ಸಿಂಧನೂರು: ರೆಸಾರ್ಟ್‌ ರಾಜಕಾರಣ ಮಾಡಿದ್ದು ನಾವಲ್ಲ, ಕಾಂಗ್ರೆಸ್‌ನವರು. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ನಾವು ದೆಹಲಿಯಲ್ಲಿ ಸೇರಿದ್ದೆವು. 

ಆದರೆ, ಕಾಂಗ್ರೆಸ್‌ನವರು ದೆಹಲಿ, ಮುಂಬೈ, ಬೆಂಗಳೂರಿನಲ್ಲಿ ಸಭೆ ಸೇರಿ ಅಧಿಕಾರ ಪಕ್ಷಗಳಲ್ಲಿರುವ ಶಾಸಕರು ಗುದ್ದಾಡಿಕೊಂಡಿದ್ದಾರೆ. ಅವರನ್ನು ನಾವೇನು ನಮ್ಮ ಪಕ್ಷಕ್ಕೆ ಕರೆದಿದ್ದೆವಾ ಎಂದು ಶಾಸಕ ಬಿ.ಶ್ರೀರಾಮುಲು ಪ್ರಶ್ನಿಸಿದರು.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರೆಸಾರ್ಟ್‌ನಲ್ಲಿ ಶಾಸಕ ಆನಂದ್‌ ಸಿಂಗ್‌ ಮೇಲೆ ಹಲ್ಲೆ ನಡೆಸಿದ್ದ ಆರೋಪಕ್ಕೆ ಗುರಿಯಾಗಿರುವ ಶಾಸಕ ಗಣೇಶ್‌ ಬಾಂಬೆಯಲ್ಲಿದ್ದಾರೋ, ಎಲ್ಲಿದ್ದಾರೋ ಗೊತ್ತಿಲ್ಲ. 

ಆದರೆ, ಅವರು ಬಿಜೆಪಿಯವರ ರಕ್ಷಣೆಯಲ್ಲಿದ್ದಾರೆ ಎನ್ನುವುದೆಲ್ಲ ಸುಳ್ಳು. ಅವರು ಬಿಜೆಪಿಗೆ ಬಂದರೆ ಸೇರಿಸಿಕೊಳ್ಳುವುದು ಬಿಡುವುದು ವರಿಷ್ಠರಿಗೆ ಬಿಟ್ಟವಿಚಾರ ಎಂದು ಹೇಳಿದರು.