ಬೆಂಗಳೂರು (ನ.08):  ಅಂತರ್ಜಲ ಬರಿದು ಮಾಡುತ್ತದೆ ಎಂಬ ಕಾರಣದಿಂದ ಕಳೆದ 3 ವರ್ಷಗಳ ಹಿಂದೆ ನೀಲಗಿರಿ ಬೆಳೆಯುವುದಕ್ಕೆ ನಿಷೇಧ ಹೇರಿದ್ದ ರಾಜ್ಯ ಸರ್ಕಾರ ಮತ್ತೆ ಅವಕಾಶ ನೀಡಲು ಮುಂದಾಗಿರುವುದು ಪರಿಸರವಾದಿಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ನೀಲಗಿರಿ ಬೆಳೆಯುವ ಭಾಗಗಳಲ್ಲಿ ರೈತರು ತೀವ್ರ ತೊಂದರೆ ಅನುಭವಿಸುತ್ತಿರುವ ಬಗ್ಗೆ ಹಲವು ಅಧ್ಯಯನಗಳಲ್ಲಿ ತಿಳಿದು ಬಂದಿದೆ. ಆದರೂ, ನೀಲಗಿರಿ ಬೆಳೆಯಲು ಅವಕಾಶ ನೀಡುತ್ತಿರುವುದು ಮೂರ್ಖತನದ ನಿರ್ಧಾರ. ಸರ್ಕಾರದ ಈ ಚಿಂತನೆ ರೈತರನ್ನು ಸಂಕಷ್ಟಕ್ಕೆ ದೂಡುವ ಪ್ರಕ್ರಿಯೆಯಾಗಿದೆ ಎಂದು ಪರಿಸರ ವಿಜ್ಞಾನಿಗಳು ಆರೋಪಿಸಿದ್ದಾರೆ.

ನೀಲಗಿರಿ ಭೂಮಿಯ ಸುಮಾರು 50 ಅಡಿಗೂ ಹೆಚ್ಚು ಭಾಗದಿಂದ ನೀರನ್ನು ಹೀರಿಕೊಳ್ಳಲಿದೆ. ಬಯಲು ಸೀಮೆ ಸೇರಿದಂತೆ ನೀಲಗಿರಿ ಬೆಳೆಸಿದ ಕಾರಣಕ್ಕೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟಕುಸಿದಿತ್ತು. ಅಲ್ಲದೆ, ಅರಣ್ಯದಲ್ಲಿ ನೀಲಗಿರಿಯಿಂದ ಕಾಡ್ಗಿಚ್ಚು ಬೇಗ ಹರಡುತ್ತಿತ್ತು. ಈ ಕಾರಣದಿಂದ 2017ರಲ್ಲಿ ರಾಜ್ಯದಲ್ಲಿ ನೀಲಗಿರಿ ಬೆಳೆಯುವುದಕ್ಕೆ ನಿಷೇಧ ಹೇರಲಾಗಿತ್ತು.

ದೀಪಾವಳಿ ಹಬ್ಬ ಹೇಗೆ ಆಚರಣೆ ಮಾಡ್ಬೇಕು? ಸರ್ಕಾರದಿಂದ ಗೈಡ್ ಲೈನ್ಸ್

ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ) ಪುನಶ್ಚೇತನಕ್ಕೆ ಸರ್ಕಾರ ಕಾಳಜಿ ವಹಿಸಿದೆ. ಕಾರ್ಖಾನೆ ಮುನ್ನಡೆಸಲು ಕಚ್ಚಾÓ ಾಮಗ್ರಿಯಾಗಿ ಮರದ ದಿಮ್ಮಿಗಳು ಬೇಕಾಗಿದೆ. ಇದಕ್ಕಾಗಿ ನೀಲಗಿರಿ ಮೇಲಿನ ಅವಲಂಬನೆ ಹೆಚ್ಚಿದೆ. ಆದರೆ, ನೀಲಗಿರಿಯನ್ನು ಕಾನೂನುಬದ್ಧವಾಗಿ ಬೆಳೆಸಲು ತಾಂತ್ರಿಕ ಅಡ್ಡಿ ಎದುರಾಗಿದೆ. ಈ ತೊಡಕು ನಿವಾರಿಸಲು ಕಳೆದ ಜು.20ರಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಲೆನಾಡಿಗೆ ಸೀಮಿತವಾಗಿ ನಿಷೇಧ ತೆರವಿಗೆ ಸೂಚಿಸಿದ್ದಾರೆ. ಇದೇ ಕಾರಣದಿಂದ ಅರಣ್ಯ ಪಡೆಯ ಮುಖ್ಯಸ್ಥರು ಆಗಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೀಲಗಿರಿ ಬೆಳೆಸುವ ನಿಷೇಧದ ಆದೇಶ ಹಿಂಪಡೆಯುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಫುಟ್ಬಾಲ್‌ ಆಡೋ ಹಸುವನ್ನು ನೋಡಿದ್ದೀರಾ ವೈರಲ್ ಆಯ್ತು ವಿಡಿಯೋ ..

ಆದರೆ, ಈ ಕುರಿತು ಪ್ರತಿಕ್ರಿಯೆಗಾಗಿ ಅರಣ್ಯ ಇಲಾಖೆಯ ಅಧಿಕಾರಗಳನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ ಸಾಧ್ಯವಾಗಲಿಲ್ಲ.

ರೈತರು ವಾರ್ಷಿಕ 3 ಬೆಳೆ ಬೆಳೆಯುತ್ತಿದ್ದು, 1.54 ಲಕ್ಷ ಲಾಭ ಗಳಿಸುತ್ತಿದ್ದಾರೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಆದರೆ, ಸರ್ಕಾರ ಒಂದು ಕೈಗಾರಿಕೆ ಉಳಿಸಲು ಸಾವಿರಾರು ರೈತರ ಜೀವನಕ್ಕೆ ತೊಂದರೆ ನೀಡಲು ಮುಂದಾಗಿದೆ.

- ಟಿ.ವಿ.ರಾಮಚಂದ್ರ, ಪರಿಸರ ವಿಜ್ಞಾನಿ.

ನೀಲಗಿರಿ ಬೆಳೆಯುವ ಪ್ರದೇಶದಲ್ಲಿ ಸುದೀರ್ಘ ಅಧ್ಯಯನ ನಡೆಸಲಾಗಿದೆ. ಈ ಭಾಗಗಳಲ್ಲಿ ದಿನ ಕಳೆದಂತೆ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಜೊತೆಗೆ, ಹೆಚ್ಚು ನೀರು ಹೀರುವ ನೀಲಗಿರಿ ಬೆಳೆಯುವ ಪ್ರದೇಶದ ಸುತ್ತಮುತ್ತಲ ಯಾವುದೇ ಬೆಳೆ ಬೆಳೆಯಲು ಆಗುವುದಿಲ್ಲ. ನೀಲಗಿರಿ ಬೆಳೆಯುವ ಪ್ರದೇಶಗಳಲ್ಲಿನ ರೈತರು ವಾರ್ಷಿಕ ಒಂದೇ ಬೆಳೆ ಬೆಳೆಯುತ್ತಿದ್ದು, ಕೇವಲ 32 ಸಾವಿರ ರು.ಗಳನ್ನು ಮಾತ್ರ ಗಳಿಸುತ್ತಿದ್ದಾರೆ. ಆದರೆ, ಇತರೆ ಭಾಗಗಳಲ್ಲಿನ ರೈತರು ವಾರ್ಷಿಕ 3 ಬೆಳೆ ಬೆಳೆಯುತ್ತಿದ್ದು, 1.54 ಲಕ್ಷ ಲಾಭ ಗಳಿಸುತ್ತಿದ್ದಾರೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಆದರೆ, ಸರ್ಕಾರ ಒಂದು ಕೈಗಾರಿಕೆ ಉಳಿಸಲು ಸಾವಿರಾರು ರೈತರ ಜೀವನಕ್ಕೆ ತೊಂದರೆ ನೀಡಲು ಮುಂದಾಗಿದೆ.