Asianet Suvarna News Asianet Suvarna News

Private Schools: ಇಂಥಲ್ಲೇ ಶೂ, ಸಮವಸ್ತ್ರಕ್ಕೆ ಖರೀದಿಗೆ ಒತ್ತಾಯ ಇಲ್ಲ

ಪೋಷಕರು ಕೋವಿಡ್‌ ಆರ್ಥಿಕ ಸಂಕಷ್ಟಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ತಮ್ಮ ಮಕ್ಕಳಿಗೆ ಆಡಳಿತ ಮಂಡಳಿ ಸೂಚಿಸಿದ ನಿರ್ದಿಷ್ಟ ಬ್ರಾಂಡ್‌ ಉತ್ಪನ್ನಗಳನ್ನೇ ಖರೀದಿಸಬೇಕೆಂದು ಒತ್ತಾಯಿಸದಿರಲು ಹಾಗೂ ‘ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆ’ ಪ್ರೋತ್ಸಾಹಿಸಲು ಖಾಸಗಿ ಶಾಲೆಗಳು ತೀರ್ಮಾನಿಸಿವೆ.

No Insist to buy Shoes and Uniforms says Private Schools gvd
Author
Bangalore, First Published Mar 7, 2022, 6:55 AM IST | Last Updated Mar 7, 2022, 6:55 AM IST

ಬೆಂಗಳೂರು (ಮಾ.7): ಪೋಷಕರು ಕೋವಿಡ್‌ (Covid19) ಆರ್ಥಿಕ ಸಂಕಷ್ಟಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ತಮ್ಮ ಮಕ್ಕಳಿಗೆ ಆಡಳಿತ ಮಂಡಳಿ ಸೂಚಿಸಿದ ನಿರ್ದಿಷ್ಟ ಬ್ರಾಂಡ್‌ ಉತ್ಪನ್ನಗಳನ್ನೇ ಖರೀದಿಸಬೇಕೆಂದು ಒತ್ತಾಯಿಸದಿರಲು ಹಾಗೂ ‘ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆ’ ಪ್ರೋತ್ಸಾಹಿಸಲು ಖಾಸಗಿ ಶಾಲೆಗಳು (Private Schools) ತೀರ್ಮಾನಿಸಿವೆ. 

ರಾಜ್ಯದಲ್ಲಿರುವ ಬಹುತೇಕ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ (Students) ಶಾಲಾ ಬ್ಯಾಗ್‌ (School Bags), ಸಮವಸ್ತ್ರ (Uniforms), ಶೂ (Shoes), ನೋಟ್‌ ಬುಕ್‌ (Notebook) ಇತರೆ ಪಠ್ಯ ಚಟುವಟಿಕೆಯ ವಸ್ತುಗಳನ್ನು ಪೋಷಕರು ಸಂಬಂಧಿಸಿದ ಶಾಲೆಯು ಸೂಚಿಸಿದ ಮಳಿಗೆಗಳಲ್ಲೇ, ನಿರ್ದಿಷ್ಟ ಉತ್ಪನ್ನಗಳನ್ನೇ ಖರೀದಿಸಬೇಕಾಗಿತ್ತು. ಅಲ್ಲದೆ, ಶಾಲೆಗಳು ಹೆಚ್ಚಾಗಿ ದುಬಾರಿ ಬೆಲೆಯ, ಕೆಲ ಶಾಲೆಗಳಂತೂ ವಿದೇಶಿ ಕಂಪನಿಯ ಉತ್ಪನ್ನಗಳನ್ನೇ ಸೂಚಿಸುತ್ತಿದ್ದವು. ಇದರಿಂದ ಪೋಷಕರು ದೊಡ್ಡ ಆರ್ಥಿಕ ಹೊರೆ ಅನುಭವಿಸುತ್ತಿದ್ದರು. ಈ ವಿಚಾರ ಆಗಾಗ ಪೋಷಕರು ಮತ್ತು ಆಡಳಿತ ಮಂಡಳಿಗಳ ನಡುವೆ ಸಂಘರ್ಷಕ್ಕೂ ದಾರಿಯಾಗಿದ್ದು ಇತಿಹಾಸ. 

ಆದರೆ, ಈ ಬಾರಿ ಆ ರೀತಿ ಯಾವುದೇ ಒತ್ತಡ ಹೇರದಿರಲು ತೀರ್ಮಾನಿಸಲಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವ ಪೋಷಕರಿಗೆ ‘ಮೆಕ್‌ ಇನ್‌ ಇಂಡಿಯಾ’ ಪರಿಕಲ್ಪನೆಯಲ್ಲಿ ಕಡಿಮೆ ದರ್ಜೆಯ ಸ್ವದೇಶಿ ಉತ್ಪನ್ನಗಳನ್ನೇ ಖರೀದಿಸಲು ಪ್ರೋತ್ಸಾಹಿಸಲಾಗುವುದು. ಈ ಸಂಬಂಧ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ (ಕ್ಯಾಮ್ಸ್‌) ನಮ್ಮ ಪದಾಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ (D Shashikumar) ಹೇಳಿದ್ದಾರೆ. ರಾಜ್ಯದಲ್ಲಿ 19,645 ಖಾಸಗಿ ಶಾಲೆಗಳಿದ್ದು, ಇಲ್ಲಿ 45.71 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

RTE Karnataka Admission 2022-23: RTE ಕಾಯ್ದೆಯಡಿ 2022-23ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭ

2022-23ನೇ ಶೈಕ್ಷಣಿಕ ಸಾಲಿನ ತರಗತಿಗಳು ಮೇ 14ರಿಂದ ಪ್ರಾರಂಭವಾಗಲಿದೆ. ಮುಂದಿನ ವರ್ಷ ಶಾಲೆ ಆರಂಭಕ್ಕೆ ಈಗಾಗಲೇ ಸಿದ್ಧತೆ ನಡೆಸುತ್ತಿರುವ ಶಾಲೆಗಳು ವಿದ್ಯಾರ್ಥಿಗಳಿಗೆ ನಿರ್ದಿಷ್ಟಮಳಿಗೆಗಳಲ್ಲಿ ಉತ್ಪನ್ನ ಪಡೆಯಬೇಕೆಂಬ ಅಲಿಖಿತ ನಿಯಮಕ್ಕೆ ಬ್ರೇಕ್‌ ಹಾಕಲು ನಿರ್ಧರಿಸಿವೆ. ಇದರಿಂದ ಕ್ಯಾಮ್ಸ್‌ ವ್ಯಾಪ್ತಿಯ ಶಾಲೆಗಳು ತಮ್ಮ ಮಕ್ಕಳಿಗೆ ಸಂಬಂಧಿಸಿದ ಶೈಕ್ಷಣಿಕ ಉತ್ಪನ್ನಗಳನ್ನು ಇಂತಹ ಕಡೆಯೇ ಖರೀದಿಸಬೇಕೆಂದು ಸೂಚಿಸುವಂತಿಲ್ಲ ಎಂದು ಅವರು ಹೇಳಿದ್ದಾರೆ.

ಮಕ್ಕಳ ಪೋಷಕರಿಗೂ ಡ್ರೆಸ್‌ ಕೋಡ್: 'ಒಂದು ಕಡೆ ವಿದ್ಯಾರ್ಥಿಗಳ (Students) ಸಮವಸ್ತ್ರ ವಿಚಾರ ನ್ಯಾಯಾಲಯದ ಕಟಕಟೆಯಲ್ಲಿ ಇರುವಾಗಲೇ ಮತ್ತೊಂದು  ವಿಚಾರ ದೊಡ್ಡ ಚರ್ಚೆಗೆ ವೇದಿಕೆ ಮಾಡಿದೆ.   ಶಾಲೆಯಲ್ಲಿ ಹಿಜಾಬ್‌ ಧರಿಸಬಹುದೇ, ಧರಿಸಬಾರದೇ ಎಂಬ ಬಗ್ಗೆ ವಾದ ವಿವಾದ ನಡೆಯುತ್ತಿದೆ. ಈ ನಡುವೆ ರಾಜ್ಯದ ಕೆಲವು ಖಾಸಗಿ ಅನುದಾನರಹಿತ ಶಾಲೆಗಳು ಪೋಷಕರಿಗೆ ಡ್ರೆಸ್ ಕೋಡ್ ಸಿದ್ಧ ಮಾಡಿವೆ. 

ಹಲವಾರು ಪಾಲಕರು ತಮ್ಮ ಮಕ್ಕಳನ್ನು ಶಾಲೆಯಲ್ಲಿ ಬಿಡುವಾಗ ಅಥವಾ ಶಾಲೆಯಿಂದ ಕರೆದುಕೊಂಡು ಹೋಗುವಾಗ ಅನೌಪಚಾರಿಕ ಉಡುಪುಗಳಲ್ಲಿ ಬರುವುದನ್ನು ಗಮನಿಸಿರುವ ಖಾಸಗಿ ಶಾಲೆಗಳು ಈ ತೀರ್ಮಾನಕ್ಕೆ ಬಂದಿದೆ. ಕೆಲವು ಖಾಸಗಿ ಅನುದಾನರಹಿತ ಶಾಲೆಗಳು  ಪೋಷಕರಲ್ಲಿಯೇ ಶಿಸ್ತು ತರಲು ಹೊರಟಿವೆ. ಖಾಸಗಿ ಶಾಲೆಗಳು ಈ ರೀತಿಯ ಸುತ್ತೋಲೆ ಹೊರಡಿಸಿವೆ ಎನ್ನುವುದು ಗೊತ್ತಾಗಿದೆ. ಮಕ್ಕಳನ್ನು ಶಾಲೆಯಲ್ಲಿ ಬಿಡುವಾಗ ಅಥವಾ ಶಾಲೆಯಿಂದ ಕರೆದುಕೊಂಡು ಹೋಗುವಾಗ ಪೋಷಕರು ಅಥವಾ ಪಾಲಕರು ಬರ್ಮುಡಾ, ಶಾರ್ಟ್ಸ್, ಸ್ಪೋರ್ಟ್ಸ್ ವೇರ್‌, ಹೌಸ್ ವೇರ್, ಸ್ಲೀವ್‌ಲೆಸ್ ಮತ್ತು ಟ್ರ್ಯಾಕ್ ಪ್ಯಾಂಟ್ ಇತ್ಯಾದಿಗಳನ್ನು ಧರಿಸುವುದನ್ನು ನಿರ್ಬಂಧಿಸಿ ಸುತ್ತೋಲೆ ಹೊರಡಿಸಲಾಗಿದೆ. 

Private School: ಬೊಮ್ಮಾಯಿ-ಹೊರಟ್ಟಿ ಮಹತ್ವದ ಸಭೆ, ಖಾಸಗಿ ಶಾಲೆ, ಶಿಕ್ಷಕರಿಗೆ ಗುಡ್‌ ನ್ಯೂಸ್

ಶಾಲೆಗಳು ಕಳುಹಿಸಿರುವ ಸುತ್ತೋಲೆಯಲ್ಲಿ ಲಭ್ಯವಿರುವ ವಿವರಗಳ ಪ್ರಕಾರ, ಮಕ್ಕಳನ್ನು ಶಾಲೆಯಲ್ಲಿ ಬಿಡುವಾಗ ಅಥವಾ ಶಾಲೆಯಿಂದ ಕರೆದುಕೊಂಡು ಹೋಗುವಾಗ ಪೋಷಕರು ಅಥವಾ ಪಾಲಕರು ಬರ್ಮುಡಾ, ಶಾರ್ಟ್ಸ್, ಸ್ಪೋರ್ಟ್ಸ್ ವೇರ್‌, ಹೌಸ್ ವೇರ್, ಸ್ಲೀವ್‌ಲೆಸ್ ಮತ್ತು ಟ್ರ್ಯಾಕ್ ಪ್ಯಾಂಟ್ ಇತ್ಯಾದಿಗಳನ್ನು ಧರಿಸುವುದನ್ನು ನಿರ್ಬಂಧಿಸಲಾಗಿದೆ. ಈ ಬಗ್ಗೆ ಕೆಲವು ಶಾಲೆಗಳು ಸುತ್ತೋಲೆಯನ್ನು ಹೊರಡಿಸಿದೆ.

Latest Videos
Follow Us:
Download App:
  • android
  • ios