Asianet Suvarna News Asianet Suvarna News

ಶಿವಮೊಗ್ಗದ ಈ ವ್ಯಕ್ತಿಯ ಸುಳಿವು ಕೊಟ್ಟವರಿಗೆ 3 ಲಕ್ಷ ಬಹುಮಾನ!

ಶಿವಮೊಗ್ಗ ಉಗ್ರನ ಸುಳಿವಿತ್ತರೆ 3 ಲಕ್ಷ ಬಹುಮಾನ| -ಎನ್‌ಐಎನಿಂದ ಘೋಷಣೆ| ಅಬ್ದುಲ್‌ ಮಥೀನ್‌ಗೆ ಶೋಧ| ಈತ ಐಸಿಸ್‌ನಿಂದ ಪ್ರೇರಿತವಾಗಿ ಉಗ್ರ ಸಂಘಟನೆ ಕಟ್ಟಿದ ಆರೋಪ

NIA declares Rs 3 lakh cash reward for info on Abdul Mateen Taaha of Shivamogga
Author
Bangalore, First Published May 14, 2020, 7:12 AM IST

ನವದೆಹಲಿ(ಮೇ.14):  ಜಗತ್ತಿನ ಕುಖ್ಯಾತ ಉಗ್ರ ಸಂಘಟನೆಗಳಲ್ಲಿ ಒಂದಾಗಿರುವ ಐಸಿಸ್‌ನಿಂದ ಪ್ರೇರಣೆಗೊಂಡು ಬೆಂಗಳೂರಿನಲ್ಲಿ ಉಗ್ರ ಸಂಘಟನೆ ಕಟ್ಟಿದ ಪ್ರಕರಣದಲ್ಲಿ ಆರೋಪಿಯಾಗಿರುವ ಶಿವಮೊಗ್ಗ ಮೂಲದ ಯುವಕನ ಕುರಿತು ಸುಳಿವು ನೀಡಿದವರಿಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) 3 ಲಕ್ಷ ರು. ಬಹುಮಾನ ಘೋಷಣೆ ಮಾಡಿದೆ.

ಶಿವಮೊಗ್ಗದ ಅಬ್ದುಲ್‌ ಮಥೀನ್‌ (26) ಎಂಬಾತನ ವಿರುದ್ಧ ಭಾರತೀಯ ದಂಡ ಸಂಹಿತೆ ಹಾಗೂ ಅಕ್ರಮ ಚಟುವಟಿಕೆ (ತಡೆ) ಕಾಯ್ದೆಯಡಿ ಎನ್‌ಎಐ ಪ್ರಕರಣ ದಾಖಲಿಸಿದೆ. ಆತ ತಲೆಮರೆಸಿಕೊಂಡಿರುವುದರಿಂದ ಬಂಧನ ಸಾಧ್ಯವಾಗುತ್ತಿಲ್ಲ. ಹೀಗಾಗಿ ಆತನ ಬಂಧನಕ್ಕೆ ಕಾರಣವಾಗುವಂತಹ ಸುಳಿವು ನೀಡಿದವರಿಗೆ 3 ಲಕ್ಷ ರು. ನೀಡುವುದಾಗಿ ಬುಧವಾರ ಪ್ರಕಟಿಸಿದೆ.

ದಾವೂದ್‌ ಜೊತೆಗೂಡಿ ಭಾರತದಲ್ಲಿ ದಾಳಿಗೆ ಲಷ್ಕರ್‌ ಉಗ್ರ ಸಂಚು!

ಯಾರು ಈತ?:

ಮೆಹಬೂಬ್‌ ಪಾಷಾ, ಖಾಜಾ ಮೊಯಿದ್ದೀನ್‌ ಹಾಗೂ ಆತನ ಸಹಚರರು ತಮಿಳುನಾಡಿನ ಹಿಂದು ಸಂಘಟನೆಯ ನಾಯಕರೊಬ್ಬರನ್ನು ಹತ್ಯೆ ಮಾಡಿದ್ದರು. ಇದೇ ತಂಡ ಐಸಿಸ್‌ನಿಂದ ಪ್ರೇರಣೆ ಪಡೆದು ಅಲ್‌- ಹಿಂದ್‌ ಐಸಿಸ್‌ ಸಂಘಟನೆಯನ್ನು ಬೆಂಗಳೂರಿನಲ್ಲಿ ಕಟ್ಟಿತ್ತು. 2019ರಲ್ಲಿ ಬೆಂಗಳೂರಿನ ಗುರಪ್ಪನಪಾಳ್ಯದ ತನ್ನ ನಿವಾಸದಲ್ಲಿ ಪಾಷಾ ಹಲವಾರು ಸಭೆಗಳನ್ನು ನಡೆಸಿದ್ದ. ಯುವಕರನ್ನು ನೇಮಕ ಮಾಡಿಕೊಂಡು, ಮೂಲಭೂತವಾದಿಗಳನ್ನಾಗಿಸಿ, ಭಯೋತ್ಪಾದಕ ಚಟುವಟಿಕೆ ನಡೆಸುವುದು ಹಾಗೂ ಆಷ್ಘಾನಿಸ್ತಾನ/ಸಿರಿಯಾದಲ್ಲಿನ ಐಸಿಸ್‌ಗೆ ಸೇರಿಸುವುದು ಈ ಗ್ಯಾಂಗ್‌ನ ಉದ್ದೇಶ ಆಗಿತ್ತು.

ಭಾರತೀಯ ಸೇನಾ ಗುಂಡಿಗೆ ಹಿಜ್ಬುಲ್ ಕಮಾಂಡರ್ ಬಲಿ; ಕಾಶ್ಮೀರದಲ್ಲಿ ಇಂಟರ್ನೆಟ್ ಸ್ಥಗಿತ!

ಈ ಪ್ರಕರಣ ಸಂಬಂಧ ಪಾಷಾ, ಸಲೀಮ್‌ ಖಾನ್‌, ಮೊಹಮ್ಮದ್‌ ಝೈದ್‌ ಎಂಬುವರು ಸೇರಿ 12 ಮಂದಿಯ ಬಂಧನವಾಗಿತ್ತು. ಸಲೀಂ ಹಾಗೂ ಝೈದ್‌ ಮೂಲಕ ಪಾಷಾ ಸಂಪರ್ಕಕ್ಕೆ ಮಥೀನ್‌ ಬಂದಿದ್ದ. ಆನ್‌ಲೈನ್‌ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ. ಆದರೆ ಆತ ತಲೆಮರೆಸಿಕೊಂಡಿದ್ದಾನೆ ಎಂದು ಎನ್‌ಐಎ ತಿಳಿಸಿದೆ.

Follow Us:
Download App:
  • android
  • ios