ತನಿಖೆ ಆಗದೆ ಬಿಲ್ ಇಲ್ಲ, ತಪ್ಪು ಮಾಡದವರಿಗೆ ಬಿಲ್ ಬಿಡುಗಡೆ ಸಮಸ್ಯೆಯಾಗಲ್ಲ: ಸಿದ್ದು
ಗುತ್ತಿಗೆದಾರರ ವಿಚಾರದಲ್ಲಿ ಬಿಜೆಪಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಅವರನ್ನು 40 ಪರ್ಸೆಂಟ್ ಕಮಿಷನ್‌ಗಾಗಿಯೇ ಜನ ತಿರಸ್ಕರಿಸಿದ್ದಾರೆ. ನಾವು ಅಂದು ಮಾಡಿರುವ ಆರೋಪ ಸಾಬೀತು ಮಾಡಬೇಕಿದೆ. ಅದಕ್ಕಾಗಿ ನಾಲ್ಕು ಟೀಂ ತನಿಖೆ ಮಾಡುತ್ತಿದೆ. ನಡೆದಿರುವ ಕಾಮಗಾರಿಗಳೆಲ್ಲ ಮೂರು ವರ್ಷದ ಹಿಂದೆ ಕೊನೆಗೊಂಡಿವೆ. ಈಗ ಬಿಲ್‌ಗಾಗಿ ಆತುರ ಪಟ್ಟರೆ ಹೇಗೆ? ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು(ಆ.13): ಗುತ್ತಿಗೆದಾರರ ಬಿಲ್ ಬಾಕಿ ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 40 ಪರ್ಸೆಂಟ್ ಕಮಿಷನ್ ಆರೋಪದ ಬಗ್ಗೆ ತನಿಖೆಯಾಗದೆ ಬಿಲ್ ಹೇಗೆ ಬಿಡುಗಡೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಕಮಿಷನ್ ಆರೋಪಕ್ಕೆ ಸಂಬಂಧಿಸಿ ತನಿಖೆ ಪ್ರಗತಿಯಲ್ಲಿದೆ. ತಪ್ಪು ಮಾಡದವರಿಗೆ ಬಿಲ್‌ನಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ. ತಪ್ಪು ಮಾಡಿದವರಿಗೆ ಆ ಭಯ ಇರುತ್ತದೆ ಎಂದು ಹೇಳಿದರು.
ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ಗುತ್ತಿಗೆದಾರರ ವಿಚಾರದಲ್ಲಿ ಬಿಜೆಪಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಅವರನ್ನು 40 ಪರ್ಸೆಂಟ್ ಕಮಿಷನ್‌ಗಾಗಿಯೇ ಜನ ತಿರಸ್ಕರಿಸಿದ್ದಾರೆ. ನಾವು ಅಂದು ಮಾಡಿರುವ ಆರೋಪ ಸಾಬೀತು ಮಾಡಬೇಕಿದೆ. ಅದಕ್ಕಾಗಿ ನಾಲ್ಕು ಟೀಂ ತನಿಖೆ ಮಾಡುತ್ತಿದೆ. ನಡೆದಿರುವ ಕಾಮಗಾರಿಗಳೆಲ್ಲ ಮೂರು ವರ್ಷದ ಹಿಂದೆ ಕೊನೆಗೊಂಡಿವೆ. ಈಗ ಬಿಲ್‌ಗಾಗಿ ಆತುರ ಪಟ್ಟರೆ ಹೇಗೆ? ಎಂದರು.
ಸರ್ಕಾರದ 6ನೇ ಗ್ಯಾರಂಟಿ ವಕೀಲರ ರಕ್ಷಣೆ ಕಾಯ್ದೆ: ಸಿದ್ದರಾಮಯ್ಯ ಭರವಸೆ
ಶಾಸಕರಿಗೂ ಸ್ಥಾನ:
ನಿಗಮ-ಮಂಡಳಿಗಳ ನೇಮಕಾತಿಯಲ್ಲಿ ಶಾಸಕರಿಗೂ ಸ್ಥಾನ ಕೊಡಬೇಕಿದೆ. ಶಾಸಕರಿಗೆ ಹಾಗೂ ಕಾರ್ಯಕರ್ತರಿಗೆ ಯಾವ ಅನುಪಾತದಲ್ಲಿ ಅಧಿಕಾರ ಹಂಚಿಕೆ ಮಾಡಬೇಕು ಎಂಬ ಬಗ್ಗೆ ಸಮಿತಿ ತೀರ್ಮಾನ ಮಾಡುತ್ತದೆ ಎಂದರು.
ನನ್ನ ಎರಡೂ ಜನ್ಮ ದಿನಾಂಕ ತಪ್ಪು: ಸಿದ್ದು
ತಮ್ಮ ಜನ್ಮ ದಿನಾಂಕ ಆ.3, ಆ.12 ಎರಡೂ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಮೈಸೂರು ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮದವರು ಶುಭಾಶಯ ಕೋರಿದ್ದಕ್ಕೆ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದರು. ಒಂದು ನಮ್ಮ ಮೇಷ್ಟು್ರ ಬರೆದಿರೋದು, ಇನ್ನೊಂದು ನಮ್ಮ ಅಪ್ಪ ಅಂದಾಜಿನಲ್ಲಿ ಬರೆಸಿರೋದು. ಹೀಗಾಗಿ ಎರಡು ದಿನಾಂಕವೂ ತಪ್ಪು. ನನ್ನ ಜನ್ಮ ದಿನಾಂಕ ಸರಿಯಾಗಿ ಗೊತ್ತಿಲ್ಲ. ಹೀಗಾಗಿ ನನಗೆ ಜನ್ಮದಿನಾಚರಣೆಯಲ್ಲಿ ಯಾವ ಆಸಕ್ತಿಯೂ ಇಲ್ಲ ಎಂದರು.
ಬಿಬಿಎಂಪಿ ಬೆಂಕಿ ಪ್ರಕರಣ: ಬಿಬಿಎಂಪಿಯಲ್ಲಿ ಶುಕ್ರವಾರ ಬೆಂಕಿ ಬಿದ್ದ ಪ್ರಕರಣ ಸಂಬಂಧ ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದೇನೆ. ಶೇ.40ಕ್ಕಿಂತ ಕಡಿಮೆ ಗಾಯವಾಗಿರುವವರಿಗೆ ತೊಂದರೆ ಇಲ್ಲ. ಒಬ್ಬರಿಗೆ ಶೇ.40ಕ್ಕಿಂತ ಹೆಚ್ಚು ಗಾಯವಾಗಿದೆ. ಎಲ್ಲಾ ಗಾಯಾಳುಗಳಿಗೂ ಅತ್ಯುತ್ತಮ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದೇನೆ ಎಂದರು.