Asianet Suvarna News Asianet Suvarna News

ಬಜರಂಗದಳ ನಿಷೇಧ ಪ್ರಸ್ತಾವ ಸದ್ಯಕ್ಕಿಲ್ಲ: ಗೃಹ ಸಚಿವ ಪರಮೇಶ್ವರ್‌

ಜನರ ನಿರೀಕ್ಷೆಯಂತೆ ಆಡಳಿತ ನೀಡಬೇಕು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಗೃಹ ಇಲಾಖೆ ಎಂಬುದು ಉತ್ತಮ ಇಲಾಖೆ. ಲಾಠಿ ಏಟು, ಗುಂಡು ಹಾರಿಸುವುದು, ಜನರ ಕಷ್ಟಕ್ಕೆ ಸ್ಪಂದಿಸುವುದು ಎಲ್ಲವೂ ಇಲಾಖೆಯಲ್ಲಿ ಇದೆ. ಕರ್ನಾಟಕವನ್ನು ಕುವೆಂಪು ಅವರ ಮಾತಿನಂತೆ ಸರ್ವ ಜನಾಂಗದ ಶಾಂತಿಯ ತೋಟ ಮಾಡುತ್ತೇವೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್‌ 

no proposal to ban Bajrang Dal In Karnataka Says Home Minister Dr G Parameshwar grg
Author
First Published Jun 2, 2023, 5:34 AM IST

ಬೆಂಗಳೂರು(ಜೂ.02):  ‘ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ನಮ್ಮ ಮೊದಲ ಆದ್ಯತೆ. ನೈತಿಕ ಪೊಲೀಸ್‌ಗಿರಿ, ಕೋಮುವಾದಿ ಚಟುವಟಿಕೆಗೆ ಅವಕಾಶವಿಲ್ಲ. ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡುತ್ತೇವೆ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. ವಿಧಾನಸೌಧದಲ್ಲಿ ಗುರುವಾರ ಕಚೇರಿ ಕೊಠಡಿ ಪೂಜೆ ನಡೆಸಿ ಮಾತನಾಡಿದ ಅವರು, ಶಾಂತಿ ಕದಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಶಾಂತಿ ಕದಡುವ ಸಂಘಟನೆ ನಿಷೇಧ ಮಾಡುತ್ತೇವೆ ಎಂದು ಹೇಳಿದ್ದೇವೆಯೇ ಹೊರತು ಬಜರಂಗದಳ ನಿಷೇಧಿಸುವ ಬಗ್ಗೆ ಪ್ರಸ್ತಾವ ಬಂದಿಲ್ಲ. ಹೀಗಾಗಿ ಅನಗತ್ಯ ಗೊಂದಲ ಸೃಷ್ಟಿಬೇಡ ಎಂದು ಹೇಳಿದರು.

ಜನರ ನಿರೀಕ್ಷೆಯಂತೆ ಆಡಳಿತ ನೀಡಬೇಕು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಗೃಹ ಇಲಾಖೆ ಎಂಬುದು ಉತ್ತಮ ಇಲಾಖೆ. ಲಾಠಿ ಏಟು, ಗುಂಡು ಹಾರಿಸುವುದು, ಜನರ ಕಷ್ಟಕ್ಕೆ ಸ್ಪಂದಿಸುವುದು ಎಲ್ಲವೂ ಇಲಾಖೆಯಲ್ಲಿ ಇದೆ. ಕರ್ನಾಟಕವನ್ನು ಕುವೆಂಪು ಅವರ ಮಾತಿನಂತೆ ಸರ್ವ ಜನಾಂಗದ ಶಾಂತಿಯ ತೋಟ ಮಾಡುತ್ತೇವೆ. ಯಾವುದೇ ನೈತಿಕ ಪೊಲೀಸ್‌ಗಿರಿ, ಕೋಮುವಾದಿ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.

ಯಾವುದೇ ಅನುಮಾನ ಬೇಡ, ಗ್ಯಾರಂಟಿ ಅನುಷ್ಠಾನ ಖಚಿತ: ಡಾ.ಜಿ.ಪರಮೇಶ್ವರ್‌

ಪಿಎಸ್‌ಐ ನೇಮಕಾತಿ ಹಗರಣದ ಬಗ್ಗೆ ಮಾತನಾಡಿದ ಅವರು, ಈಗ ಪ್ರಕರಣ ಹೈಕೋರ್ಚ್‌ನಲ್ಲಿದೆ. ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಕೆ ಇಲ್ಲ. ಪ್ರತಿಯೊಂದನ್ನೂ ಚರ್ಚೆ ಮಾಡಿ ಪ್ರಣಾಳಿಕೆ ಮಾಡಿದ್ದೇವೆ. ಹೀಗಾಗಿ ಅಕ್ರಮಗಳ ಬಗ್ಗೆ ತನಿಖೆ ಹಾಗೂ ಕ್ರಮಕ್ಕೆ ಹಿಂಜರಿಯುವುದಿಲ್ಲ ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಮಾತನಾಡಿದ ಅವರು, ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ಮಾಡಿ ಇಲಾಖೆಗಳಿಂದ ಮಾರ್ಗಸೂಚಿ ಸಿದ್ಧಪಡಿಸಲಾಗುವುದು. ಹೀಗಾಗಿ ಶುಕ್ರವಾರದವರೆಗೆ ಕಾಯಬೇಕು ಎಂದು ಹೇಳಿದರು.

ಸರ್ವಜನಾಂಗದ ಶಾಂತಿಯ ತೋಟ ಮಾಡುತ್ತೇವೆ...

ಜನರ ನಿರೀಕ್ಷೆಯಂತೆ ಆಡಳಿತ ನೀಡಬೇಕು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಕರ್ನಾಟಕವನ್ನು ಕುವೆಂಪು ಅವರ ಮಾತಿನಂತೆ ಸರ್ವ ಜನಾಂಗದ ಶಾಂತಿಯ ತೋಟ ಮಾಡುತ್ತೇವೆ. ಯಾವುದೇ ನೈತಿಕ ಪೊಲೀಸ್‌ಗಿರಿ, ಕೋಮುವಾದಿ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ ಅಂತ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ. 

Follow Us:
Download App:
  • android
  • ios