ಮಾಸಿಕ ವೇತನ 25,000ಗೆ ಏರಿಸಬೇಕು, ಸೇವಾ ಭದ್ರತೆ, ಪಿಎಫ್‌, ಇಎಸ್‌ಐ, ರಜಾ ಸೌಲಭ್ಯ, ಹೆರಿಗೆ ರಜಾ ಸೌಲಭ್ಯ, ಉನ್ನತ ಶಿಕ್ಷಣ ಪಡೆಯಲು ರಜೆ ಮತ್ತು ವೇತನ ಸೌಲಭ್ಯ, ಐಡಿ ಕಾರ್ಡ್‌, ಸೇವಾ ಪ್ರಮಾಣ ಪತ್ರ ಸೌಲಭ್ಯ ಒದಗಿಸಬೇಕು. ಈ ಬಗ್ಗೆ ನೂತನ ಸರ್ಕಾರದ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ಬೇಡಿಕೆ ಈಡೇರಿಸುವ ಆಶಾಭಾವನೆ ಇರುವುದಾಗಿ ಹೇಳಿದ ಪ್ರಶಾಂತ್‌ 

ಮಂಗಳೂರು(ಜು.19): ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್‌, ಎಂಜಿನಿಯರಿಂಗ್‌ ಕಾಲೇಜುಗಳ ಸುಮಾರು 1,250 ಮಂದಿ ಅರೆಕಾಲಿಕ ಉಪನ್ಯಾಸಕರು ಕಳೆದ ಮಾರ್ಚ್‌ನಿಂದ ವೇತನವಿಲ್ಲದೆ ಕಂಗೆಟ್ಟಿದ್ದಾರೆ. ಅಲ್ಲದೆ, ಸೇವಾ ಅಭದ್ರತೆಯನ್ನೂ ಎದುರಿಸುತ್ತಿದ್ದಾರೆ ಎಂದು ಅಖಿಲ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್‌ ಅರೆಕಾಲಿಕ ಉಪನ್ಯಾಸಕರ ಸಂಘದ ಅಧ್ಯಕ್ಷ ಪ್ರಶಾಂತ್‌ ಹೇಳಿದ್ದಾರೆ. 

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಉಪನ್ಯಾಸಕರಿಗೆ ವಾರಕ್ಕೆ 10 ಗಂಟೆ ಅಥವಾ ಕೆಲವೊಮ್ಮೆ 12ಗಂಟೆ ಪಾಠದಂತೆ ತಿಂಗಳಿಗೆ ಕನಿಷ್ಠ 36 ಗಂಟೆ ಪಾಠ ಮಾಡಿದರೆ ಸಿಗುವುದು ಕೇವಲ 12,500 ಮಾತ್ರ. ಅದೂ ಕಳೆದ ಮಾರ್ಚ್‌ನಿಂದ ಪಾವತಿಯಾಗಿಲ್ಲ ಎಂದು ಅಳಲು ತೋಡಿಕೊಂಡರು. ರಾಜ್ಯದ ಸುಮಾರು 1,250 ಅರೆಕಾಲಿಕ ಉಪನ್ಯಾಸಕರು ಕಾಯಂ ಹುದ್ದೆಯಲ್ಲಿ ಬೋಧನೆ ಮಾಡುವ ಉಪನ್ಯಾಸಕರ ಕಾರ್ಯಭಾರವನ್ನೂ ಹೊರುವ ಪರಿಸ್ಥಿತಿ ಇದೆ. 14 ವರ್ಷಗಳಲ್ಲಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರಿಗೆ ಮೂರು ಬಾರಿ ಸಂಬಳ ಮುಂಬಡ್ತಿ ದೊರಕಿದ್ದರೆ, ತಾಂತ್ರಿಕ ಶಿಕ್ಷಣ ಇಲಾಖೆ ಅತಿಥಿ ಉಪನ್ಯಾಸಕರಿಗೆ ಒಂದು ಬಾರಿ ಮಾತ್ರ ಮುಂಬಡ್ತಿ ನೀಡಲಾಗಿದೆ ಎಂದರು.

ಆರ್ಥಿಕ ಸ್ಥಿತಿ ನೋಡಿಕೊಂಡು ಸರ್ಕಾರಿ ನೌಕರರ ವೇತನ ಏರಿಕೆ: ಸಿಎಂ ಸಿದ್ದರಾಮಯ್ಯ

ಮಾಸಿಕ ವೇತನ 25,000ಗೆ ಏರಿಸಬೇಕು, ಸೇವಾ ಭದ್ರತೆ, ಪಿಎಫ್‌, ಇಎಸ್‌ಐ, ರಜಾ ಸೌಲಭ್ಯ, ಹೆರಿಗೆ ರಜಾ ಸೌಲಭ್ಯ, ಉನ್ನತ ಶಿಕ್ಷಣ ಪಡೆಯಲು ರಜೆ ಮತ್ತು ವೇತನ ಸೌಲಭ್ಯ, ಐಡಿ ಕಾರ್ಡ್‌, ಸೇವಾ ಪ್ರಮಾಣ ಪತ್ರ ಸೌಲಭ್ಯ ಒದಗಿಸಬೇಕು. ಈ ಬಗ್ಗೆ ನೂತನ ಸರ್ಕಾರದ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ಬೇಡಿಕೆ ಈಡೇರಿಸುವ ಆಶಾಭಾವನೆ ಇರುವುದಾಗಿ ಹೇಳಿದರು.