* ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಚರ್ಚೆಯಾಗಲಿಲ್ಲ ಮೇಕೆದಾಟು ವಿಚಾರ* ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ 14ನೇ ಸಭೆ* ಯೋಜನೆಗೆ ಮೂರು ರಾಜ್ಯಗಳ ವಿರೋಧ  ಹಿನ್ನಲೆ ಚರ್ಚೆ ಮುಂದೂಡಿಕೆ

ನವದೆಹಲಿ, (ಸೆ.27): ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (Cauvery Water Management Authority) 14ನೇ ಸಭೆ ಇಂದು (ಸೆ.27) ನಡೆಯಿತು. ಸಭೆಯ ಅಜೆಂಡಾದಲ್ಲಿ ಮೇಕೆದಾಟು ಜಲಾಶಯದ ವಿಚಾರವಿತ್ತಾದರೂ ಚರ್ಚೆ ನಡೆಯಲಿಲ್ಲ.

Add Asianetnews Kannada as a Preferred SourcegooglePreferred

ಸಭೆಯಲ್ಲಿ ಕರ್ನಾಟಕ ದ ಅಧಿಕಾರಿಗಳು ವರ್ಚುವಲ್ ಮೂಲಕ ಭಾಗವಹಿಸಿದ್ರು. ಆದ್ರೆ, ಸಭೆಯಲ್ಲಿ ಮೇಕೆದಾಟು ಯೋಜನೆಗೆ ೯Mekedatu Project ) ಮೂರು ರಾಜ್ಯಗಳ ವಿರೋಧ ಹಿನ್ನಲೆ ಚರ್ಚೆ ಮುಂದೂಡಲಾಗಿದೆ.

ಮೇಕೆದಾಟು ಯೋಜನೆಗೆ ಮತ್ತೊಂದು ವಿಘ್ನ

ಸಭೆಯ ನಂತರ ಮಾಧ್ಯಮಳಿಗೆ ಪ್ರತಿಕ್ರಿಯಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ.ಹಲ್ದರ್, ಮೇಕೆದಾಟು ಡ್ಯಾಂ ವಿಚಾರವಾಗಿ ಚರ್ಚೆ ನಡೆಸಿಲ್ಲ. ನಾಲ್ಕು ರಾಜ್ಯಗಳ ಅಭಿಪ್ರಾಯ ಮತ್ತು ಆದ್ಯತೆ ಆಧರಿಸಿ ಚರ್ಚೆ ಮಾಡಬೇಕು. ಇದಕ್ಕೆ ಮೂರು ರಾಜ್ಯಗಳು ವಿರೋಧಿಸುತ್ತಿವೆ. ಅವರ ವಿರೋಧದ ನಡುವೆ ಚರ್ಚೆ ಮಾಡಲು ಸಾಧ್ಯವಿಲ್ಲ. ರಾಜ್ಯಗಳು ಒಪ್ಪಿದರೆ ಮಾತ್ರ ಸಭೆಯಲ್ಲಿ ಈ ವಿಚಾರ ಚರ್ಚಿಸಲು ಸಾಧ್ಯ ಎಂದರು.

ಅಂತರರಾಜ್ಯ ಜಲಾನಯನ ಪ್ರದೇಶಗಳ ವ್ಯಾಪ್ತಿಯಲ್ಲಿ ಯೋಜನೆ ರೂಪಿಸುತ್ತಿರುವ ಹಿನ್ನೆಲೆಯಲ್ಲಿ ವಿಸ್ತೃತ ಚರ್ಚೆ ಅನಿವಾರ್ಯ. ನಾವು ನೀರು ಹಂಚಿಕೆಯ ಬಗ್ಗೆ ಮಾತ್ರ ಚರ್ಚೆ ಮಾಡುತ್ತೇವೆ. ಬಾಕಿ ವಿಚಾರಗಳ ಬಗ್ಗೆ ಸುಪ್ರೀಂಕೋರ್ಟ್ ನಿರ್ಧರಿಸಲಿದೆ. ಇಂದಿನ ಸಭೆಯಲ್ಲಿ ನೀರು ಬಿಡುಗಡೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಕರ್ನಾಟಕದಿಂದ ನೀರು ಬಿಡುಗಡೆ ಕುರಿತು ತಮಿಳುನಾಡು, ಪುದುಚೇರಿ ಮನವಿ ಸಲ್ಲಿಸಿವೆ ಎಂದು ಹೇಳಿದರು.

ಜೂನ್ ಮತ್ತು ಸೆಪ್ಟೆಂಬರ್‌ವರೆಗಿನ ಬಾಕಿ ನೀರು ಬಿಡುಗಡೆಗೆ ಈ ರಾಜ್ಯಗಳಿಂದ ಮನವಿ ಬಂದಿದೆ. ಅಕ್ಟೋಬರ್ 7ಕ್ಕೆ ಸಭೆ ನಡೆಸಿ ನೀರು ಬಿಡುಗಡೆ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.