Asianet Suvarna News Asianet Suvarna News

ನಾಗ​ರ​ಪಂಚ​ಮಿಗೂ ಕೊರೋನಾ ಭೀತಿ, ಕುಕ್ಕೆ​ಯಲ್ಲಿ ಪ್ರವೇ​ಶವಿಲ್ಲ!

ಕೊರೋನಾ ಹಾವಳಿ ಈ ಬಾರಿಯ ನಾಗರ ಪಂಚಮಿ ಹಬ್ಬಕ್ಕೂ ತಟ್ಟಿದೆ. ರಾಜ್ಯದ ಬಹು​ತೇಕ ಕಡೆ ಶ್ರಾವಣ ಮಾಸದ ಈ ಮೊದಲ ಹಬ್ಬದ ದಿನ​ವಾದ ಶನಿ​ವಾರ ಸಾರ್ವ​ಜ​ನಿ​ಕ​ವಾಗಿ ನಾಗಾ​ರಾ​ಧ​ನೆ ನಿಷೇ​ಧಿ​ಸ​ಲಾ​ಗಿ​ದೆ.

No grand celebration of nagarapanchami in Kukke subramanya
Author
Bangalore, First Published Jul 25, 2020, 10:39 AM IST

ಬೆಂಗ​ಳೂ​ರು(ಜು.25): ಕೊರೋನಾ ಹಾವಳಿ ಈ ಬಾರಿಯ ನಾಗರ ಪಂಚಮಿ ಹಬ್ಬಕ್ಕೂ ತಟ್ಟಿದೆ. ರಾಜ್ಯದ ಬಹು​ತೇಕ ಕಡೆ ಶ್ರಾವಣ ಮಾಸದ ಈ ಮೊದಲ ಹಬ್ಬದ ದಿನ​ವಾದ ಶನಿ​ವಾರ ಸಾರ್ವ​ಜ​ನಿ​ಕ​ವಾಗಿ ನಾಗಾ​ರಾ​ಧ​ನೆ ನಿಷೇ​ಧಿ​ಸ​ಲಾ​ಗಿ​ದೆ.

ನಾಗಾ​ರಾ​ಧ​ನೆಯ ಪವಿತ್ರ ಕ್ಷೇತ್ರ​ವಾದ ಕುಕ್ಕೆ​ಸು​ಬ್ರ​ಹ್ಮ​ಣ್ಯ​ದಲ್ಲಿ ಭಕ್ತರ ಪ್ರವೇಶ ನಿರ್ಬಂಧಿ​ಸ​ಲಾ​ಗಿದೆ. ಕುಕ್ಕೆ ಸೇರಿ​ದಂತೆ ಬಹು​ತೇಕ ದೇವ​ಸ್ಥಾ​ನ​ಗ​ಳಲ್ಲಿ ಕೇವಲ ಅರ್ಚ​ಕರು, ಸಿಬ್ಬಂದಿ ಉಪ​ಸ್ಥಿ​ತಿ​ಯಲ್ಲಷ್ಟೇ ನಾಗ​ದೇ​ವ​ರಿಗೆ ವಿಶೇಷ ಪೂಜೆ ನೆರ​ವೇ​ರ​ಲಿ​ದೆ.

ರಮೇಶ ಜಾರಕಿಹೊಳಿ ನಿವಾಸದಲ್ಲಿ ಮಹತ್ವದ ಸಭೆ: ವಿಶ್ವನಾಥ್‌, ಯೋಗೇಶ್ವರ್‌ ಸಚಿವ ಸ್ಥಾನದ ಬಗ್ಗೆ ಚರ್ಚೆ

ದ.ಕ. ಜಿಲ್ಲೆಯಲ್ಲಿ ಸಾರ್ವಜನಿಕವಾಗಿ ಹಬ್ಬ ಆಚರಣೆಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ನಾಗರ ಪಂಚಮಿಯ ಭಕ್ತಿ- ಸಂಭ್ರಮಕ್ಕೆ ಪ್ರತಿವರ್ಷ ಸಾಕ್ಷಿಯಾಗುತ್ತಿದ್ದ ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ, ಕುಡುಪು ಅನಂತ ಪದ್ಮನಾಭ ದೇವಾಲಯ ಸೇರಿ ಪ್ರಮುಖ ದೇವಾಲಯಗಳಲ್ಲಿ ಸಾರ್ವಜನಿಕರಿಗೆ ದೇವರ ದರ್ಶ​ನಕ್ಕೆ ನಿರ್ಬಂಧ ವಿಧಿ​ಸ​ಲಾ​ಗಿ​ದೆ. ಆದರೆ ಸಿಬ್ಬಂದಿ ಉಪ​ಸ್ಥಿ​ತಿ​ಯ​ಲ್ಲಿ ನಾಗ ದೇವರಿಗೆ ಯಥಾಪ್ರಕಾರ ಪೂಜೆ-ಪುನ​ಸ್ಕಾ​ರ ನೆರವೇರಲಿದೆ.

ಬೆಂಗ​ಳೂರು ಸಮೀ​ಪದ ಪ್ರಮುಖ ನಾಗಾ​ರಾ​ಧ​ನೆಯ ಕೇಂದ್ರ ಘಾಟಿ​ಸು​ಬ್ರ​ಹ್ಮಣ್ಯ ದೇಗು​ಲ​ದ​ಲ್ಲಿ ಸಾರ್ವ​ಜ​ನಿ​ಕ​ರಿಗೆ ದೇವರ ದರ್ಶ​ನ​ಕ್ಕಷ್ಟೇ ಅವ​ಕಾ​ಶ​ವಿದ್ದು, ವಿಶೇಷ ಪೂಜೆಗೆ ನಿರ್ಬಂಧ​ವಿ​ಧಿ​ಸ​ಲಾ​ಗಿ​ದೆ. ಇನ್ನು ಉತ್ತರ ಕನ್ನಡದ ಪವಿತ್ರ ತಾಣ ಮುಗ್ವಾ ಸುಬ್ರಹ್ಮಣ್ಯ ದೇವಾಲಯದಲ್ಲೂ ದೇವರ ದರ್ಶನ ನಿರ್ಬಂಧಿ​ಸ​ಲಾ​ಗಿ​ದೆ.

ಮಂಗಳೂರು-ಮುಂಬೈ ವಿಮಾನಯಾನ ಆರಂಭ, ಕೆಲವು ಪ್ರಯಾಣಿಕರಿಗೆ ಕ್ವಾರೆಂಟೈನ್ ಇಲ್ಲ

ಉ.ಕ​ದಲ್ಲಿ ಇದೇ ಹಬ್ಬ: ಧಾರವಾಡ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಕೊಪ್ಪಳ ಜಿಲ್ಲೆಯ ಹಲವೆಡೆ ಶುಕ್ರವಾರವೇ ಶ್ರದ್ಧಾ-ಭಕ್ತಿಯಿಂದ ನಾಗರ ಪಂಚಮಿ ಆಚರಿಸಲಾಗಿದೆ. ಕೊರೋನಾ ಭಯದ ಮಧ್ಯೆಯೂ ಕೆಲವರು ನಾಗರಕಲ್ಲಿಗೆ ಹಾಲಿ​ನ ಅಭಿಷೇಕ ಮಾಡಿ ಪೂಜಿಸಿದ್ದಾರೆ. ಆದರೆ ಬಹುತೇಕರು ತಮ್ಮ ಮನೆಯಲ್ಲೇ ಹಬ್ಬದ ಆಚರಣೆ ಮಾಡಿದ್ದಾರೆ. ಬಹು​ತೇಕ ಕಡೆ ಶುಕ್ರವಾರ ರೊಟ್ಟಿಹಬ್ಬ (ನಾಗರಚೌತಿ) ಆಚರಿಸಿದ್ದು, ಶನಿವಾರ ನಾಗರ ಪಂಚಮಿ ಪೂಜಾ ಕೈಂಕರ್ಯ ಕೈಗೊಳ್ಳಲಿದ್ದಾರೆ.

Follow Us:
Download App:
  • android
  • ios