ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ಪಾಂಡಿಚೇರಿ ಮಾರ್ಗದಲ್ಲಿ ಮಾ.1 ರಿಂದ ನಾನ್ ಎಸಿ ಸ್ಲೀಪರ್ ಬಸ್ ಕಾರ್ಯಾಚರಣೆಗೆ ನಿರ್ಧರಿಸಿದೆ. 

ಬೆಂಗಳೂರಿನಿಂದ ರಾತ್ರಿ 9 ಗಂಟೆಗೆ ಹೊರಟು ಮುಂಜಾನೆ 4 ಗಂಟೆಗೆ ಪಾಂಡಿಚೇರಿ ತಲುಪಲಿದೆ. 

ಅಲ್ಲಿಂದ ರಾತ್ರಿ 10.45 ಹೊರಟು ಮುಂಜಾನೆ 5.30ಕ್ಕೆ ಬೆಂಗಳೂರು ಸೇರಲಿದೆ. ಕೃಷ್ಣಗಿರಿ, ತಿರುವಣಾಮಲೈ ಮಾರ್ಗದ ಮೂಲಕ ಪಾಂಡಿಚೇರಿ ತಲುಪಲಿದೆ. ಪ್ರಯಾಣ ದರ ವಯಸ್ಕರಿಗೆ 600 ರು. ನಿಗದಿ ಪಡಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.