣೆಗೆ ಒಳಪಡಿಸುತ್ತಿಲ್ಲ. ಅವರನ್ನು ಬಂಧಿಸಿ ವಿಚಾರಣೆ ಮಾಡಬೇಕು ಎಂದು ದೂರುದಾರರಾಗಿರುವ ಸ್ನೇಹಮಯಿ ಕೃಷ್ಣ ಆಗ್ರಹಿಸುತ್ತಿದ್ದರು. ಅಲ್ಲದೆ, ಈ ಕೇಸ್‌ನಲ್ಲಿ ಲೋಕಾಯುಕ್ತ ಪೊಲೀಸರು ಸರಿಯಾದ ತನಿಖೆ ನಡೆಸುತ್ತಿಲ್ಲ ಎಂದು ಹೆಜ್ಜೆ ಹೆಜ್ಜೆಗೂ ಆರೋಪ ಮಾಡುತ್ತಿದ್ದರು.

ಹಿಂದೂಗಳ ಜಮೀನು 'ವಕ್ಫ್ ಆಸ್ತಿ' ಅಂತಾರಲ್ಲ ಅದೇನು ಸೌದಿಯ ಮುಲ್ಲಾಗಳು ಕೊಟ್ಟ ಆಸ್ತಿನಾ?: ಪ್ರತಾಪ್ ಸಿಂಹ ವಾಗ್ದಾಳಿ

ಈಗಾಗಲೇ ಎ2 ಪಾರ್ವತಿ ಸಿದ್ದರಾಮಯ್ಯ, ಎ3 ಮಲ್ಲಿಕಾರ್ಜುನ ಹಾಗೂ ಎ4 ದೇವರಾಜು ಸೇರಿ ಹಲವರ ವಿಚಾರಣೆಯನ್ನು ಲೋಕಾಯುಕ್ತ ವಿಚಾರಣೆ ನಡೆಸಿದೆ.  ಇನ್ನು ಮುಡಾದ ಸೈಟ್​ ಬಗ್ಗೆಯೂ ಸಹ ಲೋಕಾಯುಕ್ತ ಮಹತ್ವದ ದಾಖಲೆಗಳನ್ನು ಕಲೆಹಾಕಿದೆ. ಅಲ್ಲದೇ ಸಿಎಂ ಕುಟುಂಬಕ್ಕೆ ಹಂಚಿಕೆಯಾಗಿದ್ದ ಸೈಟ್​ಗಳಿಗೂ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

 

Latest Videos
Follow Us:
Download App:
  • android
  • ios