Asianet Suvarna News Asianet Suvarna News

ಮುಷ್ಕರ ನಿರತ ಎನ್‌ಹೆಚ್‌ಎಂ ಸಿಬ್ಬಂದಿಗೆ ಶಾಕ್‌: ಕರ್ತವ್ಯಕ್ಕೆ ಹಾಜರಾಗುವಂತೆ ಡೆಡ್‌ಲೈನ್‌

ಎನ್‌ಹೆಚ್‌ಎಂ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆ ನಡೆಸುತ್ತಿದ್ದಾರೆ. ಮುಷ್ಕರದಿಂದ ರೋಗಿಗಳಿಗೆ ಭಾರೀ ತೊಂದರೆಯಾಗುತ್ತಿದೆ. 

Notice for NHM Employees to Attend Duty in Karnataka grg
Author
First Published Mar 17, 2023, 10:23 AM IST

ಬೆಂಗಳೂರು(ಮಾ.17):  ಮುಷ್ಕರ ನಿರತ ಎನ್‌ಹೆಚ್‌ಎಂ ಸಿಬ್ಬಂದಿಗೆ ಸರ್ಕಾರ ಶಾಕ್‌ ಕೊಟ್ಟಿದೆ. ಹೌದು, 48 ಗಂಟೆಗಳ‌ ಒಳಗೆ ಕೆಲಸಕ್ಕೆ ಹಾಜರಾಗುವಂತೆ ಆರೋಗ್ಯ ಇಲಾಖೆ ಡೆಡ್‌ಲೈನ್‌ ನೀಡಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರು ಎನ್‌ಹೆಚ್‌ಎಂ ಸಿಬ್ಬಂದಿಗೆ ಎಚ್ಚರಿಕೆಯ ನೋಟೀಸ್ ನೀಡಿದ್ದಾರೆ. 

48 ಗಂಟೆಗಳ ಒಳಗೆ ಕರ್ತವ್ಯಕ್ಕೆ ಹಾಜರಾಗದಿದ್ರೆ ಕಾನೂನು ಕ್ರಮ ಜರುಗಿಸಲಾಗುವುದು. ಕಳೆದ ಒಂದು ತಿಂಗಳಿನಿಂದ ವೇತನ ಹೆಚ್ಚಳಕ್ಕಾಗಿ, ಹುದ್ದೆ ಕಾಯಂಗೊಳಿಸುವಂತೆ ಎನ್‌ಹೆಚ್‌ಎಂ ಸಿಬ್ಬಂದಿಗೆ ಪ್ರತಿಭಟನೆ ನಡೆಸುತ್ತಿದ್ದಾರೆ. 

ಸೇವೆ ಕಾಯಂಗಾಗಿ 29ನೇ ದಿನಕ್ಕೆ ಕಾಲಿಟ್ಟ ಆರೋಗ್ಯ ನೌಕರರ ಧರಣಿ!

ಎನ್‌ಹೆಚ್‌ಎಂ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆ ನಡೆಸುತ್ತಿದ್ದಾರೆ. ಮುಷ್ಕರದಿಂದ ರೋಗಿಗಳಿಗೆ ಭಾರೀ ತೊಂದರೆಯಾಗುತ್ತಿದೆ. ಆರೋಗ್ಯ ಇಲಾಖೆ ತುರ್ತು ಸೇವೆ ನೀಡುವ ಇಲಾಖೆಯಾಗಿದೆ. ಈ ಹಿನ್ನಲೆ ಎನ್ ಎನ್‌ಹೆಚ್‌ಎಂ ಸಿಬ್ಬಂದಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರು ನೊಟೀಸ್ ಜಾರಿಮಾಡಿದ್ದಾರೆ. 

Follow Us:
Download App:
  • android
  • ios