ವಿಧಾನಸೌಧ, ವಿಕಾಸಸೌಧಕ್ಕೂ ತಟ್ಟಿದ ಕೊರೋನಾ ಎಫೆಕ್ಟ್
ಕರ್ನಾಟಕದಲ್ಲಿ ಕೊರೋನಾ ಎರಡನೇ ಅಲೆ ಜೋರಾಗಿದ್ದು, ಇದೀಗ ವಿಧಾನಸೌಧ, ವಿಕಾಸಸೌಧ ಮೇಲೂ ಕೊರೋನಾ ಕರಿನೆರಳು ಬಿದ್ದಿದೆ.
ಬೆಂಗಳೂರು, (ಏ.17): ರಾಜ್ಯದಲ್ಲಿ ಕೊರೋನಾ ಹೆಚ್ಚಳವಾಗುತ್ತಿರುವ ಹಿನ್ನೆಲೆ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ವಿಧಾನಸೌಧ ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲೂ ಸೋಂಕು ಪತ್ತೆಯಾಗುತ್ತಿವೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ, ಪೂರ್ವಾನುಮತಿಯಿಲ್ಲದೇ ಯಾರೂ ಕೂಡ ಪ್ರವೇಶವಿಸುವಂತಿಲ್ಲ ಎಂದು ಸೂಚಿಸಲಾಗಿದೆ.
ಕರ್ನಾಟಕದಲ್ಲಿ ಕೊರೋನಾ ಆರ್ಭಟ: ಏ.17ರಂದು ಸೋಂಕು, ಸಾವಿನ ಸಂಖ್ಯೆಯಲ್ಲಿ ಭಾರೀ ಏರಿಕೆ!
ಮೊದಲಿದ್ದ 3:30ರ ಸಾರ್ವಜನಿಕರ ಪ್ರವೇಶಕ್ಕೂ ಕೆಲ ನಿಯಮಗಳು ಜಾರಿ ಮಾಡಲಾಗಿದೆ. ಸಚಿವರ ಆಪ್ತ ಕಾರ್ಯದರ್ಶಿಗಳಿಂದ ಪ್ರವೇಶ ಪತ್ರದ ಅನುಮತಿಯಿದ್ದರೆ ಮಾತ್ರ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗುತ್ತೆ. ರೆಫರೆನ್ಸ್ ಇಲ್ಲದೇ ಯಾರೂ ವಿಧಾನಸೌಧಕ್ಕೆ ಭೇಟಿ ನೀಡುವಂತಿಲ್ಲ ಎಂದು ಸೂಚನೆ ಹೊರಡಿಸಲಾಗಿದೆ.
ಕಳೆದ ವರ್ಷದ ಇದ್ದ ಕೊರೋನಾ ಮೊದಲ ಅಲೆ ವಿಧಾನಸೌಧ ಹಾಗೂ ವಿಕಾಸಸೌಧಕ್ಕೂ ವಕ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಎರಡನೇ ಅಲೆ ಮುಂಜಾಗ್ರತಾ ಕ್ರಮವಾಗಿ ವಿಧಾನಸೌಧ ಹಾಗೂ ವಿಕಾಸಸೌಧ ಪ್ರವೇಶಕ್ಕೆ ನಿರ್ಬಧಿಸಲಾಗಿದೆ.